ಸಿದ್ದಗಂಗೆಯ ಸರ್ವೇಶ,,
ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಡಾ.ಶಿವಕುಮಾರ ಮಹಾಸ್ವಾಮಿಗಳಿಗೆ ಹುಟ್ಟು ಹಬ್ಬದ ಶುಭಾಶಯಗಳು💐
ಆಧ್ಯಾತ್ಮದೆಡೆ ಪಾದ ಬೆಳೆಸಿದ ನಡೆದಾಡುವ ದೈವ ಶ್ರೀ ಶ್ರೀ ಶ್ರೀ ಶಿವಯೋಗಿ ಶಿವಕುಮಾರ ಸ್ವಾಮಿಗಳ ಪಾದಕ್ಕೆ… ಅರ್ಪಣೆ.
ಓ ನನ್ನ ದೇವರೇ,
ನೀ ಹೀಗಿರಬಹುದೆಮದು ಮನಸಾ ಊಹಿಸಿ,ಕಲ್ಪಿಸಿ,ಅಲ್ಲಿಯೇ ಗುಡಿಯೊಂದ ಕಟ್ಟಿ,
ಈ ಹೃದಯವನೆ ಮಂದಿರವಾಗಿಸಿ,
ಹೋಮ-ಹವನವೆಂಬ ದ್ಯಾನವ ಮಾಡುತ್ತ,
ನಮಿಸುವೆನು…ಶಿವಕುಮಾರ ಶ್ರೀ ಶಿವಯೋಗಿ ಚರಣ ಕಮಲಗಳಿಗೆ..!
ನೀ ನಿಲ್ಲದ ಗುಡಿಯ ಕಂಡು,
ಭಕ್ತಿಯ ಜೋಳಿಗೆ ಹಾಕಿ,
ಭಕ್ತಿ ಭಂಡಾರದ ಭಕ್ತರಿಗೂ ಜ್ಞಾನ ಶಿವಯೋಗಿ ತತ್ವವ ನಾಡಿನ ಜನತೆಗೂ ಸಾರುವ ಜೊತೆ-ಜೊತೆಗೆ
ಶಿವ ನಾಮವ ಪಠಿಸುವೆ ನಾನು
ಈ ಕಲಿಯುಗದ ಕಾಮಧೇನುವಿಗೆ..!
ಬೆಳ್ಳಿ-ಬಂಗಾರ ಮೋಹಗಳ ತ್ಯಜಿಸಿ,
ಸಿರಿತನ ಸುಖವ ಬಯಸದ ಜೀವವಾಗಿ,
ತನ್ನನ್ನು ನೆನೆದವರಿಗೆ ಅನ್ನ- ಕಲಿಕೆ- ಜ್ಞಾನಗಳೆಂಬ ತ್ರಿವಿಧ ದಾಸೋಹಗಳ ನೀಡುತ್ತಾ,
ಮಹಾತಾಯಿ ಮಡಿಲಂತೆ ಲಿಂಗ ಪೂಜೆಗೈದು “ಬ್ರಹ್ಮಾಂಡ”ವನೇ ಸಾಧಿಸಿ..ಮಹಾಲೀಲೆಯ ತೋರಿದ ನನ್ನೋಡೆಯನ ಧ್ಯಾನಿಸುವೆನು..!
ಮಕ್ಕಳನ್ನೇ ತನ್ನಾಸ್ತಿಯಾನ್ನಾಗಿಸಿ,
ಅರಿಷಡ್ವರ್ಗಗಳನ್ನು ತ್ಯಜಿಸಿದ
ಈ ಮಹಾನ್ ಸತ್ಪುರುಷರಾಗಿ ಕಾವಿಯನ್ನೇ ಉಸಿರಾಗಿ ಧರಿಸಿ, ಕೈಲಾಸ ಕಂಡು ಎನ್ನಮನ ಮಂದಿರದ ಗದ್ದುಗೆಯೊಳು ಸುಪೂಜಿತ ಏಕನಾಥ ಶಿವರು ಇವರಯ್ಯಾ ಎಂದು ಸರ್ವಲೋಕಗಳಿಗೂ ಸಾರುವೆನು…
ಸಿ.ಆರ್ ಶಿವಕುಮಾರ್ ಶಿವಮೊಗ್ಗ,