ಭ್ರಷ್ಠ ರಾಜಕೀಯದ ವಿರುದ್ದ ಆಮ್ ಆದ್ಮಿ ಪಾರ್ಟಿ ಗಂಗಾವತಿಯಿಂದ ಪ್ರತಿಭಟನೆ ಮಾಡಲಾಯಿತು.
ದ್ವೇಷದ ರಾಜಕಾರಣದ ಹುಚ್ಚಿನಿಂದ ಆಮ್ ಆದ್ಮಿ ಪಕ್ಷದ ಉಪಮುಖ್ಯಮಂತ್ರಿ ,ಶಿಕ್ಷಣದ ಹರಿಕಾರ ಎಂದು ಹೆಸರುವಾಸಿಯಾದ ಮನೀಶ್ ಸಿಸೋಡಿಯಾ ಇವರನ್ನು ಸುಳ್ಳು ಪ್ರಕರಣದ ನೆಪವಡ್ಡಿ ನಿನ್ನೆ ಬಂಧಿಸಲಾಗಿದ್ದು ಅದನ್ನು ಖಂಡಿಸಿ, ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ, ಕೈಯಲ್ಲಿ ಪ್ಲೇಕಾರ್ಡ್ ಹಿಡಿದುಕೊಂಡು ಗಂಗಾವತಿಯ ಕೃಷ್ಣದೇವರಾಯ ಸರ್ಕಲ್ ನಲ್ಲಿ ಆಮ್ ಆದ್ಮಿ ಪಾರ್ಟಿ ಗಂಗಾವತಿಯಿಂದ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳರವರು ಮಾತನಾಡುತ್ತಾ. ಭ್ರಷ್ಟ ಬಿಜೆಪಿ ಸರ್ಕಾರ ಸಿಬಿಐ ,ಈಡಿ ,ಇತ್ಯಾದಿ ಸ್ವಯ ಸಂಸ್ಥೆಗಳನ್ನೂ ಸಹ ತನ್ನ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದು ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡಲು ಸಿದ್ಧವಾಗಿ ನಿಂತಿದೆ, ಅರವಿಂದ ಕೆಜ್ರೀವಾಲ್ ಮತ್ತು ಮನಿಶ್ ಸಿಯೋಡಿಯಾ ರವರು ದೆಹಲಿಯಲ್ಲಿ ಮಾಡಿರುವ ಶಿಕ್ಷಣ ಕ್ರಾಂತಿಗೆ ಹೆದರಿಕೊಂಡ ಮೋದಿ ಆಮ್ ಆದ್ಮಿ ಪಾರ್ಟಿಯನ್ನು ಹತ್ತಿಕ್ಕಲು ಈ ರೀತಿಯ ನೀಚ ಕೃತಕ್ಕೆ ಇಳಿದಿದ್ದಾರೆ. ಈ ಹಿಂದೆಯೂ ದೆಹಲಿಯ ಹಲವಾರು ಶಾಸಕರ ಮೇಲೆ ಸುಳ್ಳು ಪ್ರಕರಣಗಳ ಮೂಲಕ ತಮ್ಮದೇ ಪೊಲೀಸರ ವಿಚಾರಣೆಯನ್ನು ನಡೆಸಿಯು ಕೊನೆಗೆ ಯಾವೊಬ್ಬ ಶಾಸಕರ ಮೇಲು ಯಾವುದೇ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗದೆ ಸೋತು ಸುಣ್ಣವಾಗಿದ್ದು ಇತಿಹಾಸ. ಇಷ್ಟಾಗಿಯೂ ಬುದ್ಧಿ ಕಲಿಯದ ಮೋದಿಯವರು ಈಗ ಮತ್ತೆ ಆಮ್ ಆದ್ಮಿ ಸರ್ಕಾರದ ಯೋಜನೆಗಳಿಂದ ಜನರು ಸಾಗರೋಪಾದಿಯಲ್ಲಿ ಆಮ್ ಆದ್ಮಿ ಸರ್ಕಾರವನ್ನು ಬಣ್ಣಿಸುತ್ತ ಆಮ್ ಆದ್ಮಿ ಪಕ್ಷಕ್ಕೆ ಕೈಜೋಡಿಸುತ್ತಿರುವುದು ಕಂಡು ಹೆದರಿಕೊಂಡು ಹೇಡಿಯ ರೀತಿಯಲ್ಲಿ ವಿನಾಕಾರಣ ಸುಳ್ಳು ಪ್ರಕರಣ ದಾಖಲಿಸಿ, ಮನೀಶ್ ಸಿಸೋಡಿಯಾ ರವರನ್ನು ಸಿಬಿಐ ಮುಖಾಂತರ ಬಂಧಿಸಿದ್ದಾರೆ. ಇದು ಪ್ರತಿಯೊಬ್ಬರೂ ಖಂಡಿಸಲೇಬೇಕಾದ ವಿಷಯ ಎಂದು ಮೋದಿ ಅವರ ವಿರುದ್ಧ ಕಿಡಿಕಾರಿದರು,, ಗಂಗಾವತಿ ಎಂಎಲ್ಎ ಸೇವಾಕಾಂಕ್ಷಿ ಶರಣಪ್ಪ ಸಜ್ಜಿಹೊಲ ರವರು ಮಾತನಾಡಿ, -ರಾಜಕೀಯದಲ್ಲಿ ನೇರವಾಗಿ ಎದುರಿಸಲು ಸಾಧ್ಯವಾಗದೆ ಇಂತಹ ನೀಚ ಕೃತ್ಯಕ್ಕೆ ಇಳಿದಿರುವುದು ಈ ದೇಶದ ಪ್ರಧಾನಿಗೆ ಯೋಗ್ಯವಲ್ಲ ಈ ರೀತಿಯ ಕೃತ್ಯಗಳು ಇದೇನು ಮೊದಲಲ್ಲ, ಆಮ್ ಆದ್ಮಿ ಪಕ್ಷ ಹತ್ತಿಕ್ಕಲು ಮೋದಿಯವರು ಪ್ರಯತ್ನಸಿದಷ್ಟು ಮತ್ತೆ ಮತ್ತೆ ಬೃಹದಾಕಾರವಾಗಿ ಬೆಳೆಯುತ್ತಾ ಹೋಗುತ್ತಿದೆ, ಜನಸಾಮಾನ್ಯರ ಶಕ್ತಿಯನ್ನು ಹತ್ತಿಕಲು ಸಾಧ್ಯವಿಲ್ಲ ಎಂದು ಮೋದಿಗೆ ಗೊತ್ತಾಗುವ ಕಾಲ ಒದಗಿ ಬಂದಿದೆ. ಸಾಮಾನ್ಯ ಜನರು ತಮ್ಮ ಮಕ್ಕಳ ಭವಿಷ್ಯವನ್ನು ಯಾವ ಪಕ್ಷದ ಸರ್ಕಾರದಲ್ಲಿ ಕಂಡುಕೊಂಡಿರುವರೋ, ಅಂತಹ ಆಮ್ ಆದ್ಮಿ ಪಕ್ಷದ ಸರ್ಕಾರದ ಒಂದು ಭಾಗವಾಗಿರುವ ಮನೀಶ್ ಸಿಸೋಡಿಯಾ ಅವರನ್ನು ಕಿರುಕುಳ ಕೊಡುವ ಉದ್ದೇಶದಿಂದ ಬಂಧಿಸಿದ್ದಕ್ಕೆ ಮುಂದಿನ ಚುನಾವಣೆಯಲ್ಲಿ ಮೋದಿಗೆ ತಕ್ಕ ಉತ್ತರವನ್ನು ಕೊಡಲಿದ್ದಾರೆ. ಆಮ್ ಆದ್ಮಿ ಸರ್ಕಾರದಂತೆ ಕೆಲಸಗಳನ್ನು ಮಾಡಲು ಯೋಗ್ಯತೆ ಇಲ್ಲದ ಮೋದಿಯವರು ಆಮ್ ಆದ್ಮಿ ಸರ್ಕಾರದ ಕೆಲಸಗಳನ್ನು ಹತ್ತಿಕ್ಕಲು ಈ ರೀತಿ ಮಾಡುತ್ತಿದ್ದಾರೆ .ಇದು ಅತ್ಯಂತ ನೀಚ ಕೃತ್ಯ ಎಂದು ಮೋದಿ ಮತ್ತು ಕೇಂದ್ರ ಸರ್ಕಾರದ ಮೇಲೆ ಗುಡುಗಿದರು. ಅದೇ ರೀತಿ ಕನಕಗಿರಿ ಕ್ಷೇತ್ರದ ಎಂಎಲ್ಎ ಸೇವಾಕಾಂಕ್ಷಿ ರಮೇಶ್ ಕೋಟಿ ಮತ್ತು ಪಕ್ಷದ ಮುಖಂಡರಾದ ಪರಶುರಾಮ್ ಒಡೆಯರ್ ಮಾತನಾಡಿ ಜನರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ನಂತರ ತಹಶೀಲ್ದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಲಿಖಿತ ರೂಪದ ಪ್ರತಿಭಟನ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಸಿದ್ದಿಕೇರಿ, ರಾಘವೇಂದ್ರ ಆನೆಗುಂದಿ, ಭೋಗೇಶ್, ವೆಂಕಟೇಶ್, ಶರೀಫ್ ಸಾಬ್, ನಝೀರ್ ಅಹ್ಮದ್ ,ರವಿ, ಶಿವರಾಜ್ ಪೂಜಾರಿ, ಚಂದ್ರಶೇಖರ್ ನಿಸರ್ಗ ಗೋವಿಂದಪ್ಪ ಕಾಶಿ ವಿರೂಪಣ್ಣ ಮತ್ತು ಇತರರು ಭಾಗವಹಿಸಿದ್ದರು.
ವರದಿ – ಬಾಲರಾಜ ಯಾದವ್