ಪ್ರಪ್ರಥಮ ಬಂಜಾರ ಸಾಹಿತ್ಯ ಸಮ್ಮೇಳನ ಶಿವಮೊಗ್ಗ.
ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘ ಶಿವಮೊಗ್ಗ ಇವರ ಸಹಯೋಗದಲ್ಲಿ ದಿನಾಂಕ: 26.03.2023 ಭಾನುವಾರದಂದು ಉಪ್ಪಾರ ಸಮುದಾಯ ಭವನ ಶಿವಮೊಗ್ಗದಲ್ಲಿ ಪ್ರಪ್ರಥಮ ಬಂಜಾರ ಸಾಹಿತ್ಯ ಸಮ್ಮೇಳನ ನಡೆಯಿತು. ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ ಸಣ್ಣ ರಾಮ ಬಂಜಾರ ಹಿರಿಯ ಸಾಹಿತಿಗಳು ಮತ್ತು ನಿರ್ದೇಶಕರು ಬಂಜಾರ ಭಾಷಾ ಅಧ್ಯಯನ ಮತ್ತು ಅಭಿವೃದ್ದಿ ಕೇಂದ್ರ ಕನ್ನಡ ವಿಶ್ವವಿದ್ಯಾಲಯ ಹಂಪಿ, ಡಾ. ಹರಿಲಾಲ ಪವ್ಹಾರ್, ಅಧ್ಯಕ್ಷರು ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು , ಶ್ರೀ ಡಿ ಬಿ ನಾಯ್ಕ್ ವಿಶ್ರಾಂತ ಕುಲಪತಿಗಳು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಗೊಟಗೋಡಿ, ಶ್ರೀಮತಿ ಇಂದುಮತಿ ಲಮಾಣಿ ಬಂಜಾರ ಹಿರಿಯ ಸಾಹಿತಿಗಳು ವಿಜಯಪುರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಗಿರೀಶ್ ಡಿ. ಆರ್. ಈ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡರು ನಿರ್ವಹಣೆ ಮಾಡಿದರು. ರಾಮು ಎನ್ ರಾಠೋಡ್ ಮಸ್ಕಿ ಸ್ವಾಗತಿಸಿದರು. ಮಧುನಾಯ್ಕ್ ಲಂಬಾಣಿ, ಗೋಪಾಲ್ ನಾಯಕ್ ಮತ್ತು ಬೆನಕ ನಾಯ್ಕ್ ಲಂಬಾಣಿ ಬಂಜಾರ ಭಾಷಾ ಗೋರ್ ಬೋಲಿ ಕವಿಗೋಷ್ಠಿ, ಪ್ರಬಂಧ ಮಂಡನೆ ಗೋಷ್ಠಿ ಮತ್ತು ವಾಯ್ಸ್ ಆಫ್ ಬಂಜಾರ ಕಲಾ ಮಳಾವೊ ಗೋಷ್ಠಿಗಳ ನಿರ್ವಹಣೆ ಮಾಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂಜಾರ ಸಾಹಿತಿಗಳು ಲೇಖಕರು ಬರಹಗಾರರು ಗಾಯಕರು ಕಲಾವಿದರು ಆಗಮಿಸಿ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು ಜೊತೆಗೆ ಮಹಿಳೆಯರು ಕೂಡ ತಮ್ಮ ಸಂಸ್ಕೃತಿಯ ವೇಷ ಭೂಷಣ ಸಮವಸ್ತ್ರದಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದ್ವಿತೀಯ ಬಂಜಾರ ಸಾಹಿತ್ಯ ಸಮ್ಮೇಳನವನ್ನು ವಿಜಯನಗರ ಜಿಲ್ಲೆಯಲ್ಲಿ ಆಯೋಜನೆ ಮಾಡಲು ಸರ್ವಾಧ್ಯಕ್ಷರು ಸರ್ವ ಸಾಹಿತಿಗಳ ಸಮ್ಮುಖದಲ್ಲಿ ನಿರ್ಣಯಿಸಿ ಅಧಿಕೃತ ಘೋಷಣೆ ಮಾಡಿ ಶ್ರೀ ಮಧು ನಾಯ್ಕ್ ಲಂಬಾಣಿ ವಿಜಯನಗರ ಅವರಿಗೆ ಸಮ್ಮೇಳನದ ಸರ್ವಾಧ್ಯಕ್ಷರು ಡಾ ಸಣ್ಣ ರಾಮ ಅವರು ಧ್ವಜ ಹಸ್ತಾಂತರ ಮಾಡಿದರು ಜೊತೆಗೆ ಪ್ರಥಮ ಬಂಜಾರ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ವಿಜಯಪುರದಲ್ಲಿ ಆಯೋಜನೆ ಮಾಡಲು ಶ್ರೀಮತಿ ಇಂದುಮತಿ ಲಮಾಣಿ ಬಂಜಾರ ಹಿರಿಯ ಸಾಹಿತಿಗಳು ವಿಜಯಪುರ ಅವರಿಗೂ ಕೂಡ ಧ್ವಜ ಹಸ್ತಾಂತರ ಮಾಡಲಾಯಿತು.
ವರದಿ – ಸಂಪಾದಕೀಯಾ