ಕಿಲ್ಲಾರಹಟ್ಟಿ ಗ್ರಾಮ ಪಂಚಾಯತಯಲ್ಲಿ ಬಾರಿ ಭ್ರಷ್ಟಾಚಾರ ಕ.ರಾ.ರೈ.ಸಂಘ ಹಾಗೂ ಹ.ಸ ಕುಷ್ಟಗಿ ತಾಲೂಕು ಅಧ್ಯಕ್ಷ ನಾಗರಾಜ ಇಟಗಿ ಹಾಗೂ ಉಪಳೇಶ ವಿ.ನಾರಿನಾಳ ಆರೋಪ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಲ್ಲಾರಹಟ್ಟಿ ಗ್ರಾ. ಪಂ.ಯಲ್ಲಿ ಬಾರಿ ಭ್ರಷ್ಟಾಚಾರ ನಡೆದಿದ್ದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ಅಧಿಕಾರಿಗಳ ವಿರುದ್ಧ ಹಾಗೂ ಬ್ರಷ್ಟಾಚಾರದಲ್ಲಿ ತೊಡಗಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಘಟಕ ಕುಷ್ಟಗಿ ತಾಲೂಕು ಅಧ್ಯಕ್ಷ ನಾಗರಾಜ ಇಟಗಿ ಹಾಗೂ ಉಪಳೇಶ ವಿ.ನಾರಿನಾಳ ಆರೋಪ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪಟ್ಟಣದ ಹಳೆ ಪ್ರವಾಸ ಮಂದಿರದಲ್ಲಿ ಮಾತನಾಡಿದ ಅವರು 2015 ರಿಂದ 2020 ರವರೆಗೆ ನಡೆದ ಎಮ್.ಎನ್.ಆರ್.ಈ.ಜಿ ಯೋಜನೇ ಹಾಗೂ 14ನೇ ಹಣಕಾಸು ಯೋಜನಡಿಯಲ್ಲಿಯ ಭ್ರಷ್ಟಚಾರವನ್ನು ಸಂಪೂರ್ಣ ತನಿಖೆ ಕೈಗೊಳ್ಳಬೇಕು. ಈ ಯೋಜನೆಗಳ ಬಗ್ಗೆ ಬಾರಿ ಭ್ರಷ್ಟಚಾರವಾಗಿದೆಯೆಂದು ದಿನಾಂಕ 27/04/2020 ರಂದು ನೇರವಾಗಿ ಮಾಹಿತಿ ಕೇಳಿದ್ದು, ನಂತರ ಪ್ರಥಮ ಮೇಲ್ಮನವಿ ದಿ : 09/06/2020 ರಂದು ಅರ್ಜಿ ಸಲ್ಲಿಸಿದ್ದು, ತದ ನಂತರ ದ್ವೀತಿಯ ಮೇಲ್ಮನವಿಯನ್ನು ತಾಲೂಕ ಪಂಚಾಯತ ಅಧಿಕಾರಿಗಳಿಗೆ 23/07/2020 ರಂದು ಮನವಿ ಸಲ್ಲಿಸಿದ್ದು, ತದ ನಂತರ ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದಿ : 23/07/2020 ರಂದು ನೇರವಾಗಿ ದೂರು ಸಲ್ಲಿಸಿದ್ದು ಮತ್ತು ಜಿಲ್ಲಾಧಿಕಾರಿಗಳಿಗೆ ದಿ : 01/09/2020 ರಂದು ಅರ್ಜಿ ಸಲ್ಲಿಸಿ ಈ ಮೇಲಾಧಿಕಾರಿಗಳಿಗೆ ಈ ದೂರು ಸಲ್ಲಿಸಲಾಗಿದೆ. ನಂತರ ಒಂಬುಡ್ಸ್‌ಮನ್ ಕಾರ್ಯಲಯ ಕೊಪ್ಪಳ ಇವರ ಕಾರ್ಯಲಯದಿಂದ 09/08/2021 ರಿಂದ ವಿಚಾರಣಾ ನೋಟೀಸ್ ಜಾರಿಗೊಂಡಿತು. ಹೀಗೆ 2021 ರಿಂದ 15/11/2022 ನೇ ಸಾಲಿನವರೆಗೆ ವಿಚಾರಣಾ ನೋಟೀಸ್ ಜಾರಿಯಾದವು. ಕೊನೆಗೆ ಈ ಮೇಲಾಧಿಕಾರಿಗಳು ದಿ : 05/12/2022 ರಂದು ಭ್ರಷ್ಟಚಾರ ನಡೆದ ಸುಮಾರು 8 ಕಾಮಗಾರಿಗಳ ಸ್ಥಳ ಪರಿಶೀಲನೆಗೆ ಬಂದು ವರದಿ ತೆಗೆದುಕೊಂಡು ನಂತರ ಈ ಭ್ರಷ್ಟಚಾರದ ಬಗ್ಗೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಶೇಖರ ಕಂದಕೂರ, ಹಾಗೂ ಜೆ.