ಕೋಟಿ ವಿದ್ಯೆಕ್ಕಿಂತ ಮೇಟಿ ವಿದ್ಯೆಯೇ ಮೇಲು …!!

Spread the love

ಕೋಟಿ ವಿದ್ಯೆಕ್ಕಿಂತ ಮೇಟಿ ವಿದ್ಯೆಯೇ ಮೇಲು …!!

ಒಡ್ಡು ಗಟ್ಟಿ ಇದ್ದರೆ ಹೊಲ….

ಅನ್ನ,ರೊಟ್ಟಿ ಇದ್ದರೆ ಮೈಯಲ್ಲಿ ಬಲ…..

ಅದಕ್ಕಾಗಿ ನೀವು… ರಕ್ಷಿಸಿ ಈ ಭೂಮಿ, ಮತ್ತು ಜೀವಜಲ !!

 

ಕೋಟಿ ಕೋಟಿ ಜೀವರಾಶಿಗಳಿಗೆ ಜೀವದಾತೆ, ಅನ್ನಧಾತೆ ಈ ಭೂ ತಾಯಿ !

 

ಭೂತಾಯಿ ಮಗ ರೈತ ನೆಂದು ಹೋಗಳುವವರು….  ಅನ್ನಧಾತನನ್ನು ಅಲಕ್ಷ್ಯ ಮಾಡಿ ಬಡುಕೋಬೇಡಿ ಕೈ ಬಾಯಿ ….!!

 

ಎಷ್ಟು ಸಾವಿರ ವಿದ್ಯೆಗಳನ್ನು ಕಲಿತರೂ, ಆಕಾಶದಲ್ಲಿ ಹಕ್ಕಿಯಂತೆ ಹಾರಿದರೂ ,

ನೂರು ಸಂಶೋಧನೆ ಮಾಡಿದರೂ,

ಒಂದುಕಾಳನ್ನು ಸೃಷ್ಟಿಸಲು ಸಾಧ್ಯವಿಲ್ಲ,!

 

ತಿನ್ನುವುದು ಮಾತ್ರ ಈ ನೇಗಿಲಯೋಗಿ ಬೆವರು ಸುರಿಸಿ ಬೆಳೆದ ಅನ್ನವನ್ನು ……!!

 

ಯಾವುದೇ ಉದ್ಯೋಗದಿಂದ ಹಣವನ್ನು ಸಂಪಾದಿಸಿ, ಲಕ್ಷಾಧಿಪತಿ,ಕೊಟ್ಯಾಧಿಪತಿ,ಎಂದು ಅನ್ನಿಸಿಕೊಂಡರು

ಕೂಡ, ……!ಹೊಟ್ಟೆತುಂಬಿ ಜೀವದ ಉಸಿರು ಆನಂದದಿಂದ ಚಲನ ವಲನವಾಗುವುದು ಅನ್ನದಿಂದ, …..!

ಈ ಅನ್ನಧಾತರಾದ ರೈತರಿಂದ, ….

ಈ ಕೋಟಿ,ಕೋಟಿ ಗಳಿಸಿದ ಕಾಗದದ ಹಣದಿಂದಲ್ಲ ,….!!

 

ಒಕ್ಕಲುತನ ಮಾಡಿ ಕೋಟಿ ಕೋಟಿ,ಜೀವಿಗಳ ಜೀವಧಾತನಾದ ರೈತನೆಂದರೆ ….

 

ಒಕ್ರದೃಷ್ಟಿ,ತಾಚಾರದ ವಿಚಾರ ಮಾಡಿ,

ನೌಕರಿ, ವಿದ್ಯಾವಂತ, ಅಧಿಕಾರಿ,ರಾಜಕೀಯ, ಈ ಕ್ಷೇತ್ರದವರ ಶೋಕಿ ಜೀವನ ಹೆಚ್ಚಾಗಿ, .!

ಕೃಷಿ ಕುಟುಂಬಗಳು ನುಚ್ಚು ನೂರಾಗಿ, ಪಟ್ಟಣದತ್ತ ಸಾಗಿ,…!

ರೈತನ ಜೀವನ ವಲಸೆಯ ಯಾತನೆಯ ಪಾಡಾಗಿದೆ,….!

ಕೋಟಿ,ಕೋಟಿ,ಜನರಿಗೆ ಮೇಟಿ ಹಿಡಿದು ಅನ್ನಹಾಕಿ ಸಲಹುತ್ತಿದ್ದ ರೈತರು,….!

ತುತ್ತು ಅನ್ನಕ್ಕಾಗಿ ಪಟ್ಟಣ ಸೇರಿ … ಮತ್ತೊಬ್ಬರ ಮುಂದೆ ಕೈ ಚಾಚುವಂತಾಗಿದೆ,…!

ಕಾರಣ….

ನಿಮಗೆ ಗೊತ್ತಿದೆಯಲ್ಲವೇ …?

ಅದಕ್ಕಾಗಿ ಕೋಟಿ ವಿದ್ಯೆಕ್ಕಿಂತ … ಮೆಟೀನೇ ಮೇಲು …!!

ಕೃಷಿ ಇದ್ದರೆ ಖುಷಿ …

ಕೃಷಿಯಿಂದಲೇ ಜೀವನ ರಸ ಋಷಿ,…!!

ಹನುಮಂತಪ್ಪ, ಕಿಡದೂರು,@ನಾರಿನಾಳ,

Leave a Reply

Your email address will not be published. Required fields are marked *