ಜೆಡಿಎಸ್ ರಾಜ್ಯ ಜನರ ಕಷ್ಟಕ್ಕೆ ಸ್ಪಂದಿಸುವ ಪಕ್ಷ ತಾಲೂಕು ಜೆಡಿಎಸ್ ಅಧ್ಯಕ್ಷ ಎ ಎನ್ ಜಾನಕಿರಾಮ್.
ಕೆ ಆರ್ ಪೇಟೆ ತಾಲೂಕಿನ ಸಂತೆಬಾಕಹಳ್ಳಿ ಹೋಬಳಿಯ ಅಘಲಯ ಗ್ರಾಮ ಪಂಚಾಯಿತಿವ್ಯಾಪ್ತಿಗೆ ಬರುವ ಪ್ರತಿ ಮತದಾರರ ಮನೆ ಮನೆಗೆ ತೆರಳಿ ಪಂಚರತ್ನ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಮಾತನಾಡಿದ ಅವರು,ನಾಡಿನ ಜನತೆ ಹಲವಾರು ಕಷ್ಟಗಳನ್ನು ಎದುರಿಸುತ್ತಿದ್ದು, ಜನರ ಸಮಸ್ಯೆಗೆ ಮುಕ್ತಿ ಸಿಗಬೇಕೆನ್ನುವ ದೃಷ್ಟಿಯಿಂದ ಇಡೀ ರಾಜ್ಯದಲ್ಲಿ ಪಂಚರತ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅತ್ಯುನ್ನತವಾದ ಶಿಕ್ಷಣ,ಆರೋಗ್ಯ ಸೇವೆ, ರೈತರು ಸಾಲಗಾರರಾಗದೇ ಇರುವ ಹಾಗೆ ರೈತಪರ ಯೋಜನೆಗಳು, ಸಣ್ಣಪುಟ್ಟ ವ್ಯಾಪಾರಸ್ಥರು ಹೀಗೆ ಎಲ್ಲಾ ಸಮಾಜದ ವರ್ಗದವರು ನೆಮ್ಮದಿಯಿಂದ ಬದುಕುವಂತಾಗಬೇಕು.ಜಿಲ್ಲೆಯಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ಇಲ್ಲಿಯ ಯುವಕರ ನೋವನ್ನು ಗಮನಿಸಿಸಿದ್ದೇನೆ ಪಂಚರತ್ನ ಯೋಜನೆ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದ ಯೋಜನೆ ಅಲ್ಲ ರಾಜ್ಯದ 6 ಕೋಟಿ ಜನತೆಯ ಭವಿಷ್ಯದ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಡತನವನ್ನು ಸಂಪೂರ್ಣವಾಗಿ ತೊಡೆದು ಹಾಕುವ ಮಹತ್ವದ ಯೋಜನೆ ಇದಾಗಿದೆ ಎಂದರು. ಬಳಿಕ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ವಕೀಲ ಧನಂಜಯ್ ಕುಮಾರ್ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಬಗ್ಗೆ ಅಭಿಮಾನವಿದ್ದರು,ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಈ ವಯಸ್ಸಿನಲ್ಲೂ ರೈತಪರ ದ್ವನಿಯತುತ್ತ ಸಹ ರಾಷ್ಟ್ರ ರಾಜ್ಯದ ವಿಚಾರಗಳ ಕುರಿತು ಚಿಂತನೆ ಮಾಡುತ್ತಾರೆ ಎಂದರೆ ಅವರಿಂದ ಕಲಿಯುವುದು ಬಹಳಷ್ಟು ಇದೆ ಅವರ ಆದರ್ಶ ನಮಗೂ ದೊರಕಲಿ ಎಂದು ಜೆಡಿಎಸ್ ಗೆ ಸೇರ್ಪಡೆ ಗೊಂಡಿದ್ದೇನೆ,ಬಿಜೆಪಿ ಸರ್ಕಾರದಲ್ಲಿ ಕೋಮ ಸಂಘರ್ಷ ನಡೆದು ಶಾಂತಿಗೆ ಹೆಸರು ಮಾಡಿದ ನಾಡಿಗೆ ಕಪ್ಪು ಚುಕ್ಕಿ ತಂದಿದ್ದಾರೆ,ಬಿಜೆಪಿ ಅಭಿವೃದ್ಧಿ ಹೆಸರಿನಲ್ಲಿ ಶೇ.40 ಪರ್ಸೆಂಟ್ ಕಮಿಷನ್ ನುಂಗಿದ್ದಾರೆ, ಬಡವರ ಪರ ಕೆಲಸ ಮಾಡುತ್ತಿಲ್ಲ ಪ್ರದೇಶಗಳು ಇದವೆ ಇದರ ಬಗ್ಗೆ ಅಭಿವೃಧ್ಧಿ ಪಡೆದಸಲು ಗಮನ ಹರಿಸುತ್ತಿಲ್ಲ ಆದ್ದರಿಂದ ಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್ ಟಿ ಮಂಜು ಗೆಲ್ಲಿಸಿ ಜೆಡಿಎಸ್ ಸರ್ಕಾರ ತರಲು ಜನರು ಮುಂದೆ ಬರಬೇಕು ಆಗ ಪಂಚರತ್ನ ಯೋಜನೆ ಅನುಷ್ಠಾನಕ್ಕೆ ತರಲು ಸಾಧ್ಯ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಮಾಜಿ ಅಧ್ಯಕ್ಷ ಎಂ ಬಿ ಹರೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್,ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ ಎಂ ಕಿರಣ್ ಆನೆಗೋಳ, ಸಂತೆಬಾಚಹಳ್ಳಿ ಹೋಬಳಿ ಅಧ್ಯಕ್ಷ ರವಿಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್,ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಗ್ರಹಾರಬಾಚಳ್ಳಿ ನಾಗೇಶ್,ಪೇಪಗೌಡ,ಹಿರಿಯ ಮುಖಂಡ ಕೃಷ್ಣಮೂರ್ತಿ, ಜವರೇಗೌಡ,ಜಿಲ್ಲಾ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್,ಅಘಲಯ ಲೋಕೇಶ್, ಯೋಗೇಶ್, ನಾಗೇಂದ್ರ, ಶಿವಣ್ಣ, ಅನಂತ್, ಪ್ರಭಾಕರ್, ಸತೀಶ್, ಹರೀಶ್, ಕೆಂಪರಾಜು, ಮಂಜೇಗೌಡ, ಚಂದನ್,ಅಣ್ಣೆಗೌಡ,ದೊಡ್ಡೇಗೌಡ,ನಾಗರಾಘಟ್ಟ ಅನಿಲ್, ದಿಲೀಪ್, ಉಮೇಶ್,ಪುಟ್ಟೇಗೌಡ,ಸೇರಿದಂತೆ ಉಪಸ್ಥಿತರಿದ್ದರು.
ಮನು ಮಾಕವಳ್ಳಿ ಕೆ ಆರ್ ಪೇಟೆ.