ಕ.ಕಾ.ಪ.ಧ್ವನಿ ಹಕ್ಕೊತ್ತಾಯ: ನಿರ್ಲಕ್ಷ್ಯಿಸಿದರೆ ಕಾನೂನು ಹೋರಾಟ–ಬಂಗ್ಲೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ, ಕ.ಕಾ.ಪ.ಧ್ವ.ಸಂಘದ ವತಿಯಿಂದ ಪತ್ರಕರ್ತರ ಹಿತಕ್ಕಾಗಿ,ಹಲವು ಹಕ್ಕೊತ್ತಾಯಗಳನ್ನು ಹೀಡೇರಿಸುವಂತೆ. ಧರಣಿ ಸತ್ಯಾಗ್ರಹ ಕೈಗೊಂಡು ಸರ್ಕಾರಕ್ಕೆ, ಹಕ್ಕೊತ್ತಾಯ ಪತ್ರ ಸಲ್ಲಿಸಿ ಹಲವು ತಿಂಗಳುಗಳೇ ಆಗಿವೆ. ಆದರೂ ಸಂಬಂಧಿಸಿದ ಇಲಾಖೆ, ಸರ್ಕಾರದಿಂದ ಯಾವುದೇ ಸ್ಪಂಧನೆ ದೊರಕಿಲ್ಲ ಹೀಗೆ ನಿರ್ಲಕ್ಷ್ಯ ತೋರಿದ್ದಲ್ಲಿ. ಸಂಬಂಧಿಸಿದಂತೆ ಇಲಾಖಾಧಿಕಾರಿಗಳ ವಿರುದ್ಧ ಕಾನೂನು ಹೋರಾಟ, ಅನಿವಾರ್ಯ ಎಂದು ಕ.ಕಾ.ಪ.ಧ್ವನಿ ಸಂಘದ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ತಿಳಿಸಿದ್ದಾರೆ.ಅವರು ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದರು. ನಾಡಿನ ಸಮಸ್ತ ಪತ್ರಕರ್ತರ ಹಿತಕ್ಕಾಗಿ, ಕ.ಕಾ.ಪ.ಧ್ವ.ಸಂಘ ಶ್ರಮಿಸುತ್ತಿದೆ ಸರ್ಕಾರಕ್ಕೆ ಪ್ರಮುಖ ಹಕ್ಕೊತ್ತಾಯಗಳನ್ನು ಮಾಡಲಾಗಿದೆ. ಧರಣಿ ಸತ್ಯಾಗ್ರಹ ಸಂದರ್ಭದಲ್ಲಿ ಇಲಾಖಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ನೀಡಲಾಗಿದೆ, ಮುಖ್ಯಮಂತ್ರಿಗಳನ್ನು ಭೆಟ್ಟಿಯಾಗಿ ಹಕ್ಕೊತ್ತಾಯ ಪತ್ರ ನೀಡಲಾಗಿದೆ. ಸಂಬಂದಿಸಿದಂತೆ ಇಲಾಖೆಗಳ ರಾಜ್ಯಮಟ್ಟದ ಅಧಿಕಾರಿಗಳಿಗೆ, ಹಾಗೂ ಸರ್ಕಾರದ ಮಟ್ಟದ ಪ್ರಮುಖ ಜನಪ್ರತಿನಿಧಿಗಳಿಗೆ. ಕಳೆದ ತಿಂಗಳುಗಳ ಹಿಂದೆಯೇ ಹಕ್ಕೊತ್ತಾಯ ಪತ್ರ ನೀಡಲಾಗಿದೆ, ಆದರೂ ಈ ವರೆಗೆ ಸ್ಪಂಧನೆ ದೊರಕಿಲ್ಲ ಈ ಮೂಲಕ ನಿರ್ಲಕ್ಷ್ಯ ತೋರಲಾಗಿದೆ ಎಂದು ಅವರು ದೂರಿದರು. ಸಂಬಂಧಿಸಿದ ಇಲಾಖೆಗಳ ವಿರುದ್ಧ ಹಾಗೂ ಸರ್ಕಾರದ ವಿರುದ್ಧ, ನಾಡಿನ ಪತ್ರಕರ್ತರ ಹಿತಕ್ಕಾಗಿ ಸಲ್ಲಿಸಿರುವ ಹಕ್ಕೊತ್ತಾಯಗಳನ್ನು ಈಡೇರಿಸುವವರೆಗೂ ಹೋರಾಟ ಮಾಡಲಾಗುವುದು. ಪ್ರಥಮವಾಗಿ ನಿರ್ಲಕ್ಷ್ಯ ತೋರಿದ ಶೀಘ್ರವೇ ಕಾನೂನು ಹೋರಾಟ ಮಾಡಲಾಗುವುದೆಂದು ಬಂಗ್ಲೆ ಮಲ್ಲಿಕಾರ್ಜುನ ತಿಳಿಸಿದರು. ಕ.ಕಾ.ಪ.ಧ್ವನಿ ಸಂಘದ ಕೂಡ್ಲಿಗಿ ಅಧ್ಯಕ್ಷ ಬಾಣದ ಶಿವಮೂರ್ತಿ, ಪತ್ರಕರ್ತರಾದ ಬಿ.ಕೆ.ರಾಘವೇಂದ್ರ, ಗುನ್ನಳ್ಳಿ ನಾರಾಯಣ ಮತ್ತಿತರರು ಇದ್ದರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.