ಅಕ್ಕಿ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹಿರೇಮ್ಯಾಗೇರಿ ಗ್ರಾಮದ ಹನುಮಂತಪ್ಪ.

Spread the love

ಅಕ್ಕಿ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹಿರೇಮ್ಯಾಗೇರಿ ಗ್ರಾಮದ ಹನುಮಂತಪ್ಪ.

ಯಲಬುರ್ಗಾ: 105 ಕೆ.ಜಿ. ತೂಕದ ಅಕ್ಕಿ ಚೀಲ ಹೊತ್ತು ಐತಿಹಾಸಿಕ ಅಂಜನಾದ್ರಿ ಬೆಟ್ಟ ಹತ್ತಿದ ಹನುಮಂತಪ್ಪ. ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ 34 ವಯಸ್ಸಿನ ಹನುಮಂತಪ್ಪ ಪೂಜಾರ ಎಂಬ ಯುವಕ ರವಿವಾರ 105 ಕೆ.ಜಿ. ತೂಕದ ಅಕ್ಕಿ ಚೀಲ ಹೊತ್ತು ಐತಿಹಾಸಿಕ ಅಂಜನಾದ್ರಿ ಬೆಟ್ಟ ಏರಿದ್ದಾನೆ. ಬೆಳಗ್ಗೆ 6ಕ್ಕೆ ಬೆಟ್ಟ ಏರುವುದನ್ನು ಪ್ರಾರಂಭಿಸಿ 50 ನಿಮಿಷಗಳಲ್ಲಿ 575 ಮೆಟ್ಟಿಲುಗಳನ್ನು ಹತ್ತಿ ಗಮನ ಸೆಳೆದರು. ಆಂಜನೇಯ ದೇವಸ್ಥಾನದ ಆರ್ಚಕರು ಇವರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಕುರಿಗಾಹಿಯಾಗಿರುವ ಹನುಮಂತಪ್ಪ ಪೂಜಾ‌ರ ಆಂಜನೇಯನ ದರ್ಶನ ಪಡೆಯಬೇಕು. ಎಂದು ಹಲವು ವರ್ಷಗಳಿಂದ ಸಂಕಲ್ಪ ಮಾಡಿದ್ದರು. ಮೊದಲ ಬಾರಿ ಬೆಟ್ಟ ಹತ್ತಿದ್ದನ್ನು ಸ್ಮರಣೀಯವಾಗಿಸಬೇಕೆಂಬ ಕಾರಣದಿಂದ ಆಕ್ಸಿಚೀಲ ಹೊತ್ತು ಹತ್ತಲು ನಿರ್ಧರಿಸಿದ್ದರು. ಇವರ ಆಸೆಗೆ ಸ್ನೇಹಿತರು ನೆರವಾದರು. ಬಿಸಿಲು ಹೆಚ್ಚಾಗುವ ಮೊದಲೇ ಬೆಟ್ಟ ಹತ್ತಿ ಇಳಿಯಬೇಕು ಎಂದು ನಿರ್ಧರಿಸಿದ್ದೆ. ಅಂದುಕೊಂಡಂತೆ ಮಾಡಿದ್ದಕ್ಕೆ ಖುಷಿಯಾಗಿದೆ ಎನ್ನುತ್ತಾರೆ ಹನುಮಂತಪ್ಪ ಸಾಹಸ ಪ್ರದರ್ಶನ : ಹನುಮಂತಪ್ಪ ತಮ್ಮ ಸ್ವಗ್ರಾಮ ಹಿರೇಮ್ಯಾಗೇರಿಯಿಂದ ಗಜೇಂದ್ರಗಡ ಗ್ರಾಮದವರೆಗೆ ಅಕ್ಕಿಚೀಲ ಹೊತ್ತು ಸಾಗಿದ್ದರು. ಮತ್ತು ನೊಗಕ್ಕೆ ಹೆಗಲು ಕೊಟ್ಟು ಐದೇ ಗಂಟೆಗಳಲ್ಲಿ ನಾಲ್ಕು ಎಕರೆ ಎಡೆ ಹೊಡಿದ್ದರು. ಇಂತಹ ಸಾಹಸ ಪ್ರದರ್ಶನ ಮಾಡಿದಾಗ ಗ್ರಾಮಸ್ಥರು ಇವರ ಮೆರವಣಿಗೆ ಪ್ರೋತ್ಸಾಹ ಮಾಡುತ್ತಾರೆ. ಅಂಜನಾದ್ರಿ ಬೆಟ್ಟವೇರಲು ಗ್ರಾಮದ ಯುವಕರಾದ ಕಳಕಪ್ಪ ಕಲ್ಗುಡಿ, ನಿಂಗರಾಜ, ಶರಣಪ್ಪ ನಿಂಗರಾಜ, ಕಲ್ಲಪ್ಪ, ಮುತ್ತಪ್ಪ, ಹಸನಸಾಬ್‌, ಖಜಾಸಾಬ್ ಅವರು ಪ್ರೋತ್ಸಾಹ ನೀಡಿದ್ದಾರೆ.  ನಮ್ಮೂರಿನ ಹನುಮಂತಪ್ಪ ಪೂಜಾರ ಇತರ ಯುವಕರಿಗೆ ಮಾದರಿಯಾಗಿದ್ದಾರೆ. ಉತ್ತಮ ಆರೋಗ್ಯಕ್ಕೆ ದೈಹಿಕ ಕಸರತ್ತು ಅತೀ ಅವಶ್ಯಕ, ನಮ್ಮೂರಲ್ಲಿ ದೈಹಿಕ ಸದೃಢತೆ ಹೊಂದಿದ ಯುವಕರಿದ್ದಾರೆ. ಸಾಹಸ ಕ್ರೀಡೆ, ಪ್ರದರ್ಶನಗಳಿಗೆ ಸದಾ ಮುಂದೆ. ಆಂಜನೇಯನ ಆಶೀರ್ವಾದದಿಂದ ಇಷ್ಟೆಲ್ಲಾ ಮಾಡಲು ಸಾಧ್ಯವಾಗಿದೆ. ನಿಂಗರಾಜ ಹೊಸಮನಿ, ಗ್ರಾಮಸ್ಥ.

ವರದಿ – ಹುಸೇನಬಾಷ ಮೋತೆಖಾನ್

Leave a Reply

Your email address will not be published. Required fields are marked *