ಗಾಡಗೋಳಿಯಲ್ಲಿ ಎನ್ಎಸ್ಎಸ್ ವಿಶೇಷ ಶಿಬಿರ ಮುಕ್ತಾಯ.
ಹೊಳೆಆಲೂರ: ಗ್ರಾಮೀಣಾಭಿವೃದ್ಧಿ ಪಂಚಾಯತರಾಜ್ ಇಲಾಖೆ ,ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಎನ್‌ಎಸ್‌ಎಸ್ ಕೋಶ, ಜಿಲ್ಲಾಪಂಚಾಯತ ಗದಗ, ತಾಲೂಕ ಪಂಚಾಯತ ರೋಣ , ಗ್ರಾಮ ಪಂಚಾಯತ ಹೊಳೆ-ಮಣ್ಣೂರ ಸಂಯುಕ್ತಾಶ್ರಯದಲ್ಲಿ ಶ್ರೀಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿಯ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್ ಎಸ್ ಎಸ್ ಘಟಕ ೧ ಮತ್ತು ೨ ರ ವತಿಯಿಂದ ದತ್ತುಗ್ರಾಮ ಗಾಡಗೋಳಿ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಮುಕ್ತಾಯವಾಯಿತು. ಅಧ್ಯಕ್ಷತೆಯನ್ನು ಪ್ರಾಚಾರ್ಯಡಾ.ಎಂ.ಎನ್.ಕಡಪಟ್ಟಿ ವಹಿಸಿದ್ದರು. ಅತಿಥಿಗಳಾಗಿ ಎಸ್.ವಾಯ್.ಗಾಣಿಗೇರ, ಡಾ.ಎಸ್.ಬಿ.ಹಿರೇಗೌಡ್ರ ಎಸ್.ಡಿ.ಎಂ.ಸಿ ಅಧ್ಯಕ್ಷ ಯಲ್ಲಪ್ಪ ತಳವಾರ, ಸಿದ್ದು ಬೊಮ್ಮನಗೌಡ್ರ, ಮಂಜುನಾಥ ಬಸರಕೋಡ, ನಿವೃತ್ತ ಅಧಿಕ್ಷಕ ಎಂ.ವಿ.ಪಾಟೀಲ ಮುಖ್ಯಾಪಾಧ್ಯಾಯ ಎಂ.ಡಿ.ಗಾಡಗೋಳಿ ಆಗಮಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ.ಎಸ್.ವಾಯ್ ಪೂಜಾರ ಪ್ರಾಸ್ತಾವಿಕವಾಗಿ ಶಿಬಿರ ಕುರಿತು ಮಾತನಾಡಿ ಶಿಬಿರದಲ್ಲಿ ಗ್ರಾಮದಲ್ಲಿ ಒಂದು ವಾರಗಳ ಕಾಲ ಕೈಗೊಂಡ ವಿವಿಧ ಚಟುವಟಿಕೆ ಕಾರ್ಯಕ್ರಮಗಳು, ಗ್ರಾಮದಲ್ಲಿ ಜನಜನಜಾಗ್ರತಿ ಜಾಥಾ ಕಾರ್ಯಕ್ರಮಗಳ ಕುರಿತು ಹೇಳಿ ತಮಗೆ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಎಸ್.ವಾಯ್.ಗಾಣಿಗೇರ, ಡಾ.ಎಸ್.ಬಿ.ಹಿರೇಗೌಡರ ವಿದ್ಯಾರ್ಥಿಗಳ ಶ್ರಮದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಂದರ್ಭೋಚಿತ ಮಾತನಾಡಿದರು. ಪ್ರಾಚಾರ್ಯ ಡಾ.ಎಂ.ಎನ್.ಕಡಪಟ್ಟಿ ಮಾತನಾಡಿ ಗ್ರಾಮದ ಸರ್ವರೂ ಶಿಬಿರಾರ್ಥಿಗಳಿಗೆ ಸಹಕಾರ ನೀಡಿ ಗ್ರಾಮೀಣ ಜೀವನದ ಅನುಭವ ಪಡೆಯಲು ಸಹಾಯ ಮಾಡಿದ್ದಾರೆ. ಈ ಶಿಬಿರ ಅವರಿಗೆ ಹಲವಷ್ಟು ಹೊಸತನ್ನು ಕಲಿಸಿಕೊಟ್ಟಿದೆ ಎಂದರು. ಶಿಬಿರದ ಕುರಿತು ಲಾವಣ್ಯ ಗಂಗೋಜಿ, ರವಿಚಂದ್ರ ಕುರಿ, ಎನ್ ಎಸ್ ಎಸ್ ಯೋಜನಾಧಿಕಾರಿ ಡಾ.ಕುಮಾರ ಹಂಜಗಿ ಅನಿಸಿಕೆಗಳನ್ನು ಹಂಚಿಕೊಂಡು ಶಾಲಾ ಮುಖ್ಯೋಪಾಧ್ಯಾಯರು ಸಿಬ್ಬಂದಿವರ್ಗ, ಎಸ್.ಡಿ.ಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮದ ಸಮಸ್ತ ಗುರುಹಿರಿಯರ ಸಹಕಾರ ಕುರಿತು ಮಾತನಾಡಿದರು. ಮಧು ತಳವಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಎನ್‌ಎಸ್‌ಎಸ್ ಗೀತೆಯನ್ನು ಲಕ್ಷ್ಮಿ ಮಣ್ಣೂರ ಹಾಗೂ ಸಂಗಡಿಗರು ಹಾಡಿದರು. ಮಹಾದೇವಿ ಗೋಲಗೌಡ್ರ ಸ್ವಾಗತಿಸಿದರೆ ಕೊನೆಯಲ್ಲಿ ರೇಖಾ ಕಲ್ಲನಗೌಡ್ರ ವಂದಿಸಿದರು, ಮಧು ಗಾಣಿಗೇರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸರ್ವ ಸಿಬ್ಬಂದಿವರ್ಗ,ಶಿಬಿರಾರ್ಥಿಗಳು, ಗ್ರಾಮದ ಪ್ರಮುಖರು ಹಾಜರಿದ್ದರು.
ವರದಿ:ಡಾ.ಪ್ರಭು ಗಂಜಿಹಾಳ.