ಫೆ25:ಕ.ಕಾ.ಪ.ಧ್ವನಿ ಸಂಘದ ರಾಜ್ಯ ಸಮ್ಮೇಳನ..
ವಿಜಯನಗರ ಜಿಲ್ಲೆ ಕೂಡ್ಲಿಗಿ, ಕ.ಕಾ.ಪ.ಧ್ವನಿ ಸಂಘದ ರಾಜ್ಯ ಘಟಕದಿಂದ. ಪ್ರಥಮ ರಾಜ್ಯ ಸಮ್ಮೇಳನ ಬೆಂಗಳೂರಿನ ರಾಘವ ಕಲಾಕ್ಷೇತ್ರದಲ್ಲಿ ಫೆ25ರಂದು ಜರುಗಲಿದೆ ಎಂದು ರಾಜ್ಯಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಪ್ರಕಟಣೆಯಲ್ಲಿ ತಿಳಸಿದ್ದಾರೆ. ಅವರು ಫೆ10ರಂದು ಸಂಜೆ ಪಟ್ಟಣದ ಪ್ರವಾಸಿಮಂದಿರದಲ್ಲಿ, ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದರು. ಫೆ25ರಂದು ಬೆಂಗಳೂರಿನ ಕಲಾಕ್ಷೇತ್ರದಲ್ಲಿ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಘಟಕದಿಂದ, ಫೆ 25ರಂದು ಪತ್ರಕರ್ತರ ಪ್ರಥಮ ರಾಜ್ಯ ಸಮ್ಮೇಳನ ಜರುಗಲಿದೆ ಎಂದು ಪ್ರಕಟಿಸಿದರು. ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ತಾಲೂಕು ಘಟಕಗಳ ಪದಾಧಿಕಾರಿಗಳು, ರಾಜ್ಯ ಕಂಡ ಹಿರಿಯ ಪತ್ರಕರ್ತರು. ರಾಜ್ಯದ ಗಣ್ಯಾತಿಗಣ್ಯರು, ರಾಜ್ಯ ಮಟ್ಟದ ಕವಿಗಳು ಹಾಗೂ ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅನೇಕ ದಶಕಗಳಿಂದ, ಪತ್ರಿಕಾ ರಂಗ ಸೇರಿದಂತೆ ವಿವಿದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ. ರಾಜ್ಯ ಮಟ್ಟದ ಗೌರವ ಸನ್ಮಾನ ಪ್ರಶಸ್ತಿ ನೀಡಲಿದ್ದು, ಬಹು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಮ್ಮೇಳನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ, ಒಟ್ಟು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಆಗಮಿಸುವ ನಿರೀಕ್ಷೆ ಇದೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ, ಫೆ25ರಂದು ಬೆಂಗಳೂರಿನಲ್ಲಿ ಪ್ರಥಮ ರಾಜ್ಯ ಸಮ್ಮೇಳನ ಜರುಗುತಲಿದೆ. ಸಮ್ಮೇಳನಕ್ಕೆ ರಾಜ್ಯದ ಎಲ್ಲಾ ಸಮಾನ ಮನಸ್ಕ, ಪತ್ರಕರ್ತರೆಲ್ಲರೂ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಯಾಗಿಸಬೇಕೆಂದು ಬಂಗ್ಲೆ ಮಲ್ಲಿಕಾರ್ಜುನ ಕೋರಿದ್ದಾರೆ. “ಮಾಧ್ಯಮ ಸೇವಾ ರತ್ನ” ರಾಜ್ಯ ಪ್ರಶಸ್ಥಿಗೆ ಪತ್ರಕರ್ತ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಅಯ್ಕೆ- ಪತ್ರಿಕಾರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಗುರುತಿಸಿ, ರಾಜ್ಯ ಸಮ್ಮೇಳನಕ್ಕೆ ವಿಶೇಷವಾಗಿ ಆಹ್ವಾನಿಸಲಾಗುವುದು. ಅವರನ್ನು ವೇದಿಕೆಯಲ್ಲಿ ರಾಜ್ಯಮಟ್ಟದ ಪ್ರಶಸ್ಥಿ ನೀಡಿ ಗೌರವಿಸಿ ಸನ್ಮಾನಿಸಲಾಗುವುದು. ಅಂತೆಯೇ ಕೂಡ್ಲಿಗಿಯ ಹಿರಿಯ ಪತ್ರಕರ್ತ ವಿ.ಜಿ.ವೃಷಭೇಂದ್ರ ರವರನ್ನು, ವಿಶೇಷವಾಗಿ ಸಮ್ಮೇಳನಕ್ಕೆ ಆಹ್ವಾನಿಸಿರುವುದಾಗಿ ತಿಳಿಸಿದರು. ವಂದೇ ಮಾತರಂ ವಿ.ಜಿ.ವೃಷಭೇಂದ್ರ ವರನ್ನು, “ಮಾಧ್ಯಮ ಸೇವಾ ರತ್ನ” ರಾಜ್ಯ ಮಟ್ಟದ ಪ್ರಶಸ್ಥಿಗೆ ಆಯ್ಕೆ ಮಾಡಿರುವುದಾಗಿ ಅವರು ಪ್ರಕಟಿಸಿದರು. ಈ ಸಂದರ್ಭದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ, ಪತ್ರಕರ್ತ ವಿ.ಜಿ.ವೃಷಭೇಂದ್ರ ರವರಿಗೆ ಸಮ್ಮೇಳನದ “ಮಾಧ್ಯಮ ಸೇವಾ ರತ್ನ”ರಾಜ್ಯ ಪ್ರಶಸ್ಥಿಗೆ ಆಯ್ಕೆಯಾದುದರ ಪ್ರತಿ ನೀಡಿ ಅಹ್ವಾನಿಸಿದರು. ಈ ಸಂದರ್ಭದಲ್ಲಿ ಕ.ಕಾ.ಪ ಧ್ವನಿ ಸಂಘದ ಕೂಡ್ಲಿಗಿ ಅಧ್ಯಕ್ಷ ಬಾಣದ ಶಿವಮೂರ್ತಿ. ಪತ್ರಕರ್ತರಾದ ಬಿ.ಕೆ.ರಾಘವೇಂದ್ರ, ಗುನ್ನಳ್ಳಿ ನಾರಾಯಣ ಸೇರಿದಂತೆ ಮತ್ತಿತರರು ಇದ್ದರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.