ತಾವರಗೇರಾದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಛತ್ರಪತಿ ಶಿವಾಜಿ ಜಯಂತಿಯ ಕಾರ್ಯಕ್ರಮ ಆಚರಿಸಲಾಯಿತು.

Spread the love

ತಾವರಗೇರಾದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಛತ್ರಪತಿ ಶಿವಾಜಿ ಜಯಂತಿಯ ಕಾರ್ಯಕ್ರಮ ಆಚರಿಸಲಾಯಿತು.

ಕರ್ನಾಟಕ ಪಬ್ಲಿಕ್ ಶಾಲೆ ತಾವರಗೇರಾದಲ್ಲಿ ಛತ್ರಪತಿ ಶಿವಾಜಿ ಜಯಂತಿಯ ಕಾರ್ಯಕ್ರಮವನ್ನು ನಡೆಸಲಾಯಿತು ಶಿವಾಜಿಯ ಭಾವಚಿತ್ರಕ್ಕೆ ಶ್ರೀಮತಿ ಗುರುಪಾದಮ್ಮ ಬಂಡಾರಿ ಮುಖ್ಯೋಪಾಧ್ಯಾಯರು  ಮಾಲಾರ್ಪಣೆಯನ್ನು ಮಾಡಿದರು. ಭಾರತವು ಪ್ರಾಚೀನ ಕಾಲದಿಂದಲೂ ಸಾಕಷ್ಟು ಧೈರ್ಯಶಾಲಿ ಪುರುಷರ ಮತ್ತು ವೀರ ಆಡಳಿತಗಾರರ ಹಿನ್ನೆಲೆಯನ್ನು ಹೊಂದಿದೆ. ಭಾರತದಲ್ಲಿ ಅತ್ಯಂತ ಧೈರ್ಯಶಾಲಿ ಪುರುಷರು ಮಾತ್ರವಲ್ಲ, ಕೆಲವೊಂದು ಮಹಿಳೆಯರು ಕೂಡ ಆಡಳಿತ ನಡೆಸಿದ ಇತಿಹಾಸವಿದೆ. ಈ ಧೈರ್ಯಶಾಲಿ ಸಾಮ್ರಾಜ್ಯದ ಅಧಿಪತಿಗಳು ತಮ್ಮ ತಾಯಿನಾಡು ಮತ್ತು ಸ್ವರಾಜ್ಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ತ್ಯಜಿಸಿದ್ದಾರೆ. ಅಂತಹ ಮಹಾನ್‌ ಧೈರ್ಯಶಾಲಿ ಯೋಧರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕೂಡ ಒಬ್ಬರು. ಛತ್ರಪತಿ ಶಿವಾಜಿಯು ಅತ್ಯಂತ ಧೈರ್ಯಶಾಲಿ ಸಾಮ್ರಾಟನಾಗಿದ್ದು, ಭಾರತದಾದ್ಯಂತ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿ, ವಿಸ್ತರಿಸಿದ ಕೀರ್ತಿ ಇವರದ್ದು. ಶಿವಾಜಿ ಅವರು ತಮ್ಮ ಜೀವಿತಾವಧಿಯಲ್ಲಿ ತನ್ನ ಸಾಮ್ರಾಜ್ಯವನ್ನು ಮೊಘಲರಿಂದ ಕಾಪಾಡಿಕೊಳ್ಳಲು ಅನೇಕ ವರ್ಷಗಳ ಕಾಲ ಹೋರಾಡಿದ್ದರು. ಕಾರ್ಯಕ್ರಮದಲ್ಲಿ ಪರಸಪ್ಪ ಹೊಸಮನಿ ದೈಹಿಕ ಶಿಕ್ಷಣ ಶಿಕ್ಷಕರು ಮಲ್ಲಂಗ್ ಸಾಬ್ ವಾಲೆಕಾರ್ ಶ್ರೀ ಶಾಮಣ್ಣ ಉಪ್ಪಾರ್ ಮತ್ತು ಅಂಬರೀಶ್ ಬಡಿಗೇರ್ ಶ್ರೀ ದೊಡ್ಡಪ್ಪ ಅಲಬನೂರ್ ರವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಗಿಸಲಾಯಿತು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *