ಕೂಡ್ಲಿಗಿ:ಒಳಮೀಸಲಾತಿ ವಿರೋಧಿಸಿ ಬೃಹತ್ ಪ್ರತಿಭಟನೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ, ಸರ್ಕಾರದ ಒಳಮೀಸಲಾತಿ ನೀತಿಯನ್ನು ಖಂಡಿಸಿ. ಬಂಜಾರ ಸಮುದಾಯದಿಂದ ಎ 3ರಂದು, ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಮುಖಂಡರು , ಹೋರಾಟಗಾರರು ಮಾತನಾಡಿದರು. ಭಾರತದ ಸಂವಿಧಾನದಲ್ಲಿ ಅವಕಾಶವಿಲ್ಲದ, ಹಾಗೂ ಸುಪ್ರೀಂಕೋರ್ಟನ ತೀರ್ಪಿಗೆ ವಿರುದ್ದವಾಗಿ. ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳಮೀಸಲಾತಿ) ಹಂಚಿಕೆ ಮೂಲಕ, ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು ಸ್ವಾಗತಾರ್ಹವಲ್ಲ.
ಈ ಶಿಫಾರಸ್ಸನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು. ಸಚಿವರಾದ ಜೆ.ಸಿ. ಮಾಧುಸ್ವಾಮಿಯವರ ಉಪ ಸಮಿತಿಯ ವರದಿಯಲ್ಲಿ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ, ಸಹೋದರ ಸಮುದಾಯಗಳ ಕುರಿತು. ವಸ್ತುನಿಷ್ಠ ಅಧ್ಯಯನ ಇಲ್ಲದೆ, ಅನಗತ್ಯವಾಗಿ “ಸ್ಪಶ್ಯರು. ಅಸ್ಪೃಶ್ಯರು, ಎಡಗೈ, ಬಲಗೈ, ಎಲ್ಲಾ ಸೌಲಭ್ಯ ಪಡೆದವರು, ಮುಂದುವರೆದವರು, ಅಭಿವೃದ್ಧಿ ಆಗಿರುವವರು” ಎಂದು ಅರೋಪಿಸಿರುವುದನ್ನು ವಾಪಸು ಪಡೆಯಬೇಕು. ಹೀಗೆ ಅಸಂವಿಧಾನಿಕ, ಅವಾಸ್ತವಿಕ ಅಂಶಗಳ ಮುಖಾಂತರ, ಪರಿಶಿಷ್ಟ ಸಹೋದರ ಸಮುದಾಯಗಳ ನಡುವಿನ ಐಕ್ಯತೆಗೆ ದಕ್ಕೆ ತರಲಾಗಿದೆ. ಭೋವಿ,ಲಂಬಾಣಿ,ಕೊರಚ, ಕೊರಮ ಸಮುದಾಯಗಳನ್ನು, ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಬಿಡುವ ಯಾವುದೇ ಪ್ರಸ್ತಾಪಗಳು. ರಾಜ್ಯ ಸರ್ಕಾರದ ಎದುರಿಗೆ ಇಲ್ಲ ಎಂಬ ಲಿಖಿತ ಉತ್ತರವನ್ನು, ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಪತ್ರದ ಮೂಲಕ ರವಾನಿಸಿದ್ದು. ಇದನ್ನು ಮಾಡಿದ ರಾಜ್ಯ ಸಚಿವರ ಸಂಪುಟದ ನಿರ್ಣಯ ಸ್ವಾಗತಾರ್ಹ. ಆದೇರೀತಿ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದರು. ಈ ಸಂಧರ್ಭದಲ್ಲಿ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಜಿಲ್ಲಾಧ್ಯಕ್ಷ ಶಿವ ಕುಮಾರ್. ಕೂಡ್ಲಿಗಿ ಬಂಜಾರಾ ಸಂಘದ ತಾಲೂಕು ಅಧ್ಯಕ್ಷ ಶ್ಯಾಮಾ ನಾಯ್ಕ್, ಪ್ರಕಾಶ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯ್ಕ್, ಮಾರ್ಗದರ್ಶಕರಾದ ರಾಮಾ ನಾಯ್ಕ್, ವೆಂಕಟೇಶ್ ನಾಯ್ಕ್ , ರಾಮು ನಾಯ್ಕ್, ಪಟ್ಟಣ ಪಂಚಾಯ್ತಿ ಸದಸ್ಯ ಭಾಸು ನಾಯ್ಕ್, ತಿಪ್ಪೇಸ್ವಾಮಿ ನಾಯ್ಕ್, ಯಮುನಾ ನಾಯ್ಕ್, ಜಿತೇಂದ್ರ, ದುರ್ಗ್ಯ ನಾಯ್ಕ್ ಇದ್ದರು. ಕೂಡ್ಲಿಗಿ ಪಟ್ಟಣ ಸೇರಿದಂತೆ, ತಾಲೂಕಿನ ವಿವಿದ ತಾಂಡಗಳ ಮುಖಂಡರು. ನಾಯಕ್ ಡಾವೋ, ಕಾರ್ಭಾರೀ ಮತ್ತು ಮುಖಂಡರು ಮತ್ತು ಭೋವಿ ಸಮಾಜದ ಮುಖಂಡರು, ಹಾಗೂ ಯುವಕರು ಇದ್ದರು.
ವರದಿ-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.