ಭ್ರಷ್ಟರಿಗೆ ಮನೆಗೆ ಕಳಿಸಲು ಆಪ್ ಗೆ ಬೆಂಬಲಿಸಿ, ಚಿತ್ರನಟಿ ಡಾ. ಪೂಜಾ ರಮೇಶ.
ರಾಯಚೂರು ಫೆ.24 ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿರುವ ಭ್ರಷ್ಟ ಶಾಸಕರನ್ನು ಮನೆಗೆ ಕಳಿಸಿ. 40 ಪರ್ಸೆಂಟ್ ಭ್ರಷ್ಟಾಚಾರದಲ್ಲಿ ತೊಡಗಿರುವ ಶಾಸಕರನ್ನು ಚುನಾವಣೆಯಲ್ಲಿ ಸೋಲಿಸಿ ಕರ್ನಾಟಕವನ್ನು ಉಳಿಸಿ.. ಭ್ರಷ್ಟಾಚಾರ ನಿರ್ಮೂಲನೆಗೆ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ ಎಂದು ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಆಕಾಂಕ್ಷಿ.ಚಿತ್ರನಟಿ ಡಾ. ಪೂಜ ರಮೇಶ್ . ಮಾತನಾಡಿದರು. ಅವರು ಗುರುವಾರ ನಡೆದ ಎಲ್‌ಬಿಎಸ್ ನಗರದ ಹಮಾಲಿ ಕ್ವಾಟ್ರಸ್ ನಲ್ಲಿರುವ ಸ್ಲಂ ಜನರ ಜೊತೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪೊರಕೆ ಪರಿಹಾರ ಅಭಿಯಾನವನ್ನು ಆರಂಭಿಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿ ರಾಯಚೂರು ನಗರದಲ್ಲಿ ಸಾಕಷ್ಟು ಸ್ಲಮ್ಗಳಿದ್ದು ಇಲ್ಲಿನ ಜನರ ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಸ್ಥಳೀಯ ಶಾಸಕರ ನಿರ್ಲಕ್ಷತನ ಎದ್ದು ಕಾಣುತ್ತಿದೆ.. ವಿಧಾನಸಭಾ ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ… ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ.. ಇದಕ್ಕೆಲ್ಲಾ ಆಮದ್ಮಿ ಪಕ್ಷದ ಪೊರಕೆಯೇ ಪರಿಹಾರ ಆಗಿದೆ. ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ ಕರ್ನಾಟಕವನ್ನು ಉಳಿಸಿ ಎಂದು ಚಿತ್ರನಟಿ ಪೂಜಾ ರಮೇಶ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಆಮದ್ಮಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರೇಶ್ ಆರ್. ಮತ್ತು ಜಿಲ್ಲಾ ಕಾರ್ಯದರ್ಶಿ ನುಶ್ರತ್ತಲಿ. ಹಾಗೂ ವೀರೇಶ್ ಆರು , ಮತ್ತು ಬೀರಲಿಂಗಪ್ಪ. ಅನಿಲ್ ಕುಮಾರ್. ಉಮೇಶ್ ಕೆ ಎನ್ ,ವಿನೋದ್ ಕುಮಾರ್, ಉಷಾರಾಣಿ. ಇನ್ನಿತರ ನೂರಾರು ಜನ ಮಹಿಳೆಯರು ಪೊರಕೆ ಪರಿಹಾರ ಕಾರ್ಯಕ್ರಮದ ಅಭಿಯಾನದಲ್ಲಿ ಭಾಗವಹಿಸಿದ್ದರು.
ವರದಿ-ಬಾಲರಾಜ ಯಾದವ್