ಸಾಮೂಹಿಕ ವಿವಾಹಗಳಿಂದ ಸಾಮಾಜಿಕ ಪರಿವರ್ತನೆ.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳು ಸೌಹಾರ್ದ ಕೇಂದ್ರಗಳಾಗಿ ಪರಿವರ್ತನೆ ಯಾಗಬೇಕಾದರೆ ಸಾಮೂಹಿಕ ವಿವಾಹ ಮಾಡುವ ಸಮಾಜಮುಖಿ ಕಾರ್ಯಕ್ರಮಗಳನ್ನ ಇನ್ನು ಹೆಚ್ಚೆಚ್ಚು ನಡೆಸಬೇಕೆಂದು ಯಲಬುರ್ಗಾ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು. ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಶ್ರೀ ಗುರು ಸಚ್ಚಿದಾನಂದ ಅವಧೂತರ ಪುರಾಣ ಮಹಾಮಂಗಲೋತ್ಸವ ಏಳು ದಿನಗಳ ಕಾಲ ನಡೆಯಿತು ಹಾಗೂ ಪ್ಯಾಟಿ ಬಸವೇಶ್ವರ ಮತ್ತು ಶ್ರೀ ಕರಿಸಿದ್ದೇಶ್ವರ ದೇವಸ್ಥಾನದ ಮುಂಬಾಗದಲ್ಲಿ 7ನೇ ವರ್ಷದ ಸರ್ವಧರ್ಮ 6 ಜೋಡಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು. ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿಯ ಬದುಕು ಕಂಡುಕೊಳ್ಳಬಹುದು ಎಂದು ಹೇಳಿದರು. ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿಯವರು ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ. ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ, ಶ್ರೀಮಂತ, ಮೇಲು, ಕೀಳು ಎನ್ನದೆ ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ ಎಲ್ಲ ಸತ್ಕಾರ್ಯಗಳಿಗೆ ಜಯ ಖಂಡಿತ. ಇಂತಹ ಸಾಮಾಜಿಕ ಕಳಕಳಿಯಿಂದ ನಡೆಯುವ ಸರ್ವ ಧರ್ಮ ಕಾರ್ಯಗಳು ಭಗವಂತನಿಗೆ ಇಷ್ಟ. ಜೊತೆಗೆ ಸಮಾಜವನ್ನು ಈಗಲೂ ಕಾಡುತ್ತಿರುವ ವರದಕ್ಷಿಣೆ ನಿರ್ಮೂಲನೆಗೆ ಎಲ್ಲರೂ ಸಂಕಲ್ಪ ತೊಡಬೇಕು ಎಂದರು. ರಾಜಣ್ಣ ಪಲ್ಲೆದ್ ತೆರಿಗೆ ಸಲಹೆಗಾರರು ಮಾತನಾಡಿ ಸಮಾಜದಲ್ಲಿ ಆರ್ಥಿಕ ಹೊರೆಯಿಂದ ಬಳಲುತ್ತಿರುವರ ನೆಮ್ಮದಿ ಜೀವನ ನಡೆಸಲು ಸಾಮೂಹಿಕ ವಿವಾಹಗಳು ಇನ್ನು ಹೆಚ್ಚಾಗಿ ನಡೆಯಬೇಕು ಎಂದುರು ನಿರೂಪಣೆ ರಮೇಶ್ ಸಿಳ್ಳಿನ ಇದೇ ಸಂದರ್ಭದಲ್ಲಿ ಗುರುಪಾದೇಶ್ವರ ಸ್ವಾಮಿಗಳು ಗುಲಗಂಜಿ ಮಠ ರೋಣ. ಸಿದ್ದಲಿಂಗೇಶ್ವರ ಸ್ವಾಮಿ ಸಿದ್ಧಾರೂಢ ಮಠ, ಶ್ರೀ ಕರಿಸಿದ್ದೇಶ್ವರ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ವೀರಭದ್ರಪ್ಪ ಪಲ್ಯದ ಅಧ್ಯಕ್ಷರಾದ ಬಸವರಾಜ್ ಮಠದ ಮುಖಂಡರಾದ ಸಂಗಣ್ಣ ತೆಂಗಿನಕಾಯಿ ಯಲಬುರ್ಗಾ. ನಿಂಗಪ್ಪ ವದ್ನಾಳ ಚಂದ್ರು ದೇಸಾಯಿ ಕಿರಣಕುಮಾರ್ ಗುಳಗಣ್ಣವರ, ಅಂದಾನಯ್ಯ ಶಾಡ್ಲಿ ಗೇರಿ ಮಠ ಮಂಜುನಾಥ್ ಬೇಲೇರಿ ದಲಾಲಿ ವರ್ತಕರು ಗದಗ್ ಮನೋಹರ್ ಶರಣಪ್ಪ ಪುರ್ತಗೇರಿ ಗ್ರಾಮದ ವರೆಲ್ಲರೂ ಹಾಗೂ ಪರವೂರಿನ ಸಕಲ ಸದ್ಭಕ್ತರ ಎಲ್ಲರೂ ಭಾಗವಹಿಸಿದ್ದರು,
ವರದಿ : ಹುಸೇನ್ ಮೊತೇಖಾನ್