ಹೈದರಾಬಾದ್ ನಲ್ಲಿ ನಡೆದ ತೆಲಂಗಾಣ ರಾಜ್ಯ ಸಮಿತಿಯ ವಿಶೇಷ ಸಭೆಯಲ್ಲಿ, CPIML ರೆಡ್ ಸ್ಟಾರ್ ನಲ್ಲೀದ್ದ 4 ಜಿಲ್ಲೆಯ ಪ್ರಮುಖ ಸಂಗಾತಿಗಳು CPIML RI ಸೇರಿದರು.
ಸಭೆಯಲ್ಲಿ ಹಂಚಿಕೊಂಡ ಸಂಕ್ಷಿಪ್ತ ವಿಷಯಗಳ ವಿಶ್ಲೇಷಣೆ. 1946 ರಿಂದ 1951 ರವರೆಗೆ ನಡೆದ ಮಹಾನ್ ತೆಲಂಗಾಣ ಕಮ್ಯೂನಿಸ್ಟ್ ಕ್ರಾಂತಿಕಾರಿ ರೈತ ಹೋರಾಟದ ಇತಿಹಾಸ ಪ್ರಪಂಚಾದ್ಯಂತ ಪ್ರಜ್ವಲಿಸಿದೆ, ಪ್ರಜ್ವಲಿಸುತ್ತಲಿದೆ. ತೆಲಂಗಾಣದ ರೈತ ಹೋರಾಟದಲ್ಲಿ ಮಡಿದ ಅಮರ ವೀರರ ನೆನಪುಗಳು ಚಿರಸ್ತಾಯಿಯಾಗಿವೆ. ಈಗಲೂ ದೇಶಾದ್ಯಂತ ಪ್ರತಿನಿತ್ಯ ನಡೆಯುವ ಹೋರಾಟ ಹಾಗೂ ಕಾರ್ಯಕ್ರಮಗಳಲ್ಲಿ “ಆ ವೀರರಿಗೆ” ಲಾಲ ಸಲಾಮ್ ಘೋಷಣೆಗಳು ಮೊಳಗುತ್ತಲಿವೆ. ಅದರೆ ಕೋಮುವಾದ, ದಾರ್ಮಿಕ ಮೂಲಭೂತವಾದ, ಪರಿಷ್ಕರಣಾವಾದ, ಅತಿರೇಕವಾದ, ಅರಾಜಕತವಾದ,ವ್ಯಕ್ತಿನಿಷ್ಟವಾದ ಇತ್ಯಾದಿ ಜನ ವಿರೋಧಿ ಸಿದ್ಧಾಂತದ ಹಿನ್ನೆಲೆಯಲ್ಲಿ ದೇಶಾದ್ಯಂತ ಕಮ್ಯೂನಿಸ್ಟ್ ಚಳುವಳಿಗೆ ಹಿನ್ನಡೆಯಾಗಿದೆ. ವೈಚಾರಿಕ ಭಿನ್ನಾಭಿಪ್ರಾಯಗಳಿಂದ ಹಲವು ಗುಂಪುಗಳಾಗಿ ಹೊಡೆದಿರುವ ಕಮ್ಯೂನಿಸ್ಟ್ ಶಕ್ತಿಗಳನ್ನು ಐಕ್ಯಗೊಳಿಸುವ ಕಾರ್ಯಗಳು ಕೂಡ ತೀವ್ರಗತಿಯಲ್ಲಿ ಮುಂದುವರೆದಿವೆ. ದಹಲಿ ರೈತರ ಐತಿಹಾಸಿಕ ಮಹಾನ ಚಳವಳಿ ಮತ್ತು ಹಲವು ಕಮ್ಯೂನಿಸ್ಟ್ ಸಂಘಟನೆಗಳು ಒಂದುಗೂಡುತ್ತಿರುವುದು, ಹೋರಾಟಗಾರರಲ್ಲಿ ಆಶಾದಾಯಕ ಭರವಶೆಯನುಂಟು ಮಾಡಿದೆ. CPI(ML) RI ತೆಲಂಗಾಣ ರಾಜ್ಯ ಸಮಿತಿ; ಮಾರ್ಕ್ಸ್ ವಾದ ಲೆನಿನ್ ಮವೋ ವಿಚಾರಧಾರೆಯ ರಾಜಕೀಯವನ್ನು ಜನರ ಮಧ್ಯ ಕೊಂಡೊಯ್ಯುವ ಕಾರ್ಯಕ್ಕೆ ಪ್ರಮುಖ ಆದ್ಯತೆ ಕೊಡಬೇಕಾಗಿದೆ. ಇಂದು ನಡೆದ ವಿಶೇಷ ಸಭೆಯಲ್ಲಿ CPIML ರೆಡ್ ಸ್ಟಾರ್ ನ 4 ಜಿಲ್ಲೆಯ ಪ್ರಮುಖ ಸಂಗಾತಿಗಳು, CPIML RI ಸೇರಿದರು.
ವರದಿ – ಸಂಪಾದಕೀಯಾ