ಕಾರ್ಮಿಕ ಸಂಘ–ಟಿಯುಸಿಐ ತಾಲೂಕು ಸಮಿತಿ ವತಿಯಿಂದ ತಹಶೀಲ್ದಾರರ ಕಛೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ.
ಪೆಬ್ರುವರಿ 6 ಮತ್ತು 7 ರಂದು ಕರ್ನಾಟಕ ರಾಜ್ಯ ವಸತಿ ನಿಲಯಗಳ ಕಾರ್ಮಿಕ ಸಂಘ-ಟಿಯುಸಿಐ ತಾಲೂಕು ಸಮಿತಿ ವತಿಯಿಂದ ತಹಶೀಲ್ದಾರರ ಕಛೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು 14 ತಿಂಗಳಕ್ಕೂ ಹೆಚ್ಚೂ ಬಾಕಿ ವೇತನ ಪಾವತಿ ಸೇರಿದಂತೆ ಇತರೆ ಬೇಡಿಕೆಗಳನ್ನು ಇಟ್ಟುಕೊಂಡು ಕೈಗೊಂಡ ಹೋರಾಟಕ್ಕೆ ದಲಿತಪರ, ಹಾಗೂ ದಲಿತ ವಿದ್ಯಾರ್ಥಿ ಪರಿಷತ್, ಸಂಘಟನೆಗಳು ಸಮಾನ ಮನಸ್ಕರು ಭಾಗವಹಿಸಿ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿದರು. ಜೊತೆಗೆ ಮಾಜಿ ಸಚಿವ ಹಾಗೂ ಶಾಸಕರಾದ, ಸನ್ಮಾನ್ಯ ಶ್ರೀ ವೇಂಕಟರಾವ್ ನಾಡಗೌಡ ದರಣಿ ಸ್ಥಳಕ್ಕೆ ಆಗಮಿಸಿ ಸುದೀರ್ಘವಾಗಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ನಂತರ 2ನೇ ದಿನ ಧರಣಿ ಬಿಡಾರಕ್ಕೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸನ್ಮಾನ್ಯ ಶ್ರೀ ಮಹೇಶ ಪೋತದಾರ, ತಾಲೂಕು ದಂಡಾಧಿಕಾರಿ, ಶ್ರೀ ಅರುಣ ಹೆಚ್.ದೇಸಾಯಿ, ಹಾಗೂ ತಾಲೂಕು ಸಮಾಜ ಕಲ್ಯಾಣಧಿಕಾರಿಣಿಯಾದ ಶ್ರೀಮತಿ ವಿಜಯಲಕ್ಷ್ಮೀ ನಮ್ಮ ಈ ಹೋರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನಲೆ ತಾತ್ಕಾಲಿಕವಾಗಿ ಹೋರಾಟವನ್ನು ಹಿಂಪಡೆಯಲಾಯಿತು. ಶಾಸಕರು ಒಳಗೊಂಡಂತೆ ಅಧಿಕಾರಿಗಳು ನೀಡಿದ ಭರವಸೆಯಂತೆ ಅದರಲ್ಲೂ ವಿಶೇಷವಾಗಿ ಮಾನ್ಯ ಶಾಸಕರು ಜಿಲ್ಲೆಯ ಇತಿಹಾಸದಲ್ಲೇ ನಮ್ಮ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಕಾರ್ಮಿಕರ ವೇತನ ಬಿಡುಗಡೆ ಮಾಡಿಸಿದ್ದು ಸಂಘವು ಗೌರವ ಪೂರ್ವಕವಾಗಿ ಸ್ವಾಗತಿಸುತ್ತಾ ಪತ್ರಿಕಾ ಪ್ರಕಟಣೆ ಮೂಲಕ ಅಭಿನಂದೆನೆಗಳನ್ನು ಸಲ್ಲಿಸುತ್ತಿದ್ದೇವೆ. ಎಂ.ಗಂಗಾಧರ ಗೌರವಾಧ್ಯಕ್ಷರು, ಜಿ ಅಮರೇಶ, ಜಿಲ್ಲಾಧ್ಯಕ್ಷರು ಟಿಯುಸಿಐ, ಮಹಾನಂದ, ಅಧ್ಯಕ್ಷರು, ಸಂತೋಷ ಬಾಲಿ, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಸತಿ ನಿಲಯಗಳ ಕಾರ್ಮಿಕ ಸಂಘ-ಟಿಯುಸಿಐ ತಾಲೂಕು ಸಮಿತಿ ಸಿಂಧನೂರು ಹಾಗೂ ಮಾಬುಸಾಬ ಬೆಳ್ಳಟ್ಟಿ ಅಧ್ಯಕ್ಷರು ಶ್ರಮಜೀವಿಬಹಮಾಲರ ಸಂಘ ಸಿಂಧನೂರು.
ವರದಿ- ಸಂಪಾದಕೀಯಾ.