ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಎಎಪಿ ಅಭ್ಯರ್ಥಿ ದಿನೇಶ್ ಕುಮಾರ್ ಬಿ. ಆಯ್ಕೆ.
2023ರ ಸಾರ್ವತ್ರಿಕ ಚುನಾವಣೆಯ ದಿನಾಂಕ ಪ್ರಕಟವಾದ ಬೆನ್ನಲ್ಲೇ ಆಮ್ ಆದ್ಮ ಪಕ್ಷದಿಂದ ಅಭ್ಯರ್ಥಿಗಳ ಎರಡನೇಯ ಆಯ್ಕೆ ಪಟ್ಟಿ ಬಿಡುಗಡೆ ಮಾಡಿಲಾಗಿದೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದ ತುಮಕೂರ ಜಿಲ್ಲೆಯ ಮೂಲದ ದಿನೇಶ್ ಕುಮಾರ್.ಬಿ. ಅವರನ್ನು ಆಯ್ಕೆ ಮಾಡಿ ಎರಡನೇ ಪಟ್ಟಿಯಲ್ಲಿ ಆದೇಶ ಹೊರಡಿಸಲಾಗಿದೆ. ನಮ್ಮೊಂದಿಗೆ ಮಾತನಾಡಿದ ಅವರು ತುಮಕೂರು ಗ್ರಾಮಾಂತರ ಕ್ಷೇತ್ರದ ಜನರ ಸೇವೆ ಮಾಡಲು ನಮ್ಮ ಪಕ್ಷವೂ ಅವಕಾಶವನ್ನು ನೀಡಿದೆ. ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದ ನನ್ನನ್ನು ಗುರುತಿಸಿ ಜನಸೇವೆಗೆ ಕಳುಹಿಸಿದ್ದು, ಪ್ರಾಮಾಣಿಕವಾಗಿ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಪ್ರಚಾರವನ್ನು ಮಾಡುತ್ತೇವೆ. ರಾಜ್ಯದಲ್ಲೂ ಈ ಬಾರಿ ನಮ್ಮ ಪಕ್ಷದಿಂದ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ನೀಡುತ್ತಿದ್ದು ಕ್ಷೇತ್ರದಲ್ಲಿ ಬಹುಮತ ಸಾಧಿಸುತ್ತೇವೆ. ಜೊತೆಗೆ ಸಾಂಪ್ರದಾಯಿಕ ಪಕ್ಷಗಳ ಜೊತೆಗೆ ಪರ್ಯಾಯ ಪರಿಹಾರದ ಪಕ್ಷ ನಿಮ್ಮ ಮುಂದಿದೆ, ಹಣ ಬಲ ಜಾತಿ ಬಲ ತೋಳಬಲ -ಇವುಗಳ ಕುರಿತು ಚರ್ಚೆ ನಡೆಯುತ್ತಿದ್ದ ಚುನಾವಣೆಯಲ್ಲಿ ಈಗ ನಮ್ಮ ಮಕ್ಕಳ ಸುಂದರ ಭವಿಷ್ಯದ ಬಗ್ಗೆ, ಅವರ ಶಿಕ್ಷಣದ ಬಗ್ಗೆ, ನಮ್ಮ ಆರೋಗ್ಯದ ಕಾಳಜಿಯ ಬಗ್ಗೆ ಮಾತನಾಡುವಂತೆ, ನಮ್ಮ ತೆರಿಗೆ ಹಣದಿಂದ ನಮಗೆ ಸಿಗುತ್ತಿರುವ ಹಕ್ಕುಗಳ ಬಗ್ಗೆ, ಮಾತನಾಡುವಂತೆ ಆಮ್ ಆದ್ಮಿ ಪಕ್ಷ ಮಾಡಿದೆ. ಕ್ಷೇತ್ರದ ಜನರು ನಮ್ಮನ್ನು ಆಶೀರ್ವದಿಸಬೇಕು ಎಂದರು.
ವರದಿ-ಸಂಪಾದಕೀಯಾ