ಕೂಲಿ ಕಾರ್ಮಿಕರ ಕೂಲಿ ಹಣಕ್ಕಾಗಿ ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ.
ಕೊಪ್ಪಳ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರ ಸಮಸ್ಯಗೇನು ಭರವಿಲ್ಲ, ಅದರಂತೆ ಈ ಗ್ರಾಮ ಪಂಚಾಯತಿಯೊಂದು ಉದಾಹರಣೆ. ಭ್ರಷ್ಠರು ಸೇರಿ ಸರಕಾರದ ಕಣ್ಣಿಗೆ ಮಣ್ಣು ಎರಚಿ ಸಾಕಷ್ಟು ಬಿಲ್ಲು ಎತ್ತುವಳಿ ಮಾಡಿದ ಸಾಕಷ್ಟು ಉದಾಹರಣೆಗಳು ಸಹ ಇವೆ. ಆದರೆ ಪಕ್ಷಗಳ ಹೆಸರಲ್ಲಿ ಸಾವಿರಾರು ಕೋಟಿ ಖರ್ಚು ಮಾಡಿದರೆ ಅವರಿಗೆ ಯಾವುದೇ ಬಾರವಿಲ್ಲ. ಆದರೆ ಕೂಲಿ ಕಾರ್ಮಿಕರಿಗೆ ಬೆಳಂ ಬೆಳಗ್ಗೆ ಕೂಲಿ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಅವರ ಸಮಯಕ್ಕೆ ಸರಿಯಾಗಿ ಕೂಲಿ ಸಿಗದೇ ಇದ್ದಲ್ಲಿ ಅವರ ಬದುಕು ಹೇಗೆ ಹೇಳಿ. ನಾಚಿಕೆಯಾಗಬೇಕು ಸರ್ಕಾರಕ್ಕೆ. ದಿನಗೂಲಿಯಾಗಿ ದುಡಿಯುವ ಜನರು ತಮ್ಮ ಕೂಲಿಗಾಗಿ ತಮ್ಮ ಎಲ್ಲಾ ಕೆಲಸಗಳನ್ನ ಬದಿಗಿಟ್ಟು, ಸಂಬಂದಪಟ್ಟ ಕಾರ್ಯಾಲಯದ ಮುಂದೆ ಹೋರಾಟ ಮಾಡುವಂತ ಸ್ಥಿತಿ ಬಂದಿದೆ, ಇದು ಎಂತ ದುರಂತ ಅಲ್ವಾ? ತಾವರಗೇರಾ ಹೋಬಳಿಯ ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ಜೂಲಕುಂಟಿ ಗ್ರಾಮದ ನರೇಗಾ ಕೂಲಿ ಕಾರ್ಮಿಕರಿಗೆ ಸಕಾಲಕ್ಕೆ ಕೂಲಿ ನೀಡುತ್ತಿಲ್ಲ ಎಂದು ಕಾರ್ಮಿಕರು ತಾವರಗೇರಾ ನಾಡ ತಹಸೀಲ್ದಾರ ಮೂಲಕ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು. ತಾವರಗೇರಾ ಹೋಬಳಿಯ ಜೂಲಕುಂಟಿ ಗ್ರಾಮದ ಸುಮಾರು ನೂರಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡಿದ ಕೂಲಿಯನ್ನು ನಮ್ಮ ಅಕೌಂಟ್ ಗೆ ಹಾಕಲಾರದೆ ಸಬೂಬು ಹೇಳುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನಿರ್ವಹಿಸಿ ೧೫ ದಿನ ಕಳೆದರು ಸಹ ನಮ್ಮ ಕೂಲಿ ಹಣ ನಮ್ಮ ಖಾತೆಗೆ ಜಮಾವಣೆ ಯಾಗಿರುವುದಿಲ್ಲ ನಾವುಗಳು ಇದಕ್ಕೆ ಸಂಬಂಧಿದಸಿದ ಅಧಿಕಾರಿಗಳು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಕೆಳಿದರೆ ನಿಮ್ಮ ಖಾತೆಗೆ ಎನ್.ಪಿ.ಸಿ.ಐ. ಲಿಂಕ್ ಆಗಿರುವುದಿಲ್ಲ ಮೊದಲು ಎನ್.ಪಿ.ಸಿ.ಐ. ಲಿಂಕ್ ಮಾಡಿಸಿ ಆ ಮೇಲೆ ನಿಮ್ಮ ಕೂಲಿ ಹಣ ಜಮಾ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಇದೆ ವಿಷಯವಾಗಿ ಬ್ಯಾಂಕಗಳಿಗೆ ಹೋಗಿ ಎನ್.ಪಿ.ಸಿ.ಐ. ಲಿಂಕ್ ಮಾಡಲು ಹೇಳಿದರೆ ಬ್ಯಾಂಕ ಸಿಬ್ಬಂದಿಯವರು ಈಗಾಗಲೇ ನಿಮ್ಮ ಖಾತೆಗೆ ಎನ್.ಪಿ.ಸಿ.ಐ. ಲಿಂಕ್ ಆಗಿದೆ ಅಂತಾ ಹೇಳುತ್ತಿದ್ದಾರೆ. ಆದ್ದರಿಂದ ಪ್ರತಿದಿನ ಗ್ರಾಮ ಪಂಚಾಯತಗೆ ಹಾಗು ಬ್ಯಾಂಕುಗಳಿಗೆ ತಿರುಗಿ ತಿರುಗಿ ಸಾಕಾಗಿ ಹೊಗಿದೆ ಎಂದು ಕಾರ್ಮಿಕರು ಅರೋಪಿಸಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಉದ್ಯೋಗ ಖಾತ್ರಿ ಕೆಲಸದ ಕೂಲಿ ನೀಡುವಲ್ಲಿ ಆಗುತ್ತಿರುವ ಲೋಪದೋಷಗಳನ್ನು ಸರಿಪಡಿಸಿ ನಮಗೆ ಕೂಲಿ ಹಣ ಸಿಗುವ ಹಾಗೆ ಮಾಡಬೇಕೆಂದು ತಾವರಗೇರಾ ನಾಡ ತಹಸೀಲ್ದಾರರಿಗೆ ಮನವಿಪತ್ರ ಸಲ್ಲಿಸಿದರು. ಕೂಲಿ ಕಾರ್ಮಿಕರಾದ ಮೌಲಾಸಾಬ, ದೌಲಸಾಬ, ಹುಸೇನಸಾಬ, ಶ್ಯಾಮೀದ್ ಸಾಬ, ಮರೇಗೌಡ, ಹನಮಗೌಡ, ತಿಪ್ಪಮ್ಮ, ಹನಮಮ್ಮ, ದುರಗಮ್ಮ ಸೇರಿದಂತೆ ನೂರಾರು ಕೂಲಿ ಕಾರ್ಮಿಕರು ಇದ್ದರು.
ವರದಿ-ಉಪ್ಪಳೇಶ ವಿ.ನಾರಿನಾಳ