ಧಾರ್ಮಿಕ ಆಚರಣೆಗಳಿಂದ ಸೌಹಾರ್ದತೆ ನೆಮ್ಮದಿ ಜೀವನ-ಮಲ್ಲಾಪುರ ಭರ್ಮಣ್ಣ.

Spread the love

ಧಾರ್ಮಿಕ ಆಚರಣೆಗಳಿಂದ ಸೌಹಾರ್ದತೆ ನೆಮ್ಮದಿ ಜೀವನಮಲ್ಲಾಪುರ ಭರ್ಮಣ್ಣ.

ವಿಜಯನಗರ ಜಿಲ್ಲೆ ಕೂಡ್ಲಿಗಿ, ಗಣೇಶೋತ್ಸವ,ಪುರಾಣ ಪ್ರವಚನ, ಶಿವರಾತ್ರಿ, ಸಾಮೂಹಿಕ ಪೂಜೆ, ನವರಾತ್ರಿಗಳಂತಹ ಧಾರ್ಮಿಕ ಆಚರಣೆಗಳಿಂದಾಗಿ ಸರ್ವರೂ ಸೌಹಾರ್ದತೆಯಿಂದ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ ಎಂದು. ಪಟ್ಟಣದ ವಾಲ್ಮೀಕಿ ಸಮುದಾಯದ ಹಿರಿಯರಾದ, ಮಲ್ಲಾಪುರ ಭರ್ಮಣ್ಣ ನುಡಿದಿದ್ದಾರೆ. ಯುವಕರು ಮೊಬೈಲ್, ಸಿನಿಮಾ ಗಳ ಗುಂಗನ್ನು ಬಿಡಬೇಕು, ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು. ವಿದೇಶಿ ಸಂಸ್ಕೃತಿಗೆ ಮರುಳಾಗದೇ ನಮ್ಮ ನಾಡು , ದೇಶದ ಸಂಸ್ಕೃತಿಯನ್ನು ಸರ್ವರೂ ತಮ್ಮ ಜೀವನದಲ್ಲಿ ಪಾಲಿಸಬೇಕೆಂದು ಕರೆ ನೀಡಿದರು. ಅವರು ಪಟ್ಟಣದ ಶ್ರೀಲಕ್ಷ್ಮೀನರಸಿಂಹ ದೆವಸ್ಥಾನ ಸೇವಾ ಸಮಿತಿ ಆಯೋಜಿಸಿದ್ದ, ಶ್ರೀ ಶಿವರಾತ್ರೋತ್ಸವ ಪ್ರಯುಕ್ತ , ಜಾಗರಣೆ ಭಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮ ಅಯೋಜಿಸಿದ್ದ ಯುವಕರ ಧಾರ್ಮಿಕ ಶ್ರದ್ಧೆ, ಭಕ್ತಿ ಪೂರ್ವಕ ನಡೆಯನ್ನ ಕಂಡ ಭರ್ಮಣ್ಣನವರು. ಈ ಸಂದರ್ಭದಲ್ಲಿ ಯುವಕರನ್ನು ಅಭಿನಂದಿಸಿದರು. ವಾಲ್ಮೀಕಿ ಸಮುದಾಯದ ಮಹಿಳಾ ಮುಖಂಡರಾದ, ಜಿಂಕಲ್ ನಾಗಮಣಿ ಮಾತನಾಡಿ ಕಲಾವಿದರ ತವರೂರು ಕೂಡ್ಲಿಗಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಲಾವಿದರನ್ನ ಸತ್ಕರಿಸುವ ಸಂಪ್ರದಾಯ ಪಾಲಿಸಬೇಕಿದೆ. ಈ ಮೂಲಕ ಅವರಿಗೆ ಉತ್ತಮ ವೇದಿಕೆಗಳನ್ನು ಕಲ್ಪಿಸಬೇಕು, ಅವರ ಸೇವೆಗೆ ಪ್ರತಿಯಾಗಿ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಅವರಲ್ಲಿ ಉತ್ಸಾಹ ತುಂಬಬೇಕು. ಅವರಿಗೆ ಸಲ್ಲಬೇಕಿರುವ ಸರ್ಕಾರಿ ಸೌಕರ್ಯಗಳನ್ನು, ಸ್ಥಳೀಯ ಆಡಳಿತ ಹಾಗೂ ಸಂಘ ಸಂಸ್ಥೆಗಳು ಕಲಾವಿದರಿಗೆ ತಲಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದರು. ವೇದಿಕೇಯಲ್ಲಿದ್ದ ಗಣ್ಯರು, ಹಿರಿಯ ನಾಗರೀಕರು  ಮಾತನಾಡಿದರು. ಭಜನೋತ್ಸವದಲ್ಲಿ ಪಟ್ಟಣ ಸೇರಿದಂತೆ ನೆರೆ ಹೊರೆ ಗ್ರಾಮಗಳಿಂದ ಆಗಮಿಸಿದ್ದ, ವಿವಿದ ಭಜನಾ ತಂಡಗಳಿಂದ ರಾತ್ರಿ ಪೂರ್ತಿ ಜಾಗರಣೆಯೊಂದಿಗೆ ಭಜನೆ ಗಾಯನ ಜರುಗಿತು. ಶ್ರೀಲಕ್ಷ್ಮೀನರಸಿಂಹ ದೇವಸ್ಥಾನದ ಸೇವಾ ಸಮಿತಿಯ ಯುವಕರು, ನಾಗರೀಕರು, ಮಹಿಳೆಯರು, ಮಕ್ಕಳು, ಯುವಕರು ಭಾಗವಹಿಸಿದ್ದರು. ಕಲಾವಿದರಿಂದ ಗಾಯನ ಹಾಗೂ ಕಲಾವಿದರಿಗೆ ಗೌರವ ಸನ್ಮಾನ ಕಾರ್ಯಕ್ರಮಗಳು ಜರುಗಿದವು. ನೆರೆದ ಭಕ್ತರಿಗೆ ಹಾಗೂ ನಾಗರೀಕರಿಗೆ ಹಾಗೂ ಸಾರ್ವಕನಿಕರಿಗೆ, ದೇವಸ್ಥಾನ ಸೇವಾ ಸಮಿತಿಯಿಂದ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು. ಪತ್ರಕರ್ತ ಹಾಗೂ ಶ್ರೀಊರಮ್ಮ ದೆವಿ ಅರ್ಚಕರಾದ ಬಡಿಗೇರ ನಾಗರಾಜರವರು, ಕಾರ್ಯಕ್ರಮದಲ್ಲಿ ಸರ್ವರನ್ನು ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಶ್ರೀಲಕ್ಷ್ಮೀನರಸಿಂಹ ದೇವಸ್ಥಾನ ಸೇವಾ ಸಮಿತಿಯ, ಎಲ್ಲಾ ಯುವಕರು ಭಜನೋತ್ಸವದಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು.

ವರದಿ- ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.

Leave a Reply

Your email address will not be published. Required fields are marked *