ಸಂಯುಕ್ತ ಹೋರಾಟ–ಕರ್ನಾಟಕ (SKM)ವತಿಯಿಂದ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ನಡೆದ ಸಮಾವೇಶ ಯಶಸ್ವಿಗೊಂಡಿತು.
ಸಂಯುಕ್ತ ಹೋರಾಟ-ಕರ್ನಾಟಕ (SKM) ಸಮಾವೇಶಕ್ಕೆ ಬಂದಿದ್ದ ಸಾವಿರಾರು ರೈತರಿಗೆ ಕುಳಿತುಕೊಳ್ಳಲು ಜಾಗ ಸಾಕಾಗಲಿಲ್ಲ. ಪ್ರೀಡಂ ಪಾರ್ಕ್ ನಲ್ಲಿ ಜಾಗದ ಅಭಾವದಿಂದ SKM ನಿಂದ ಹಾಕಿದ ಟೆಂಟಿನಲ್ಲಿ 2 ಸಾವಿರ ಕುರ್ಚಿಗಳು ಮಾತ್ರ ಹಾಕಲು ಸಾಧ್ಯವಾಗಿತ್ತು. ಇನ್ನೂಳಿದ ಸಾವಿರಾರು ರೈತರು ದೂರ ದೂರದಲ್ಲಿ ನಿಂತು ಸಮಾವೇಶದ ಭಾಷಣ ಆಲಿಸಿದರು. ಕಾರಣವೇನಂದರೆ ದಿನಾಂಕ 16-02-2023 ರಂದು ವಿವಿಧ ಸಂಘಟನೆಗಳ 12 ಟೆಂಟ್ ಗಳಲ್ಲಿ ಧರಣಿಗಳು,ಹೋರಾಟಗಳು ನಡೆದಿದ್ದವು. ಬೆಂಗಳೂರಿನ ಪ್ರೀಡಂ ಪಾರ್ಕ್ ಒಂದು ರೀತಿಯಲ್ಲಿ ಹೋರಾಟಗಳ ಪ್ರಾಂಗಣಂತಾಗಿದೆ. ಕಳೆದ 2 ವರ್ಷಗಳಿಂದ ಈ ಜಾಗದಲ್ಲಿ ಅನೇಕ ಹೋರಾಟಗಳು,ಧರಣಿಗಳು ನಿರಂತರವಾಗಿ ನಡೆಯುತ್ತಿವೆ. ಎಲ್ಲಾ ಧರಣಿ ಹೋರಾಟಗಳ ಮೈಕ್ ಶಬ್ದಗಳ ಸಂಘರ್ಷ, ಯಾವ ಸಂಘಟನೆಯ ಯಾವ ಬೇಡಿಕೆಗಳು, ಮತ್ತು ಭಾಷಣಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲಾಗಂತ ಸನ್ನಿವೇಶ ನಿರ್ಮಾಣವಾಗಿದ್ದು ದುರಂತದವೆ ಸರಿ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಧರಣಿ ಜಾಗಕ್ಕಾಗಿಯೇ ಸರ್ಕಾರದ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಬರಬಹುದು. ಎಪಿಎಂಸಿ, ವಿದ್ಯುತ್ ಖಾಸಗಿ ಮಸೂದೆ ಹಾಗೂ ಹೊಸ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ,ಮತಾಂತರ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಾಪಸಾತಿಗಾಗಿ, ಅಕ್ರಮ ಸಕ್ರಮ ಕಾಯ್ದೆ ಹಾಗೂ 51.53,57, ಭೂ ಮಂಜಾರಾತಿಗಾಗಿ, 94ಸಿ,94ಸಿಸಿ ನಿವೇಶನ ಹಕ್ಕುಪತ್ರಕ್ಕಾಗಿ, *ಭೂ ಗುತ್ತಿಗೆ ಕಾಯ್ದೆಯ ರದ್ದತಿ ಹಾಗೂ ಅರಣ್ಯ ಹಕ್ಕು ಕಾಯ್ದೆ ಸಮರ್ಪಕ ಜಾರಿ, ಸೇರಿದಂತೆ ಇತರೆ ಬೇಡಿಕೆಗಳಿಗೆ ಒತ್ತಾಯಿಸಿ ನಡೆದ ಸಮಾವೇಶ ಯಶಸ್ವಿಗೊಂಡಿತು. ಸಂಯುಕ್ತ ಹೋರಾಟ ವೇದಿಕೆಯ ಪ್ರಮುಖ ಸಂಘಟನೆಯ ಹಿರಿಯ, ಕಿರಿಯ ಸಂಗಾತಿಗಳು ಸೇರಿದಂತೆ ಸಮಾವೇಶದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ವೈಯಕ್ತಿಕ ಅಭಿನಂದನೆಗಳು. ದೆಹಲಿಯ ಐತಿಹಾಸಿಕ ರೈತ ಹೋರಾಟದ ರೂವಾರಿಯಾದ ಡಾ. ದರ್ಶನ ಪಾಲ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕ, ಧಕ್ಷಿಣ ಭಾರತ ರಾಜ್ಯಗಳ ಹೋರಾಟಕ್ಕೆ ನೇತೃತ್ವ ವಹಿಸುವಂತೆ ಕರೆ ಕೊಟ್ಟರು. ಡಿ.ಹೆಚ್.ಪೂಜಾರ.
ವರದಿ – ಸಂಪಾದಕೀಯಾ