ಊರ ಬಿಟ್ಟ ದೂರದಲ್ಲಿ ಬಸ್ ನಿಲ್ದಾಣ ….. ಅದು ಮುಂದೆ ಆಗುವದು ಅಕ್ರಮ ತಾಣ ಸಾಸ್ವಿಹಾಳ ಗ್ರಾಮಸ್ಥರ ಆಗ್ರಹ.
ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಸಾಸ್ವಿಹಾಳ ಗ್ರಾಮಕ್ಕೆ ಕೆ ಕೆ ಆರ್ ಡಿ ಬಿ ಯೋಜನಾಡಿಯಲ್ಲಿ ಬಸ್ ನಿಲ್ದಾಣಕ್ಕಾಗಿ ಅಂದಾಜು 10 ಲಕ್ಷ ರೂಪಾಯಿ ಮುಂಜುರು ಮಾಡಿದೆ. ಮುಂಜುರು ಮಾಡಿದ ಅನುದಾನದಲ್ಲಿ ನಿರ್ಮಿತಿ ಕೇಂದ್ರದವರು ಸಾಸ್ವಿಹಾಳ ಗ್ರಾಮದಿಂದ 2 ಕಿ ಮಿ ದೂರದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡುತ್ತಿರುವದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು ಗ್ರಾಮಸ್ಥರು ಮಾತನಾಡಿ ಸಾರ್ವಜನಿಕರಿಗೆ ಮತ್ತು ಹಿರಿಯರಿಗೆ ಮತ್ತು ಶಾಲಾ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೆ ಅನೂಕುಲವಾಗಲೆಂದು ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ವಿನಃ ..ಗ್ರಾಮಸ್ಥರು ಪ್ರಯಾಣಿಕರು ವಿಧ್ಯಾರ್ಥಿಗಳ ಬಾರದ 2 ಕಿ ಮೀ ದೂರದಲ್ಲಿ ಬೆಕಾ ಬಿಟ್ಟಿಯಾಗಿ ನಿಲ್ದಾಣ ನಿರ್ಮಿಸಲು ಮುಂದಾಗಿದ್ದಾರೆ.ಅವಶ್ಯಕತೆ ಇರುವ ಕಡೆ ಬಿಟ್ಟು ತಮ್ಮ ಲಾಭಕ್ಕೊಸ್ಕರ ಈ ಯೋಜನೆ ದುರ್ಬಳಕೆ ಮಾಡಿಕೊಳ್ಳುವದು ಎಷ್ಟರ ಮಟ್ಟಿಗೆ ಸರಿ ಅದು ಮುಂದೆ ಅಕ್ರಮ ತಾಣವಾಗತ್ತದೆ ಎಂದು. ಸುಮಾರು 30 ಕ್ಕೂ ಹೆಚ್ಚು ಗ್ರಾಮಸ್ಥರು ಪ್ರತಿಭಟನೆ ಮೂಲಕ ವಿರೋಧ ವ್ಯಕ್ತಪಡಿಸಿದರು ಹೊಲದ ಮಾಲೀಕನು ಇದು ನನ್ನ ಸ್ವಂತದ ಕಟ್ಟಡ ಎಂದು ಹೆಳುತ್ತಿದ್ದಾನೆ ನಿರ್ಮಿತಿ ಕೇಂದ್ರದವರು ನಾವು ಕರೆ ಮಾಡಿ ವಿಚಾರಿಸಿದಾಗ ಅದು ಸರ್ಕಾರಿ ಬಸ್ ನಿಲ್ದಾಣ ಸಾಸ್ವಿಹಾಳ ಗ್ರಾಮದಲ್ಲಿ ಸೂಕ್ತ ಜಾಗ ಸಿಗದಿರುವ ಕಾರಣಕ್ಕೆ ಗ್ರಾಮ ಪಂಚಾಯಿತಿಯಿಂದ ಬಸ್ ನಿಲ್ದಾಣ ನಿರ್ಮಾಣ ಮಾಡಲು ಸ್ಥಳ ಒದಗಿಸಿದ್ದೆವೆ ಎಂದು ನಮ್ಮ ಇಲಾಖೆಗೆ ಅರ್ಜಿ ಬಂದ ನಂತರವೆ ಕಟ್ಟಡ ಕಟ್ಟಲು ಪ್ರಾರಂಭ ಮಾಡಿದ್ದೆವೆ…ಕೆಲವು ದಿನಗಳ ಹಿಂದೆ ಸಾಸ್ವಿಹಾಳ ಗ್ರಾಮದ ವಕೀಲರಾದ ಸಂಗನಗೌಡ ಜಿ ಪಾಟೀಲ್ ಸಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸಕರು ಮತ್ತು ನಿರ್ಮಿತಿ ಕೆಂದ್ರದವರು ನಮ್ಮ ಗ್ರಾಮಕ್ಕೆ ಬಂದಿರುವ ಬಸ್ ನಿಲ್ದಾಣವನ್ನು ಗ್ರಾಮದಲ್ಲೆ ನಿರ್ಮಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಗ್ರಾಮಸ್ಥ ಅಡಿವೆಪ್ಪ ತೊಂಡಿಹಾಳ. ಕರವೇ ಅಧ್ಯಕ್ಷ ಬಸವರೆಡ್ಡಿ ಮೇಟಿ. ಮುತ್ತಪ್ಪ ಕುರ್ನಾಳ. ಬಿಮೇಶ ಗ್ರಾ ಪಂ ಸದಸ್ಯರು. ನಾಗಪ್ಪ. ಹುಸೇನಪ್ಪ. ರಾಮಣ್ಣ. ಶಿವಪ್ಪ. ಹನುಮಂತ. ಮಂಜುನಾಥ್. ಕೆಂಪಣ್ಣ. ಈರಪ್ಪ. ಮಾಯಪ್ಪ. ಛತ್ರಪ್ಪ. ಒತ್ತಾಯಿಸಿದ್ದಾರೆ….
ವರದಿ – ಸಂಪಾದಕೀಯಾ