ವಿಶೇಷ ಲೇಖನ :- ಸಿ.ಆರ್ ಶಿವಕುಮಾರ್ “ಪ್ರೇಮೋತ್ಸವ“
ಮಧುರವಾದ ಪ್ರೇಮದಲ್ಲಿ ಹೃದಯವನ್ನು ಬೆಸೆದು ಮನಸ್ಸಗಳಿಂದ ತುಂಬಿದ ಪ್ರೀತಿ, ವಾತ್ಸಲ್ಯವನ್ನು ಮರೆಸಿ. ಅಮೂಲ್ಯವಾದ ಜೀವನದಲ್ಲಿ ಪ್ರೀತಿಯೆಂಬ ಮಾಹೆಯಲ್ಲಿ ಸಿಲುಕಿ ಅದನ್ನು ಅರ್ಥೈಸಿಕೊಳ್ಳದಿರುವ ನನ್ನ ನಲ್ಮೇಯ ಹೃದಯಗಳ ಓ ಪ್ರೀತಿಯ ಪ್ರೇಮಿಗಳೇ ನಿಮಗಿದೋ ನನ್ನ ನುಡಿಮುತ್ತುಗಳ ಜೊತೆಯಲ್ಲಿ ನನ್ನೆಲ್ಲಾ ಪ್ರೇಮಿ ವೃಂದದವರಿಗೆಲ್ಲರಿಗೂ ನನ್ನದೊಂದು ಪ್ರೀತಿಯ ಶುಭಾಶಯಗಳು🌹. ವರ್ಷದಿಂದ ವರ್ಷಕ್ಕೆ ಪ್ರೇಮಿಗಳ ದಿನಾಚರಣೆಯಲ್ಲಿಯೂ ಒಂದಿಷ್ಟೂ ಅದ್ದೂರಿತನ, ವೈಭವ, ಜಾಲಿತನ ಎಲ್ಲವೂ ಕಂಡುಬರುತ್ತದೆ. ಗುಲಾಬಿ ಹೂವುಗಳನ್ನು ನೀಡುವ ಕೈಯಲ್ಲಿ ಅದ್ದೂರಿತನವಿರುತ್ತದೆಯಾದರೂ ಹೃದಯದಲ್ಲಿ ಪ್ರೀತಿಗೆ ಬರವಿರುವುದು ಎದ್ದು ಕಾಣುತ್ತದೆ. ಗುಲಾಬಿ ಹೂವಿನ ಮೂಲಕ ನೈವೇದಿಸುತ್ತಿದ್ದ ಕಾಲವಿತ್ತು. ನಾನು ನಿನ್ನ ಇಷ್ಟ ಪಡ್ತಾ ಇದೀನಿ(I LOVE YOU)ಅಂತ ಹೇಳಲು ಧೈರ್ಯ ಸಾಲದೇ ತಮ್ಮಲ್ಲಿಯೇ ತಮ್ಮ ಮನಸ್ಸಿನಲ್ಲಿ ಮುಚ್ಚಿಟ್ಟುಕೊಂಡು ದಿನ ಕಳೆಯುತ್ತಿದ್ದ ಕಾಲವೂ ಇತ್ತು. ಈಗ ಎಲ್ಲಾ ಬದಲಾಗಿದೆ. ಮೊಬೈಲ್ ನಂತಹ ಸಾಮಾಜಿಕ ಜಾಲತಾಣಗಳು ಬಂದ ಬಳಿಕ ಎಲ್ಲವೂ ಸಲೀಸಾಗಿ ಹೋಗಿದೆ. ಆದರೆ ಅವರ ಜೊತೆ-ಜೊತೆಯಲ್ಲಿ ಬಹಳಷ್ಟು ಜನರ ಪ್ರೀತಿ-ಪ್ರೇಮವೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದೆಲ್ಲಾ ಟೈಂಪಾಸ್ ಎಂಬಂತೆ ಮೊದಲೇ ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ.ಸಂಸ್ಕೃತಿ ಹೆಚ್ಚಾಗುತ್ತಿರುವುದರಿಂದ ಪ್ರೇಮಿಗಳ ಆಚರಣೆಗೆ ಸೀಮಿತವಾಗಿ ಪ್ರೇಮಿಗಳನ್ನು ಬೇರೆ ದಿಕ್ಕಿನತ್ತ ಕೊಂಡೊಯ್ಯತ್ತಿದೆ.ಪಾಶ್ಚಿಮಾತ್ಯರ ಪ್ರಭಾವ ಇಲ್ಲಿನ ಯುವ ಜನತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಬಹುದು.