ಕರ್ನಾಟಕ ರೈತ ಸಂಘ–ಎಐಕೆಕೆಎಸ್ ತಾಲೂಕು ಸಮಿತಿ ಸಿಂಧನೂರು ಭೂ ಸಂಘರ್ಷ ಪರ್ವ : ನೂತನ ತಾಲೂಕು ನಾಯಕತ್ವ ಅಸ್ತಿತ್ವಕ್ಕೆ !
ದಿನಾಂಕ : 05.04.2023 ರಂದು ಸಿಂಧನೂರಿನ ಶ್ರಮಜೀವಿ ಭವನದಲ್ಲಿ ಕರ್ನಾಟಕ ರೈತ ಸಂಘ-ಎಐಕೆಕೆಎಸ್ ತಾಲೂಕು ಸಮಿತಿ ವಿಸ್ತೃತ ಸಭೆ ನಡೆಯಿತು. ಸರಾಸರಿ 25 ಗ್ರಾಮಗಳ ಪ್ರತಿನಿಧಿಗಳು ರೈತ ಹಾಗೂ ಕಾರ್ಮಿಕ ಮುಖಂಡ ಆರ್.ಮಾನಸಯ್ಯನವರು ಸಂಘದ ಜಿಲ್ಲಾ ಉಪಾಧ್ಯಕ್ಷ ಸಂತೋಷ ಹಿರೇದಿನ್ನಿ ಹಾಗೂ ಮಾರುತಿ ಜಿನ್ನಾಪೂರ ಮುಂತಾದವರು ಭಾಗವಹಿಸಿದ್ದರು. ಕರ್ನಾಟಕ ರೈತ ಸಂಘವು ರಾಜ್ಯಮಟ್ಟದಲ್ಲಿ ರೂಪಿಸಿದ ಭೂ ಸಂಘರ್ಷ ಪರ್ವದ ರೂಪರೇಷಗಳನ್ನು ವಿವರಿಸಿದರು. ರೈತ ಸಂಘ ಯಶಸ್ವಿಗೊಳಿಸಿದ ಭೂ ಹೋರಾಟಗಳ ಯಶೋಗಾಧೆಯನ್ನು ವಿವರಿಸಲಾಯಿತು. ರಾಜ್ಯ ಬಿಜೆಪಿ ಸರಕಾರದ ಕಾರ್ಪೋರೇಟ್ ಹಾಗೂ ಭೂಮಾಲೀಕರ ಪರ ಭೂ ನೀತಿ ವಿರುದ್ಧ ಭೂ ರಹಿತ ರೈತರನ್ನು ಸಂಘಟಿಸಿ, ಭೂಸ್ವಾಧೀನಪಡಿಸಿಕೊಳ್ಳುವ ಹೋರಾಟವನ್ನು ಪ್ರಸ್ತಾಪಿಸಲಾಯಿತು. ಹೋರಾಟದ ಹೆಸರಿನಲ್ಲಿ ಭೂಮಿ ಬಿಕ್ಷೆ ಕೇಳುವುದು ಇಡೀ ರೈತ ಚಳುವಳಿಗೆ ಅವಮಾನ. ಸಂಘರ್ಷದ ಹಾದಿಯಲ್ಲಿ “ಊಳುವವನೇ ಭೂ ಒಡೆಯ ಎಂದು ಹೋರಾಡಬೇಕೆಂದು ಅಭಿಪ್ರಾಯಕ್ಕೆ ಬರಲಾಯಿತು. ಅಲ್ಲದೆ, ಮಹಿಳಾ ನಾಯಕತ್ವದ ರೈತ ಚಳುವಳಿ ಕಟ್ಟುವ ಸರಿಯಾದ ಸಂಘಟನಾ ಪದ್ಧತಿ ಪ್ರಕಾರ ನೂತನ ತಾಲೂಕು ಸಮಿತಿಯನ್ನು ಚುನಾಯಿಸಲಾಯಿತು. ಕರ್ನಾಟಕ ರೈತ ಸಂಘ ನೂತನ ತಾಲೂಕು ಸಮಿತಿ :ಅಧ್ಯಕ್ಷರಾಗಿ, ಅಂಬಮ್ಮ ಬಸಾಪೂರ, ಉಪಾಧ್ಯಕ್ಷರಾಗಿ, ಹನುಮಂತಪ್ಪ ಈರಣ್ಣ ಕ್ಯಾಂಪ್ ಹಾಗೂ ಹಂಪಮ್ಮ ಹನುಮನಗರ ಕ್ಯಾಂಪ್, ಕಾರ್ಯದರ್ಶಿಯಾಗಿ, ಹನುಮಂತಪ್ಪ ಸುಕಾಲಪೇಟೆ ಖಜಾಂಚಿಯಾಗಿ ಉಷಾ, ಎಂ.ಜಿ, ಮತ್ತು ತಾಲೂಕು ಸಮಿತಿಯಲ್ಲಿ ಒಟ್ಟು 13 ಜನರ ಸಮಿತಿಯಲ್ಲಿ ೮ ಜನರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚುನಾಯಿತರಾದರು. ಅಂಬಮ್ಮ ಬಸಾಪೂರ ಅಧ್ಯಕ್ಷರು ಕರ್ನಾಟಕ ರೈತ ಸಂಘ-ಎಐಕೆಕೆಎಸ್.
ವರದಿ-ಸಂಪಾದಕೀಯಾ