ಅವಹೆಳನ ಕಾರಿ ಹೇಳಿಕೆ ವಿರುದ್ಧ ಭೀಮ್ ಆರ್ಮಿ,ಯಿಂದ ಪ್ರತಿಭಟನೆ.
ತೆಲಂಗಾಣ ರಾಜ್ಯದ ಹಮಾರಾ ಪ್ರಸಾದ, ಡಾ : ಬಿ. ಆರ್.ಅಂಬೇಡ್ಕರ್ ಬರೆದ ರಾಮರ ಹಾಗೂ ಕೃಷ್ಣರ ರಹಸ್ಯಗಳು ಎಂಬ ಪುಸ್ತಕ ಬರೆದ ಟೈಮ್ ಅಲ್ಲಿ ನಾನು ಇದ್ದಿದರೆ. ಗಾಂಧೀಜಿ ಅವರನ್ನು ಕೊಂದ ಹಾಗೇ ನಾನು ಅಂಬೇಡ್ಕರನ್ನು ಕೊಲ್ಲುತ್ತಿದ್ದೆ ಎಂಬ ಹೇಳಿಕೆ ಹಾಗೂ ಜೈನ್ ವಿವಿ.ಯಲ್ಲಿ ದಲಿತರ ಕುರಿತು ಅವಮಾನಿಸುವ ಕಿರುಚಿತ್ರ ಪ್ರದರ್ಶನದ ವಿರುದ್ಧ ಭೀಮ್ ಆರ್ಮಿ,ಯಿಂದ ಇಂದು ಪ್ರತಿಭಟನೆ ನಡೆಯಿತು. ಈ ಹೋರಾಟವನ್ನು ನಮ್ಮ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ-TUCI ಹಾಗೂ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದಿಂದ ಬೆಂಬಲಿಸಿ, “ಪ್ರಶಾಂತ ದಾನಪ್ಪ ರಚಿಸಿದ ಅಂಬೇಡ್ಕರ ಯಾರು ಅಂಬೇಡ್ಕರ” ಹಾಡನ್ನು ಹಾಡುವುದರ ಮೂಲಕ ಮಾತನಾಡಲಾಯಿತು. ವಸತಿ ನಿಲಯ ಮತ್ತು ಕಾಲೇಜ್ ಗಳಿಂದ ವಿದ್ಯಾರ್ಥಿ-ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ದಲಿತಪರ ಸಂಘಟನೆಗಳ ಮುಖಂಡರಾದ, ಮರಿಯಪ್ಪ ಕೆ, ಹನುಮೇಶ ಕರ್ನಿ, ಹುಲ್ಲೇಶ, ಮಾಬುಸಾಬ ಬೆಳ್ಳಟ್ಟಿ, ರಾಜಶೇಖರ್, ಪಂಪಾಪತಿ ಸೇರಿದಂತೆ ವಿದ್ಯಾರ್ಥಿ-ಯುವಜನರು ಆಕ್ರೋಶ ವ್ಯಕ್ತಪಡಿಸಿಸಿದರು. ನಂತರ ಸಿಂಧನೂರು ತಹಶಿಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ವರದಿ – ಸಂಪಾದಕೀಯಾ.