ದೆಹಲಿಯಲ್ಲಿ-ಕೂಡ್ಲಿಗಿ ಶ್ರೀಪೇಟೆಬಸವೇಶ್ವರ ಸಂಗೀತ ಸಾಂಸ್ಕೃತಿಕ ಕಲಾ ತಂಡದಿಂದ,ಸಂಗೀತ ಸುಧೆ.

Spread the love

ದೆಹಲಿಯಲ್ಲಿ-ಕೂಡ್ಲಿಗಿ ಶ್ರೀಪೇಟೆಬಸವೇಶ್ವರ ಸಂಗೀತ ಸಾಂಸ್ಕೃತಿಕ ಕಲಾ ತಂಡದಿಂದ,ಸಂಗೀತ ಸುಧೆ.

ವಿಜಯನಗರ  ಜಿಲ್ಲೆ ಕೂಡ್ಲಿಗಿ ಪಟ್ಟಣ, ಶ್ರೀಪೇಟೆಬಸವೇಶ್ವರ ಸಾಂಸ್ಕೃತಿಕ ಹಾಗೂ ಸಂಗೀತ ಕಾಲಾ ಶಾಲೆಯ ಸಿಬ್ಬಂದಿಯವರು. ದೆಹಲಿಯಲ್ಲಿನ ಕರ್ನಾಟಕ ಸಂಘ ಅಯೋಜಿಸಿದ್ದ, ಕಾರ್ಯಕ್ರಮದಲ್ಲಿ ತಮ್ಮ ಸಂಗೀತ ಹಾಗೂ ಕಲಾ ಪ್ರತಿಭೆಯನ್ನು ಪ್ರಸ್ತುತಪಡಿಸಿದ್ದಾರೆ.ಫೆ 25-26ರಂದು ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವದ, ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಕೂಡ್ಲಿಗಿ ಯ ಹೆಸರನ್ನು, ನವ ದೆಹಲಿಯಲ್ಲಿ  ಪರಿಚಯಿಸಿದ್ದು ಕಾರ್ಯಕ್ರಮದಲ್ಲಿ ನೆರೆದವರ ಮನದಲ್ಲಿ ಮನೆ ಮಾಡಿದ್ದಾರೆ. ಪ್ರತಿಯಾಗಿ ಕಾರ್ಯಕ್ರಮದ ಆಯೋಜಕರಿಂದ, ಪ್ರಶಂಸನಾ ಅಭಿನಂದನೆ ಪತ್ರ ಹಾಗೂ ಮೆಡಲ್ ಗಳನ್ನು ಪಡೆದಿದ್ದಾರೆ. ನವದೆಹಲಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ, ಕೂಡ್ಲಿಗಿ ಪಟ್ಟಣದ ಶ್ರೀಪೇಟೆಬಸವೇಸ್ವರ ಸಂಗೀತ ಶಾಲೆ ಸಾಂಸ್ಕ್ರತಿಕ ಕಲಾ ಟ್ರಸ್ಟ್‌ ಪದಾಧಿಕಾರಿಗಳಾದ, ಸಂಗೀತ ಹಾಗೂ ರಂಗಕಲಾ ವಿದರಾದ ಅಗಸಗಟ್ಟೆ ತಿಂದಪ್ಪ. ತಬಲಾ ವಾದಕರಾದ ಬಾಣದ ನರಸಿಂಹಪ್ಪ, ಡಿ.ವೆಂಕಟೇಶ, ಕುಪ್ಪನಕೇರಿ ಕೆ.ಶಂಕರಪ್ಪ, ರಂಗಕಲಾವಿದರಾದ ಸಾಸಲವಾಡ ಚನ್ನವೀರಸ್ವಾಮಿ, ವಿಭೂತಿ ವೀರಣ್ಣ ನವರು. ಭಾಗವಹಿಸಿದ್ದರು. ತಮ್ಮ ಕಲೆಯ ಮೂಲಕ ನವದೆಹಲಿಯಲ್ಲಿ, ಕೂಡ್ಲಿಗಿ ಯ ಕಲೆಯ ಸುಧೆಯನ್ನು ಹರಿಸಿದ ಕಾಲಾವಿದರನ್ನು. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಯ ಕಲಾವಿದರು ಹಾಗೂ ನಾರೀಕರು ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ವಿವಿದ ಸಮಾಜ ಮುಖಂಡರು. ವಿವಿದ ಜನಪ್ರತಿನಿಧಿಗಳು, ಕಲಾವಿದರ ಸಂಘಟನೆಗಳ ಪದಾಧಿಕಾರಿಗಳು, ತಾಲೂಕಿನ ವಿವಿದೆಡೆಯ ಕಲಾ ತಂಡದವರು, ಪತ್ರಕರ್ತರು ಅಭಿನಂದಿಸಿದ್ದಾರೆ.

ವರದಿ-️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.

Leave a Reply

Your email address will not be published. Required fields are marked *