ಹಾಲು,ಮೊಸರು, ಮಜ್ಜಿಗಿಗೆ 18 ರಷ್ಟು ತರಿಗೆ ಹೆಚ್ಚು ಮಾಡಿ CPIML RI. KARNATAKA ಒತ್ತಾಯ.
(ಈ ಹಿಂದೆ 0 ತೆರಿಗೆ ಇತ್ತು) ಕಾರ್ಪೋರೇಟ ಕಂಪೆನಿಗಳಿಗೆ ತೆರಿಗೆ ಖಡಿತ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಳ್ಳಿನಿಂದ ಕೂಡಿದ, ನಯ ವಂಚನೆಯ ಕಾರ್ಪೋರೇಟ ಪರವಾದ ಚುನಾವಣೆ ಬಜೆಟ. -CPI ML RI ರಾಜ್ಯದ ಬಡವರ,ರೈತರ, ಕಾರ್ಮಿಕರ, ಸಣ್ಣ ಮಧ್ಯಮ ವ್ಯಾಪಾರಿಗಳನ್ನು ಕುಕ್ಕಿ ಕುಕ್ಕಿ ತಿನ್ನುವ 2023-2024 ರ ಅವಧಿಯ ಪ್ರಗತಿ ವಿರೋಧಿ ರಾಜ್ಯ ಬಜೆಟ. 3.9.182 ಲಕ್ಷ ಕೋಟಿ ಮೊತ್ತದ ಬೊಮ್ಮಾಯಿ ಬಜೆಟನಲ್ಲಿ ಬಡವರಿಗೆ, ರೈತರಿಗೆ, ಕಾರ್ಮಿಕರಿಗೆ ಯಾವ ಅನುಕೂಲವಿಲ್ಲ. 5.985 ಲಕ್ಷ ಕೋಟಿ (5 ಲಕ್ಷ 9 ಸಾವಿರ 85 ಕೋಟಿ ಸಾಲ ಹೆಚ್ಚಾಗಿದೆ.) ಸಾಲಕ್ಕೆ 34 ಸಾವಿರ ಕೋಟಿ ಬಡ್ಡಿ ಕಟ್ಟಲಾಗುತ್ತಿದೆ. 2018 ರಲ್ಲಿ 2 ಲಕ್ಷ ಕೋಟಿ ಇದ್ದ (75 ವರ್ಷಗಳಿಂದ ಸಾಲದ ಮೊತ್ತ) ರಾಜ್ಯದ ಸಾಲ 5 ವರ್ಷಗಳಲ್ಲಿ 3.985 ಲಕ್ಷ ಕೋಟಿಗೆ ಏರಿಕೆಯಾಗಿದೆ. ಬಜೆಟನ ಕೊರತೆ ತುಂಬಿಕೊಳ್ಳಲು ಪುನ: 75 ಸಾವಿರ ಕೋಟಿ ಸಾಲ ಮಾಡಲಾಗುತ್ತದೆ. ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿಗೆ ಹಣವನ್ನು ಖಡಿತಗೊಳಿಸಿ ಮಠ ಮಂದಿರಗಳಿಗೆ ಸಾರಾರು ಕೋಟಿ ಕೊಡಲಾಗಿದೆ. ಅಜ್ಞಾನ ಮೂಢ ನಂಭಿಕೆ ಹೆಚ್ಚು ಮಾಡಲು ಜನರ ತೆರಿಗೆ ಹಣವನ್ನು ಖರ್ಚು ಮಾಡುತ್ತಿರುವುದು ಖಂಡನೀಯ. ಹಾಲು, ಮೊಸರು, ಮಜ್ಜಿಗಿಗೆ ಶೇಕಡ 18 ರಷ್ಟು ತೆರಿಗೆ ಹೆಚ್ಚಳ ಮಾಡಿ, ಕಾರ್ಪೋರೇಟ್ ಕಂಪನಿಗಳಿಗೆ ತೆರಿಗೆ ಕಡಿಮೆ ಮಾಡಿದ್ದರಿಂದ ಇದು ಕಾರ್ಪೋರೇಟ್ ಕಂಪನಿಗಳ ಪರವಾದ ಬಜೆಟ ಎಂದರೆ ತಪ್ಪಾಗದು. ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಈ ವರ್ಷ 4.75 ಲಕ್ಷ ಕೋಟಿ ತೆರಿಗೆ ಸಂದಾಯವಾಗಿದೆ. ಕೇಂದ್ರ ಸರ್ಕಾರ ರಾಜ್ಯದ ತೆರಿಗೆ ಪಾಲು ಸರಿಯಾಗಿ ಕೊಡದ ಕಾರಣ ರಾಜ್ಯ ಸಾಲದ ಕೂಪದಲ್ಲಿ ಮುಳುಗುವಂತಾಗಿದೆ. ಡಬಲ್ ಇಂಜನ್ ರೈಲು ಗಾಡಿಯ ಹೊಗೆ ಮಾತ್ರ ಕರ್ನಾಟಕಕ್ಕೆ, ಗಾಡಿಯಲ್ಲಿರುವ ಸಂಪತ್ತೆಲ್ಲ ಮೋದಿ ಶಾ ಗೆ ಹೋಗುತ್ತಿದೆ. ಮಾರ್ಚ್ 10 ನಂತರ ನಯ ಪೈಸೆ ಹಣ ಖರ್ಚು ಮಾಡಲು ಅವಕಾಶವಿಲ್ಲ. ಹಾಗಾಗಿ ಬಜೆಟ ನಲ್ಲಿ ಘೋಷಿಸಿರುವ ಯಾವ ಯೋಜನೆಗಳು ಅನುಷ್ಠಾನಗೊಳ್ಳುವುದಿಲ್ಲ. ಸುಳ್ಳು,ಪೊಳ್ಳಿನಿಂದ ಕೂಡಿದ ಮತ್ತು ಕಾರ್ಪೋರೇಟ್ ಕಂಪನಿಯ ಪರವಾದ ಈ ಬಜೆಟ ನ್ನು ವಿರೋಧಿಸಿ ಹೋರಾಡಬೇಕೆಂದು ಕರೆ ಕೊಡಲಾಗಿದೆ. ಡಿ.ಹೆಚ್.ಪೂಜಾರ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಕೇಂದ್ರ ಸಮಿತಿ ಸದಸ್ಯರು ಭಾರತ ಕಮ್ಯೂನಿಸ್ಟ್ ಪಕ್ಷ (ಎಂಎಲ್) ರವಲ್ಯೂಶನರಿ ಇನ್ಸೇಟಿವ್ CPIML RI. KARNATAKA.
ವರದಿ – ಸಂಪಾದಕೀಯಾ