ಖಾನಾಹೊಸಹಳ್ಳಿ:ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಾವಿರಾರು ಜನರ ತಪಾಸಣೆ.
ಜನ್ಮ ಕೊಟ್ಟ ಮಾತೆ ಋಣ ಹಾಗೂ ಜನ್ಮ ನೀಡಿದ ಮಣ್ಣಿನ ಋಣ ತೀರುಸುವುದು, ಪ್ರತಿಯೊಬ್ಬರ ಆಧ್ಯ ಕರ್ಥವ್ಯವಾಗಿದೆ. ಈ ನಿಟ್ಟಿನಲ್ಲಿ ವೈಧ್ಯರು ಹಾಗೂ ಸಮಾಜ ಸೇವಕರೂ ಆದ ಎನ್.ಟಿ.ಶ್ರೀನಿವಾಸರು, ಉಚಿತ ಶಿಬಿರಗಳಂತಹ ಸಮಾಜ ಸೇವಾಕಾರ್ಯಗಳ ಮೂಲಕ. ಋಣ ತೀರಿಸುವ ಪ್ರತ್ನದಲ್ಲಿ, ಪ್ರಾಮಾಣಿಕತೆ ಮೆರದಿದ್ದಾರೆ ಎಂದು ಖಾನಾಮಡಗು ದಾಸೋಹ ಮಠದ ಐಮಡಿ ಶ್ರೀಗಳು ನುಡಿದರು. ಅವರು ವಿಜಯನಗರ ಜಿಲ್ಲೆ ಕೂಡ್ಲಿಗಿ, ತಾಲೂಕಿನ ಖಾನಾಹೊಸಹಳ್ಳಿಯಲ್ಲಿ ಫೆಬ್ರವರಿ26ರಂದು, ಡಾ, ಎನ್.ಟಿ.ಶ್ರೀನಿವಾಸ ಅಭಿಮಾನ ಬಳಗದಿಂದ. ಮಾಜಿ ಶಾಸಕ ದಿ,ಎನ್.ಟಿ.ಬೊಮ್ಮಣ್ಣ ನವರ ಸ್ಮರಣಾರ್ಥವಾಗಿ, ಆಯೋಜಿಸಾಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಶಿಬಿರದಲ್ಲಿ ಹೊಸಹಳ್ಳಿ ಗ್ರಾಮ ಸೇರಿದಂತೆ, ನೆರೆ ಹೊರೆ ಗ್ರಾಮಗಳ ಜನರು. ತಾಕೂಕಿನ ವಿವಿದ ಕಡೆಯಿಂದ ಆಗಮಿಸಿದ್ದ, ಸುಮಾರು 3000ಕ್ಕೂ ಹೆಚ್ಚಿನ ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಹಾಗೂ ಇತರೆ ಸಾವಿರಕ್ಕೂ ಹೆಚ್ಚು ಜನರು,ಇತರೆ ಅನಾರೋಗ್ಯಕ್ಕೆ ತಪಾಸಣೆ ಮಾಡಿಸಿಕೊಂಡರು. ಶಿಬಿರದಳಲ್ಲಿ ವೃದ್ಧರು, ಮಹಿಳೆಯರು,ಮಕ್ಕಳು, ಮಹಿಳೆಯರು ಸೇರಿದಂತೆ. ಸಾವಿರಾರು ಜನರು ತಪಾಸಣೆ ಮಾಡಸಿಕೊಂಡರು. ಶಿಬಿರದಲ್ಲಿ ವಿಶೇಷ ತಪಾಸಣೆ ಹಾಗೂ ಚಿಕಿತ್ಸೆ, ಮತ್ತು ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿತ್ತು. ವಿಶೇಷವಾಗಿ ಮಹಿಳೆಯರ ಖಾಯಿಲೆಗಳಿಗೆ ತಪಾಸಣೆ, ಚಿಕಿತ್ಸೆ ಮತ್ತು ಔಷಧಿ ವಿತರಣೆ, ಮಕ್ಕಳ ಖಾಯಿಲೆಗಳು, ಹೃದ್ರೋಗ,ಸಕ್ಕರೆ ಖಾಯಿಲೆ,ರಕ್ತದೊತ್ತಡ,ಕ್ಷಯ,ಜ್ವರ,ಅಲರ್ಜಿ, ಪಿತ್ತಕೋಶ ತೊಂದರೆ,ಹರ್ನಿಯಾ,ಮೂತ್ರಪಿಂಡದಲ್ಲಿ ಕಲ್ಲು,ಪೈಲ್ಸ್,ಮಲಬದ್ದತೆ,ಹೊಟ್ಟೆನೋವು, ಅಲ್ಸರ್, ಗ್ಯಾಸ್ಟ್ರಿಕ್,ಮೂಳೆ ಸವೆತ,ಕೀಲುನೋವು, ಬೆನ್ನುನೋವು,ಬೆನ್ನು ಹುರಿ ತೊಂದರೆ ಸೇರಿದಂತೆ ಇತರೆ ಖಾಯಿಗಳಿಗೆ.ಉಚಿವಾಗಿ ತಪಾಸಣೆ ಮಾಡಲಾಯಿತು. ಉಚಿತ ಚಿಕಿತ್ಸೆ ಮತ್ತು ಉಚಿತ ವಾಗಿ ಔಷದಿ ನೀಡಲಾಯಿತು. ರೈತರು ಹಾಗೂ ಕಾರ್ಮಿಕರು, ಸರ್ವ ಸಾರ್ವಜನಿಕರು. ಶಿಬಿರದ ಸದುಪಯೋಗ ಪಡೆದುಕೊಂಡರು. ಹೊಸಹಳ್ಳಿ ಗ್ರಾಮದ ಮುಖಂಡರು, ಸ್ಥಳೀಯ ವಿವಿದ ಜನಪ್ರತಿನಿಧಿಗಳು, ವಿವಿದ ಸಂಘ ಸಂಸ್ಥೆಗಳ ಮುಖಂಡರು, ಸಮಾಜ ಸೇವಕರು, ಗಣ್ಯಮಾನ್ಯರು,ವೇದಿಕೆಯಲ್ಲಿದ್ದರು. ಡಾ,ಎನ್.ಟಿ.ಶ್ರೀನಿವಾಸರು ನೇತೃತ್ವದಲ್ಲಿ ಹಲವು ವೈದ್ಯರ ತಂಡ ಹಾಗೂ ಸಿಬ್ಬಂದಿ, ಎನ್.ಟಿ.ಶ್ರೀನಿವಾಸ ಅಭಿಮಾನಿ ಬಳಗದ ಸರ್ವಪದಾಧಿಕಾರಿಗಳು. ಹಾಗೂ ಸರ್ವ ಸದಸ್ಯರು, ಕೂಡ್ಲಿಗಿ ತಾಲೂಕಿನ ವಿವಿದ ಭಾಗದ ನಾಗರೀಕರು ಸಾರ್ವಜನಿಕರು ಶಿಬಿರದಲ್ಲಿ ಭಾಗಿಯಾಗಿದ್ದರು.
ವರದಿ-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