*ಆನೆಗುಂದಿಯಲ್ಲಿ ಆಮ್ ಆದ್ಮಿ ಪಕ್ಷದ ಬೃಹತ್ ಜನ ಸಭೆ*

Spread the love

*ಆನೆಗುಂದಿಯಲ್ಲಿ ಆಮ್ ಆದ್ಮಿ ಪಕ್ಷದ ಬೃಹತ್ ಜನ ಸಭೆ*

ಆಮ್ ಆದ್ಮಿ ಪಕ್ಷ ಗಂಗಾವತಿಯಿಂದ ನಿನ್ನೆ ದಿನಾಂಕ 1/4/2023 ರಂದು ಸಂಜೆ ಆರು ಗಂಟೆಗೆ ಆನೆಗುಂದಿಯಲ್ಲಿ ಜನ ಸಭೆ ಆಯೋಜಿಸಲಾಗಿತ್ತು. ಜನ ಸಭೆಯನ್ನು ಉದ್ದೇಶಿಸಿ ಪಕ್ಷದ ಅಭ್ಯರ್ಥಿ ಶರಣಪ್ಪ ಸಜ್ಜಿ ಹೊಲ ಮಾತನಾಡಿ-ಸಾಂಪ್ರದಾಯಿಕ ಪಕ್ಷಗಳ ಜೊತೆಗೆ  ಪರ್ಯಾಯ ಪರಿಹಾರದ ಪಕ್ಷ ನಿಮ್ಮ ಮುಂದಿದೆ, ಹಣ ಬಲ ಜಾತಿ ಬಲ ತೋಳಬಲ -ಇವುಗಳ ಕುರಿತು ಚರ್ಚೆ ನಡೆಯುತ್ತಿದ್ದ ಚುನಾವಣೆಯಲ್ಲಿ ಈಗ ನಮ್ಮ ಮಕ್ಕಳ ಸುಂದರ ಭವಿಷ್ಯದ ಬಗ್ಗೆ, ಅವರ ಶಿಕ್ಷಣದ ಬಗ್ಗೆ, ನಮ್ಮ ಆರೋಗ್ಯದ ಕಾಳಜಿಯ ಬಗ್ಗೆ ಮಾತನಾಡುವಂತೆ, ನಮ್ಮ ತೆರಿಗೆ ಹಣದಿಂದ ನಮಗೆ ಸಿಗುತ್ತಿರುವ ಹಕ್ಕುಗಳ ಬಗ್ಗೆ, ಮಾತನಾಡುವಂತೆ ಆಮ್ ಆದ್ಮಿ ಪಕ್ಷ ಮಾಡಿದೆ. ಇಂದು ಈ ಚುನಾವಣಾ ಹೊಸ್ತಿಲಲ್ಲಿ ಹಣ ಜಾತಿ ಆಮಿಷಗಳನ್ನು ಬಿಟ್ಟು ನಮ್ಮ ಹಾಗೂ ನಮ್ಮ ಮಕ್ಕಳ ಸುಂದರ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ಸಾಂಪ್ರದಾಯಿಕ ಪಕ್ಷಗಳು ಈ ವಿಚಾರವನ್ನು ಎಂದಿಗೂ ಮಾತನಾಡುವುದಿಲ್ಲ. ಆದರೆ ಆಮ್ ಆದ್ಮಿ ಪಕ್ಷ ಈ ವಿಚಾರಗಳನ್ನು ಮಾತನಾಡುವುದಷ್ಟೇ ಅಲ್ಲ ಆಮ್ ಆದ್ಮಿ ಪಕ್ಷ ಅಧಿಕಾರ ಹಿಡಿದಲ್ಲೆಲ್ಲ ಈಗಾಗಲೇ ಇವನ್ನು ಸಾಧಿಸಿ ತೋರಿಸಿದೆ. ಆದ್ದರಿಂದ ಆಮ್ ಆದ್ಮಿ ಪಕ್ಷದ ಪೊರಕೆ ಚಿಹ್ನೆಗೆ ಎಲ್ಲರೂ ಒಂದು ಅವಕಾಶ ಕೊಡಬೇಕು. ಎಂದು ಮನವಿ ಮಾಡಿದರು. ಅದೇ ರೀತಿ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ್ ಮಾತನಾಡಿ-ಆಮ್ ಆದ್ಮಿ ಪಕ್ಷವು ನಿಮ್ಮ ಆಯ್ಕೆಗಾಗಿ ಸರಳ ಪ್ರಾಮಾಣಿಕ ವ್ಯಕ್ತಿ ಎನ್ನು ನಿಮ್ಮ ಮುಂದೆ ನೀಡಿದೆ, ನಿರಂತರ ಜನಪರ ಹೋರಾಟಗಳನ್ನು ಮಾಡುತ್ತಾ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ. ಅವರ ಜನಪರ ಹೋರಾಟಗಳು ಬರಿ ಹೋರಾಟಗಳಾಗಿ ಉಳಿಯಬಾರದು , ನೀವೆಲ್ಲ ಅವರನ್ನು ಆಯ್ಕೆ ಮಾಡಿ ಗಂಗಾವತಿ ಕ್ಷೇತ್ರದಿಂದ  ವಿಧಾನಸಭೆಗೆ ಕಳುಹಿಸಿದಲ್ಲಿ, ನಿಮ್ಮ ಎಲ್ಲರ ಸಮಸ್ಯೆಗಳನ್ನು ಪೊರಕೆಯಿಂದ ನಿಸ್ಸಂಶಯವಾಗಿ ಸ್ವಚ್ಛ ಮಾಡಿ, ನಿಮ್ಮೆಲ್ಲ ಬದುಕು ಸುಂದರಗೊಳಿಸುವುದರ ಜೊತೆಗೆ, ನಿಮ್ಮ ಮಕ್ಕಳ ಸುಂದರ ಭವಿಷ್ಯವನ್ನು ನಿರ್ಮಾಣ ಮಾಡುತ್ತಾರೆ. ಒಂದು ಅವಕಾಶ “ಈ ಸಲ  ಶರಣಪ್ಪ ಸಜ್ಜಿಹೊಲ”  ಇದು ನಿಮ್ಮ ಮಂತ್ರವಾಗಬೇಕು ಎಂದು ಶರಣಪ್ಪ ಸಜ್ಜಿಹೊಲ ಪರ ಮನವಿ ಮಾಡಿದರು. ಸಭೆಯ ವೇದಿಕೆಯಲ್ಲಿ ಗ್ರಾಮದ ಕಾರ್ಮಿಕ ಮುಖಂಡರಾದ ಮಾರೆಪ್ಪ ,ಬೋಗೇಶ್ ಆನೆಗುಂದಿ, ರಮೇಶ್ ರವರು ಉಪಸ್ಥಿತರಿದ್ದು ನಾವುಗಳೆಲ್ಲ ಶರಣಪ್ಪ ಸಜ್ಜಿ ಹೊಲ ಜೊತೆ ಕೈಜೋಡಿಸಿ ಕ್ರಾಂತಿಯನ್ನು ಮಾಡೋಣ ಎಂದರು. ಪಕ್ಷದ ಮುಖಂಡರಾದ ರಾಘವೇಂದ್ರ ಸಿದ್ದಿಕೆರೆ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಇತರೆ ಮುಖಂಡರಾದ ವೆಂಕಟೇಶ್ ಕೊರಮ್ಮ ಕ್ಯಾಂಪ್, ಮಣಿಕಂಠ, ರವಿಕುಮಾರ್, ಗಣೇಶ್, ದೇವರಾಜ್ ರಾಂಪುರ, ಗಾಂಧಿ ಕುಮಾರ್, ನಜೀರ್ ಹುಸೇನ್, ಯರ್ರಿಸ್ವಾಮಿ ಕುಂಟೋಜಿ, ಹಾಗೂ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ-ಬಾಲರಾಜ ಯಾದವ್

Leave a Reply

Your email address will not be published. Required fields are marked *