ಕಲ್ಯಾಣ ಕರ್ನಾಟಕ ಲೇಖಕರ ಪುಸ್ತಕ ಖರೀದಿಗೆ ಹೈ ಕ ಪ್ರಕಾಶಕರ ಸಂಘ ಆಗ್ರಹ….
ಕೊಪ್ಪಳ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ 2023 – 24 ನೇ ಸಾಲಿನಲ್ಲಿ 5000 ಕೋಟಿ ರೂಪಾಯಿಗಳ ಕ್ರೀಯಾ ಯೋಜನೆ ಸಿದ್ಧಪಡಿಸಲು ನಿರ್ಣಯಿಸಿದ್ದು ತುಂಬಾ ಸಂತೋಷದ ವಿಷಯ,ಆದರೆ ಈ ಬಾರಿಯಾದರೂ ಕಲ್ಯಾಣ ಕರ್ನಾಟಕದ ಲೇಖಕರ ಪುಸ್ತಕಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೈ ಕ ಪ್ರಕಾಶಕರ ಸಂಘದ ಉಪಾಧ್ಯಕ್ಷ. ಪತ್ರಕರ್ತ ಬಸವರಾಜ ಸಿನ್ನೂರ ಆಗ್ರಹಿಸಿದ್ದಾರೆ. ಬೇಕಾಬಿಟ್ಟಿಯಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರದ ಹಣ ಪೋಲು ಮಾಡುವ ಬದಲು ಬರಹಗಳ ಮೂಲಕ ಸಮಾಜ ತಿದ್ದುವ ಕೆಲಸ ಸಾಹಿತಿಗಳು,ಪತ್ರಕರ್ತರು, ಬರಹಗಾರರು ಮಾಡುತ್ತಿದ್ದಾರೆ,ಅವರು ರಚಿಸಿದ ಪುಸ್ತಕಗಳನ್ನು ಖರೀದಿಸುವುದರ ಮುಖಾಂತರ ಕಲ್ಯಾಣ ಕರ್ನಾಟಕದ ಸಾಹಿತ್ಯ,ಸಂಸ್ಕೃತಿ,ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ, ಎಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರ ಹಾಗೂ ಸದಸ್ಯರುಗಳ ವಿರುದ್ಧ ಚಾಟಿ ಬೀಸಿ ಸಾಹಿತಿಗಳ ಅವರ ಪುಸ್ತಕಗಳ ಬಗ್ಗೆ ಇರುವ ನಿರ್ಲಕ್ಷವನ್ನ ಖಂಡಿಸಿದರು. ಕಳೆದ ತಿಂಗಳು 5 ಕೋಟಿ ರೂ.ದುಂದು ವೆಚ್ಚ ಮಾಡಿ ಕಾರ್ಯಕ್ರಮ ಆಯೋಜಿಸಿದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು….? ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ನಿನ್ನೆ ಕರೆದ ಸಾಮಾನ್ಯ ಸಭೆಯಲ್ಲಿ ಒಬ್ಬ ಸದಸ್ಯರಾದರು ಈ ಭಾಗದ ಸಾಹಿತಿಗಳ,ಲೇಖಕರ, ಪರವಾಗಿ ಧ್ವನಿ ಎತ್ತದಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು, ಸರ್ವ ಸದಸ್ಯರು ಮತ್ತು ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಈ ಭಾಗದ ಲೇಖಕರ ಪುಸ್ತಕಗಳನ್ನು ಖರೀದಿಸಬೇಕು. ಕಲ್ಯಾಣ ಕರ್ನಾಟಕದ ಕಲಬುರ್ಗಿ ಬೀದರ್ ಯಾದಗಿರಿ ರಾಯಚೂರು ಕೊಪ್ಪಳ ಬಳ್ಳಾರಿ ಹಾಗೂ ಹೊಸಪೇಟೆ ಜಿಲ್ಲೆಯ ಲೇಖಕರು ಸಾಹಿತಿಗಳು ಬರಹಗಾರರು ಸೇರಿ ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಇದೆ ಕೂಡಲೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಖರೀದಿಗೆ ಮುಂದಾಗದಿದ್ದರೆ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಸಿದ್ದಾರೆ.
ವರದಿ – ಸಂಪಾದಕೀಯಾ