ಕೂಡ್ಲಿಗಿ, ಪಟ್ಟಣದ ಶ್ರೀಊರಮ್ಮ ಪಾದಗಟ್ಟೆ ವಾರ್ಷಿಕೋತ್ಸವ.
ವಿಜಯನಗರ ಜಿಲ್ಲೆ ಕೂಡ್ಲಿಗಿ, ಪಟ್ಟಣದ ಶ್ರೀಊರಮ್ಮದೇವಿ ಪಾದಗಟ್ಟೆ ವಾರ್ಷಿಕೋತ್ಸವ. ಫೆ14ರಂದು ಮಂಗಳವಾರದಂದು, ಬಹು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಶ್ರೀಊರಮ್ಮ ದೇವಿ ಆಲದ ಮರ ಪಾದಗಟ್ಟೆ ಸೇವಾಸಮಿತಿ ಯಿಂದ, ಮಂಗಳವಾರ ಬೆಳಿಗ್ಗೆಯಿಂದಲೇ ವಿವಿದ ಧಾರ್ಮಿಕ ಕೈಕಂರ್ಯಗಳು ಜರುಗಿದವು. ಮುಂಜಾನೆಯಿಂದ ರಾತ್ರಿಯವರೆಗೂ ನಿರಂತರವಾಗಿ ಭಕ್ತರು ಪದಗಟ್ಟೆಗೆ ದಾವಿಸುತ್ತಲೇ ಇದ್ದರು, ಪಟ್ಟಣದ ಅಸಂಖ್ಯಾತ ಭಕ್ತರು ಆಗಮಿಸಿ ಶ್ರೀಊರಮ್ಮದೇವಿ ಆಲದ ಮರ, ಪಾದಗಟ್ಟೆಗೆ ಅಗಮಿಸಿ ಮಾತೆಯ ದರ್ಶನ ಪಡೆದರು. ಶ್ರೀ ಊರಮ್ಮ ದೇವಿ ಪಾದಗಟ್ಟೆ ಸೇವಾ ಸಮಿತಿಯಿಂದ, ದೇವಸ್ಥಾನಕ್ಕೆ ವಿಶೀಷ ದೀಪಾಲಂಕಾರ, ಹಾಗೂ ವಿವಿದ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಜರುಗಿಸಲಾಗಿತ್ತು. ಮತ್ತು ಶ್ರೀಮಾತೆಯ ದರ್ಶನಕ್ಕೆ ಆಗಮಿಸಿದ, ಸರ್ವ ಭಕ್ತರಿಗೆ ಪ್ರಸಾದ ಸೇವೆ ಆಯೋಜಿಸಲಾಗಿತ್ತು. ಪಟ್ಟಣದ ವಿವಿದೆಡೆಯಿಂದ ನೂರಾರು ಮಹಿಳೆಯರು, ನಾಗರೀಕರು ತಮ್ಮ ಕುಟುಂಬ ಸಮೇತರಾಗಿ. ಶ್ರೀಊರಮ್ಮ ದೇವಿ ಪಾದುಕೆ ದರ್ಶನ ಪಡೆದು, ದೇವಿಯ ಆಲದ ಮರ ಪಾದಗಟ್ಟೆ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