ದಿಡೀರ್ ಭೇಟಿ ನೀಡಿ ಮತಗಟ್ಟೆ, ಚಕ್ ಪೋಸ್ ಪರಿಶೀಲಿಸಿದ ಜಿ.ಪಂ ಸಿಇಒ.
ಚಕ್ ಪೋಸ್ಟ್ ನಲ್ಲಿ ಪ್ರತಿಯೊಂದು ವಾಹನ ತಪಾಸಣೆ ಮಾಡಿ: ರಾಹುಲ್ ರತ್ನಂ ಪಾಂಡೆ. ಯಲಬುರ್ಗಾ: ತಾಲೂಕಿನ ಸಂಗನಹಾಳ, ತೊಂಡಿಹಾಳ ಗ್ರಾಮದ ಮತಗಟ್ಟೆ ಹಾಗೂ ಸಂಕನೂರ ಕ್ರಾಸ್ ಚಕ್ ಪೋಸ್ಟ್ ಗೆ ದಿಡೀರ್ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡ್ ಅವರು ಪರಿಶೀಲಿಸಿದರು. ತಾಲೂಕಿನಲ್ಲಿ ಕಳೆದ ಬಾರಿ ಕಡಿಮೆ ಮತದಾನವಾದ ಸಂಗನಹಾಳ, ತೊಂಡಿಹಾಳ, ಬಂಡಿಹಾಳ, ಕರಮೂಡಿ ಗ್ರಾಮದ ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ವಯಸ್ಸಾದವರಿಗೆ ರ್ಯಾಂಪ್, ನೀರು, ಕುಡಿಯುವ ನೀರು, ಬೆಳಕು ಹಾಗೂ ಶೌಚಾಲಯಗಳ ಪರಿಶೀಲಿಸಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮ ವಹಿಸಲು ಸಂಬಂಧಪಟ್ಟ ಪಿಡಿಒರವರಿಗೆ ಸೂಚಿಸಿದರು. ಈ ಬಾರಿ ಕಡಿಮೆ ಮತದಾನವಾದ ಮತಗಟ್ಟೆಯಲ್ಲಿ ಶೇಕಡಾ 100 ರಷ್ಟು ಮತದಾನವಾಗಬೇಕು. ಹಾಗೇ ಚಕ್ ಪೋಸ್ಟ್ ಗಳಲ್ಲಿ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಬೇಕು. ವಾಹನದಲ್ಲಿ ದಾಖಲೆಗಳಿಲ್ಲದ ವಸ್ತುಗಳು, ಹಣ ಮುಂತಾದವು ಕಂಡುಬಂದಲ್ಲಿ ಕೂಡಲೇ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಸಂಗನಹಾಳ ಗ್ರಾಮದ ಅಮೃತ ಸರೋವರ ಕಾಮಗಾರಿ ಪರಿಶೀಲಿಸಿ, ಪ್ರತಿ 15 ದಿನಕ್ಕೊಮ್ಮೆ ನೀರಿನ ಗುಣಮ್ಟ ಪರಿಶೀಲಿಸಿ ಕುಡಿಯಲು ಯೋಗ್ಯವಾಗಿರುವ ಬಗ್ಗೆ ಆರ್ ಡಬ್ಲೂ ಎಸ್ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ತಹಶೀಲ್ದಾರರಾದ ವಿಠಲ್ ಚೌಗಲೆ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಪಾಟೀಲ್ ಬಿರಾದಾರ್, ಸಹಾಯಕ ನಿರ್ದೇಶಕರಾದ ಕು. ಗೀತಾ ಅಯ್ಯಪ್ಪ, ತಾಂತ್ರಿಕ ಸಂಯೋಜಕರಾದ ಸಂತೋಷ ನಂದಾಪುರ, ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ಗ್ರಾ.ಪಂ ಪಿಡಿಒರವರು, ಪೊಲೀಸ್ ಸಿಬ್ಬಂದಿ ಹಾಜರಿದ್ದರು,
ವರದಿ- ಹುಸೇನಬಾಷ ಮೊತೇಖಾನ್