ಇ. ಗಳಾದ ಕೊಟ್ರೇಶ, ಮುರುಳಿ, ಶಂಕರ್ ಜೊತೆಗೆ ಅಧ್ಯಕ್ಷರಾದ ಚನ್ನನಗೌಡರ ಇವರುಗಳ ಮೇಲೆ ಅಂದಾಜು 6,15,877-50:ಪೈಸೆ (ಆರು ಲಕ್ಷದಾ ಹದಿನೈದು ಸಾವಿರದಾ ಎಂಟುನೂರಾ ಎಪ್ಪತ್ತೇಳು ರೂಪಾಯಿ ಐವತ್ತು ಪೈಸೆ) ಮೊತ್ತವನ್ನು ವಸಲಾತಿಗಾಗಿ ಶೀಫಾರಸ್ಸು ಮಾಡಿ ಆದೇಶ ಮಾಡಲಾಗಿದೆ. ಮೇಲೆ ತೊರಿಸಿದ 8 ಕಾಮಗಾರಿಗಳಲ್ಲಿ ಇಷ್ಟೊಂದು ಭ್ರಷ್ಟಚಾರ ನಡೆದಿರುತ್ತಿದೆ. ಇದೇ ರೀತಿ ಗ್ರಾಮ ಪಂಚಾಯತಯಲ್ಲಿ ಬರುವ ಪ್ರತಿಯೊಂದು ಯೋಜನೆಗಳ ಬಗ್ಗೆ ಸಂಪೂರ್ಣ ತನಿಖೆ ಕೈಗೊಳ್ಳಬೇಕು. ಇದು ಕೇವಲ ಒಂದು ಗ್ರಾ.ಪಂಚಾಯತ್ ಮಾತ್ರ ಹೀಗೆ ತಾಲೂಕಿನಲ್ಲಿ ಬರುವ ಒಟ್ಟು 36 ಗ್ರಾಮ ಪಂಚಾಯತಿಗಳ ಬಗ್ಗೆ ಸಂಪೂರ್ಣ ತನಿಖೆ ಕೈಗೊಳ್ಳಬೇಕು, ಜೊತೆಗೆ ಅಧಿಕಾರಿಗಳನ್ನು ತಮ್ಮ ಹುದ್ದೆಯಿಂದ ಹುನ್ನತ ಹುದ್ದೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುಹುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ತಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಬೇಕು, ಜೊತೆಗೆ ಈ ಕಾಮಗಾರಿಗಳಲ್ಲಿ ಲೋಪವೇಸಗಿದ ಜೆ.ಇ. ಕಾಂಟಾಕ್ಟರ್ ಗಳ ಲೈಸನ್ಸ್ ಕೂಡಲೆ ರದ್ದುಗೊಳಿಸಬೇಕು. ಈ ಮೇಲೆ ತೊರಿಸಿದ ಪ್ರತಿಯೊಂದು ವಿಷಯಗಳ ಬಗ್ಗೆ ಸಂಪೂರ್ಣ ತನಿಖೆ ಕೈಗೊಳ್ಳುವಲ್ಲಿ ವಿಫಲವಾದರೆ, ಮುಂದಿನ ದಿನಮಾನಗಳಲ್ಲಿ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಹಾಗೂ ರಾಜ್ಯ ಅಧ್ಯಕ್ಷರಾದ ಕೊಡಿಹಳ್ಳಿ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಮತ್ತೊಮ್ಮೆ ಎಚ್ಚರಿಸುತ್ತಿದ್ದೆವೆ ಎಂದು ನಾಗರಾಜ ಇಟಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ಇವರು ತಿಳಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವದ್ಯಕ್ಷರಾದ ಸೋಮಪ್ಪ ಗ್ರಾಮ ಘಟಕ ಸಿದ್ದಾಪುರ, ನಾರಿನಾಳ ಗ್ರಾಮ ಘಟಕದ ಅಧ್ಯಕ್ಷ ಉಪಳೇಶ ವಿ.ನಾರಿನಾಳ, ಯಂಕಣ್ಣ ಯಾದವ್ ಅಧ್ಯಕ್ಷರು ಗ್ರಾಮ ಘಟಕ ಅಮರಾಪುರ, ಹನಮಂತಪ್ಪ ಗಂಜಿಹಾಳ ಅಧ್ಯಕ್ಷರು ಗ್ರಾಮ ಘಟಕ ಹಿರೇ ಮೂಕರ್ತಿನಾಳ್, ಹನುಮಂತ ಕುರಿ ತೆಗ್ಗಿಹಾಳ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ – ಸಂಪಾದಕೀಯಾ