ಕ.ಕಾ.ಪ.ಸಂಘ,ರಾ.ಪ್ರ. ಕಾರ್ಯದರ್ಶಿ ಜಿ.ಸಿ.ಲೋಕೇಶಗೆ (ದಾವಣಗೆರೆ ಜಿಲ್ಲಾ ವತಿಯಿಂದ)ಮಾಧ್ಯಮ ಅಕಾಡೆಮಿ ಪ್ರಶಸ್ಥಿ..
ಕ.ಕಾ.ಪ.ಸಂಘದಿಂದ ದಾವಣಗೆರೆಯ ಪತ್ರಕರ್ತರಿಗೆ ಘೋರ ಅನ್ಯಾಯ _ಬಂಗ್ಲೆ ಆರೋಪ- ವಿಜಯನಗರ ಜಿಲ್ಲೆ ಕೂಡ್ಲಿಗಿ, 2022 ರ ಸಾಲಿನ ಕರ್ನಾಟಕ ಮಾಧ್ಯಮ ಪ್ರಶಸ್ತಿಯನ್ನು, kuwj ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ರವರಿಗೆ ಘೋಷಿಸಿರುವುದು ನನಗೆ ವೈಯಕ್ತಿಕವಾಗಿ ಸಂತೋಷ ಉಂಟುಮಾಡಿದೆ. ಆದರೆ ಮತ್ತೊಂದೆಡೆ ತೀವ್ರ ಬೇಸರವೂ ಆಗುತ್ತಿದೆ ಎಂದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ನುಡಿದಿದ್ದಾರೆ. ಅಷ್ಟೇ ಅಲ್ಲ ಈ ಆಯ್ಕೆಯಲ್ಲಿ, ರಾಜ್ಯ ಘಟಕದಿಂದ ನಿಗದಿತ ಮಾನದಂಡಗಳನ್ನು ಕಡೆಗಣಿಸಲಾಗಿದೆ. ಪ್ರಶಸ್ಥಿ ಆಯ್ಕೆ ಸಮಿತಿಯಿಂದ, ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಗಾಳಿಗೆ ತೂರಲಾಗಿದೆ. ಕ.ಕಾ.ಪ.ಸಂಘ ರಾಜ್ಯ ಘಟಕದಿಂದ ಈ ಮೂಲಕ, ದಾವಣಗೆರೆಯ ಮೂಲ ನಿವಾಸಿ ಅರ್ಹ ಪತ್ರಕರ್ತರಿಗೆ ಘೋರ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದರು. ಅವರು ಕೂಡ್ಲಿಗಿ ಪಟ್ಟಣದ ಪ್ರವಾಸಿಮಂದಿರದಲ್ಲಿ, ಪತ್ರಕರ್ತರೊಂದಿಗೆ ಮಾತನಾಡಿದರು. ದಾವಣಗೆರೆ ಜಿಲ್ಲೆಯ ವಿಳಾಸದಡಿ ಪ್ರಶಸ್ಥಿಗೆ ಭಾಜನರಾಗಿರುವ ಲೋಕೇಶರವರು, ಮೂಲತಃ ಶಿವಮೊಗ್ಗದವರಾಗಿದ್ದಾರೆ. ಅವರುಕ.ಕಾ.ಪ.ಸಂಘ( kuwj )ದಿಂದ ಎರಡು ಅವಧಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಹಾಲಿ ಬೆಂಗಳೂರಿನ ನಿವಾಸಿಯಾಗಿದ್ದು, ವಿಳಾದ ದಾಖಲಾತಿಗಳಾದ ಆಧಾರ್, ಓಟರ್ ಐಡಿ, ಇನ್ನೀತರ ದಾಖಲೆಗಳನ್ನು ಹೊಂದಿ ಬೆಂಗಳೂರಿನಲ್ಲಿ ಹೊಂದಿದ್ದಾರೆ. ಲೋಕೇಶ್ ರವರು ಪ್ರಸ್ತುತ ರಾಜ್ಯ ಪತ್ರಕರ್ತರುಗಳ ಪರ, ವರ್ಷಪೂರ್ತಿ ದಿನದ 24ತಾಸು ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರಂತೆ.!? ಇದು ಶ್ಲಾಘನೀಯವಾಗಿದೆ. ಇದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು, ಇಡೀ ರಾಜ್ಯದ ಪತ್ರಕರ್ತರೆಲ್ಲರಿಗೂ ತಿಳಿದಿದೆ. ಇದು ಕೇವಲ ಉದಾ..ಮಾತ್ರ, ಪ್ರಾಮಾಣಿಕ ಪತ್ರಕರ್ತರ ವಿಷಯದಲ್ಲಿ. ಕ.ಕಾ.ಪ.ಸಂಘದಲ್ಲಾಗಿರುವ ಆಂತರಿಕ ಚಟುವಟಿಕೆಗಳಿಗೆ, ಹಿಡಿದ ಕನ್ನಡಿಯಾಗಿದೆ ಎಂದು ಮಲ್ಲಿಕಾರ್ಜುನ ನುಡಿದರು. ಲೋಕೇಶ್ ರವರು ತಮ್ಮದೇ ಸಂಪಾದಕತ್ವದ, ಲೋಕ ಸಮಾಚಾರ ಪಾಕ್ಷಿಕ ಪತ್ರಿಕೆಯೊಂದನ್ನು ಹೊಂದಿದ್ದಾರಂತೆ. ವಿಪರ್ಯಾಸವೆಂದರೆ ಅದರ ಪ್ರತಿಯನ್ನು ಇದುವರೆಗೂ ಗೋಚರಿಸಿಲ್ಲ, ರಾಜ್ಯದ ಯಾವ ಪತ್ರಕರ್ತರು ಅದನ್ನು ಕಂಡಿದ್ದಾರೋ ಗೊತ್ತಿಲ್ಲ ಎಂದರು. ಲೋಕೇಶ ರವರಿಗೆ ಪ್ರಶಸ್ತಿ ಘೋಷಿಸಿರುವ ಬಗ್ಗೆ ನನ್ನ ತಕರಾರು ಇಲ್ಲ, ಆದರೆ ದಾವಣಗೆರೆ ಜಿಲ್ಲೆಯಿಂದ ಆಯ್ಕೆ ಮಾಡಿರುವುದರ ಕುರಿತು ಅನೇಕ ಅನುಮಾನಗಳಿವೆ. ಈ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷರು, ಹಾಗೂ ಕಾರ್ಯದರ್ಶಿಯವರ ಮೇಲೆ ಮೂಡುವಂತಾಗಿದೆ ಎಂದರು. ಪ್ರಸ್ತುತ ಬೆಂಗಳೂರಿನವರಾಗಿರುವ ಇವರಿಗೆ, ಬೆಂಗಳೂರು ಜಿಲ್ಲೆಯಿಂದ ಧೈರ್ಯವಾಗಿ ಪ್ರಶಸ್ಥಿ ಘೋಷಿಸಬಹುದಾಗಿತ್ತು. ಆದರೆ ಅಕಾಡೆಮಿಯವರು ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತಾಗಿದೆ, ಜೊತೆಗೆ ಈ ಮೂಲಕ ದಾವಣಗೆರೆಯ ಮೂಲ ನಿವಾಸಿ. ಒಬ್ಬ ಅರ್ಹ ಪತ್ರಕರ್ತನ ಖೋಟಾ ಕಸಿದು ಅನ್ಯಾಯ ಮಾಡಿದಂತಾಗಿದೆ ಎಂದರು. ಕಳೆದ ವರ್ಷ ಕ.ಕಾ.ಪ.