ಕೊಪ್ಪಳದ ತಹಸೀಲ್ದಾರ ಕಛೇರಿ ಮುಂದೆ ನಡೆದ ಧರಣಿ ಸತ್ಯಾಗ್ರಹ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಜಿಲ್ಲಾಧಿಕಾರಿ ಸಮಕ್ಸಮ ನಡೆದ ಸಭೆಯಲ್ಲಿ, ತಹಸೀಲ್ದಾರರಾದ ಅಮರೇಶ ಬಿರಾದಾರ ಒಂದು ವಾರದಲ್ಲಿ ಸಮಸ್ಯೆ ಪರಿಹರಿಸಲು ಒಪ್ಪಿಕೊಂಡರು. ಲಿಖಿತ ಪತ್ರ ಕೊಟ್ಟ ನಂತರ ಧರಣಿ ಹಿಂಪಡೆಯಲಾಯಿತು. ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಡಿ.ಹೆಚ್.ಪೂಜಾರ TUCI ರಾಜ್ಯ ಉಪಾಧ್ಯಕ್ಷರಾದ ಕೆ.ಬಿ.ಗೋನಾಳ,ದಲಿತ ಮುಖಂಡರಾದ ಆನಂದ ಭಂಡಾರಿ, ರಾಜಸಾಬ್ ಬಾಳೆಕಾಯಿ,ಕರ್ನಾಟಕ ರೈತ ಸಂಘ ಜಿಲ್ಲಾ ಕಾರ್ಯದರ್ಶಿಯಾದ ಬಸವರಾಜ ನರೆಗಲ್, DSS ನ ರಘು ಚಾಕ್ರಿ,ಹುಲಿಗಮ್ಮ ಮಕ್ಕಳು,ಮೊಮ್ಮಕ್ಕಳು ಇವರ ಕುಟುಂಬದ ಇತರೆ ಸದಸ್ಯರು ಭಾಗವಾಗಿದ್ದರು.ಮಲ್ಲೇಶ ಗೌಡ ಜಿಲ್ಲಾಧ್ಯಕ್ಷರು ಕರ್ನಾಟಕ ರೈತ ಸಂಘ (AIKKS) ಜಿಲ್ಲಾ ಸಮಿತಿ ಕೊಪ್ಪಳ.
ವರದಿ – ಸಂಪಾದಕೀಯಾ