ಯುವಕ -ಯುವತಿಯರ ಸಾಮರ್ಥ್ಯ ಅವರಲ್ಲಿರುವ ಕಾರಣ ಯಾರ ಮುಲಾಜಿಗೂ ಒಳಗಾಗದೇ ನಮ್ಮ ಬದುಕು ನಮಗೆ ಎಂಬಂತೆ ಬದುಕುತ್ತಿದ್ದಾರೆ. ಅದು ಎಂಜಾಯ್ ಎಂಬಂತೆ ಬಾಸವಾಗುತ್ತಿದೆ. ತಿಂದುಂಡು ಓಡಾಡಿ,ಮೈಮನ ಉಲ್ಲಾಸಗೋಳಿಸುವುದಕಷ್ಟೇ ಪ್ರೀತಿಯೂ ಸೀಮಿತವಾಗಿದಿಯೇನೋ ಎಂಬಂತೆ ದಡ್ಡತನವನ್ನು ತೋರುತ್ತಿರುವುದು ಪ್ರೀತಿಗೆ ಮಾಡುವ ಬಹುದೊಡ್ಡ ಮೋಸ ಎನ್ನಬಹುದು. ಈಗ ಗುಲಾಬಿ ಹೂವು ಕೊಟ್ಟರು ಕೊಡುವ ತಮ್ಮ ಮನದ ಹೃದಯವು ಖಾಲಿಯಾಗಿದೆ. ಎಲ್ಲವೂ ತೋರಪಡಿಕೆಯ ನಾಟಕವಾಗುತ್ತಿದೆ. ಇದರ ಪರಿಣಾಮವೇ ವಂಚನೆ, ಮೋಸ, ಕೊಲೆ, ಆತ್ಮಹತ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ.ಹೃದಯಗಳ ಮಿಲನಕ್ಕಿಂತ ದೇಹಗಳ ಮಿಲನ ಹೆಚ್ಚಾಗುತ್ತಿದೆ ಎಂದರೆ ತಪ್ಪಾಗಲಾರದು ಅದು ಅಲ್ಲದೇ ಬ್ಲಾಕ್ ಮೇಲ್ ಗೊಳಗಾಗಿ ಪ್ರೀತಿಯ ಬದುಕು ಮೂರಬಟ್ಟೆಯಾಗುತ್ತಿದೆ ಎಂದರೆ ಆಶ್ಚರ್ಯ ಪಡಬೇಕ್ಕಿಲ್ಲ.ಹಿಂದೆಲ್ಲಾ ಪ್ರೇಮಿಗಳ ದಿನದಂದು ಎಲ್ಲವನ್ನು ಗುಲಾಬಿಯೇ ಹೇಳುತ್ತಿತ್ತು. “ನಾ ನಿನ್ನ ಪ್ರೀತಿಸುವೆ”ಎಂದು ಯಾಕೆಂದರೆ ಆ ಗುಲಾಬಿಯಲ್ಲಿ ಅಷ್ಟು ಪರಿಶುದ್ಧವಾದ ಪ್ರೀತಿ, ನಂಬಿಕೆ ಮತ್ತು ಶಕ್ತಿ ಇತ್ತು .ಗುಲಾಬಿಯು ಪ್ರೀತಿಸುವ ಎಷ್ಟೋ ಪಿಸುಗುಡುವ ಹೃದಯಗಳಿಗೆ ಸಂಕೇತವಾಗಿ ಎಲ್ಲರನ್ನೂ ಸೆಳೆಯುತ್ತಿತ್ತು. “ಹಳದಿ”ಬಣ್ಣದ ಹೂವು ನಾನು ನಿನ್ನ ಸ್ನೇಹವನ್ನು ಬಯಸುತ್ತೇನೆ ಎಂದರೆ..? “ಬಿಳಿ”ಗುಲಾಬಿ ನಿರಂತರ ಸ್ನೇಹದ ಸಂಪರ್ಕದಲ್ಲಿರುತ್ತೇನೆಂದು, “ತಿಳಿ”ಗುಲಾಬಿ ಮನಸ್ಸಿನ ಭಾವನೆಗಳನ್ನು ಅಂಕುರೋಡೆದ ಗರಿಕೆಯಂತೆ ಮೈದುಂಬಿ ಹರಿಯುವ ತಿಳಿನೀರಿನ ಗಂಗೆಯಂತೆ ವಿಶಾಲವಾಗಿ ಕಾಣಿಸುವಂತಹ ಸಂಕೇತದಂತೆ ಕಾಣುತ್ತಿತ್ತು. ಕಾಲ ಉರುಳಿದರು ಸಹ ಗುಲಾಬಿ ಹೂವು ಹಾಗೆಯೇ ಇದೆ. ಆದರೆ ಅದನ್ನು ಕೊಡುವವರ ಮನಸ್ಸು ಬದಲಾಗಿದೆ. ಕೊಟ್ಟ ಹೂವನ್ನು ಬಾಡದೆ ಜೋಪಾನವಾಗಿ ಕಾಪಾಡುವ ಮನಸ್ಸು ಇಲ್ಲವಾಗಿದೆ. ಹಾಗಾಗಿ ಎಲ್ಲೋ ಒಂದು ಕಡೆ ಪ್ರೀತಿ ಪ್ರೇಮದ ಹಾದಿ ತಪ್ಪುತ್ತಿದೆ.ಅದು ಏನೇ ಇರಲಿ ಪ್ರೀತಿ ನಿರಂತರ,ಅದುವೇ ಶಾಶ್ವತ, ಅದರಾಚೆಗೆ ಎಲ್ಲವೂ ನಶ್ವರ..
✍️ ವಿಶೇಷ ಲೇಖನ :- ಸಿ.ಆರ್ ಶಿವಕುಮಾರ್