ಸಂಘದ (kuwj) ಚುನಾವಣಾ ಸಂದರ್ಭದಲ್ಲಿ, ನಾನು ಬೆಂಗಳೂರು ನಿವಾಸಿ ಎಂಬ ಮಾನದಂಡದ ಮೇಲೆ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ರವರಿಗೆ ಆಧ್ಯತರ ನೀಡಲಾಗಿತ್ತು. ಅವರಿಗೆ ಇಂದೇಕೆ ದಾವಣಗೆರೆಯ ಮೇಲೆ ಪ್ರೀತಿ ಹೊಕ್ಕಿತೋ.., ಆ ಶಿವನೇ ಬಲ್ಲ ಎಂದರು. ದಾವಣೆಗೆರೆ ಯಲ್ಲಿ ಲೋಕೇಶರವರು, ಯಾವ ಪತ್ರಿಕೆಗೆ ಅಥವಾ ಮತ್ಯಾವ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೋ..ಗೊತ್ತಿಲ್ಲ. ಅದನ್ನು ದಾವಣಗೆರೆ ಜಿಲ್ಲೆಯ ಕ.ಕಾ.ಪ.ಸಂಘದ, ಪ್ರಾಮಾಣಿಕ ಪತ್ರಕರ್ತರೇ ಹೇಳಬೇಕು. ಇದನ್ನೆಲ್ಲಾ ಗಮನಿಸಿದರೆ ಕ.ಕಾ.ಪ.ಸಂಘದ ಜರುಗುವ ಕೆಲ ಬೆಳವಣಿಗೆಗಳ ಮೇಲೆ, ಅನೇಕ ಅನುಮಾನಗಳು ಮೂಡದೇ ಇರದು. ಈ ವಿಷಯದಲ್ಲಿ ಅಕಾಡೆಮಿಯ ಮೇಲೆ, ಹಾಗೂ ಪ್ರಶಸ್ಥಿಯ ಗರಿಮೆಗಳಿಗೆ ಸಂಬಂದಂತೆ. ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಚರ್ಚೆ ಯಾಗುತ್ತಿವೆ ಎಂದರು. ರಾಜ್ಯದ 91 ವರ್ಷಗಳ ಇತಿಹಾಸ ಹೊಂದಿರುವ, ಹಾಗೂ ಡಿ.ವಿ.ಜಿ. ಕಟ್ಟಿದಂತ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಹೊಂದಿರುವಂತ ಕ.ಕಾ.ಪ.ಸಂಘ (kuwj). ಇಂತಹ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ಪ್ರಶಸ್ಥಿಗೆ ಆಯ್ಕೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ ಎಂದರು. ಇವರು ಅನುಮಾನಕ್ಕೆ ಆಸ್ಪದ ಕೊಡದೇ, ನೇರವಾಗಿ ಬೆಂಗಳೂರು ನಗರದಿಂದ ಪ್ರಶಸ್ಥಿಗೆ ಆಯ್ಕೆಯಾಗಿದ್ದರೆ ಅವರ ಘನತೆ ದುಪ್ಪಟ್ಟು ಹೆಚ್ಚಾಗುತ್ತಿತ್ತು ಎಂದು ಬಂಗ್ಲೆ ಮಲ್ಲಿಕಾರ್ಜುನ ಅಭಿಪ್ರಾಯ ವ್ಯೆಕ್ತಪಡಿಸಿದರು. ಈ ಸಂದರ್ಭದಲ್ಲಿ ಕ.ಕಾ.ಪ.ಧ್ವನಿ ಸಂಘದ ಕೂಡ್ಲಿಗಿ ಅಧ್ಯಕ್ಷ ಬಾಣದ ಶಿವಮೂರ್ತಿ, ಪತ್ರಕರ್ತರಾದ ಗುನ್ನಳ್ಳಿ ನಾರಾಯಣ, ಬಿ.ಕೆ.ರಾಘವೇಂದ್ರ ಸೇರಿದಂತೆ ಮತ್ತಿತರರು ಇದ್ದರು.
ವರದಿ-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.