“ಮತದಾನ ಜಾಗೃತಿಯ ಮಹದಾನ”
ಮತದಾನ ಮಾಡುವುದು ನಮ್ಮ ನಾಗರಿಕ ಜವಾಬ್ದಾರಿ ಮತ್ತು ಇದು ನಮ್ಮ ರಾಷ್ಟ್ರದ ಮೂಲಭೂತ ಹಕ್ಕುಗಳಲ್ಲಿ ಇದು ಕೂಡ ಒಂದು ಅತ್ಯಮೂಲ್ಯವಾದ ಬಹುದೊಡ್ಡ ಜವಾಬ್ದಾರಿಯ ಹಕ್ಕು ಆಗಿದೆ. ಸಂವಿಧಾನ ಬದ್ಧವಾಗಿ ಮಹದಾನ ಮತದಾನ ಮಾಡುವ ಹಕ್ಕನ್ನು ಪಡೆದಿರುವುದು ನಮ್ಮ ಅದೃಷ್ಟ, ಆದರೆ ನಾವು ಇದನ್ನು ಲಘುವಾಗಿ ಪರಿಗಣಿಸುತ್ತಿರುವುದು ನಮ್ಮ ಬೇಜವಾಬ್ದಾರಿ ತನವನ್ನು ಸೂಚಿಸುತ್ತದೆ. ನಮಗೆ ಬೇಕಾದವರಿಗೆ ಮತ ಚಲಾಯಿಸುವ ಮತ್ತು ನಮ್ಮ ಮನಸ್ಸನ್ನು ಪರಿವರ್ತನೆಯ ಜೊತೆಗೆ ಬದಲಾಯಿಸುವ ಹಕ್ಕನ್ನು ನಮ್ಮ ಸಂವಿಧಾನದಲ್ಲಿ ಖಾತರಿಪಡಿಸುತ್ತಿದೆ. ಉತ್ತಮ ಭಾರತಕ್ಕಾಗಿ ನಮ್ಮ ಮತ ಚಲಾಯಿಸುವ ಮೂಲಕ ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ನಮ್ಮ ಹಿಂದಿನ ತಲೆಮಾರುಗಳ ಹೋರಾಟವನ್ನು ಗೌರವಿಸಬಹುದಾದ ಪರಿಕಲ್ಪನೆಯನ್ನು ಮಾಡಿಕೊಳ್ಳಬೇಕಿದೆ. ದೇಶದ ಪ್ರತಿಯೊಬ್ಬ ಪ್ರಜೆಯು ಕೂಡ ಮತದಾನದ ಮಹತ್ವದ ಅರಿವನ್ನು ಮಾಡಿಕೊಳ್ಳಬೇಕು ಇದರಿಂದ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸುವುದರ ಮೂಲಕ ಭಾರತದ ಪ್ರಜಾಪ್ರಭುತ್ವದ ರಕ್ಷಣೆ, ಸುಭದ್ರ ಹಾಗೂ ಅಭಿವೃದ್ಧಿಯ ಪತದೆಡೆಗೆ ಸರ್ಕಾರ ರಚನೆಗೆ ಮುಂದಾಗುವಂತೆ ಮಾಡುವ ಶಕ್ತಿ ನಮ್ಮಲ್ಲಿದೆ.ನಮ್ಮ ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ಕೂಡ ಸದ್ಬಳಕೆಯನ್ನು ಮಾಡಿಕೊಳ್ಳಬೇಕು. ನಮ್ಮ ಭಾರತದ ಸಂವಿಧಾನವು ಶ್ರೇಷ್ಠವಾದ ಮೂಲಭೂತ ಹಕ್ಕುಗಳನ್ನು ಹಾಗೂ ರಾಜ್ಯ ನಿರ್ದೇಶನದ ತತ್ವಗಳನ್ನು ಆಯಾ ರಾಜ್ಯಗಳಿಗೆ ನೀಡಿದೆ.ಉತ್ತಮ ರಾಷ್ಟ್ರದ ಭವಿಷ್ಯಕ್ಕಾಗಿ ಮತದಾನದ ಮಹತ್ವ ಅರಿಯುವ ಜೊತೆ ಜೊತೆಗೆ ನಾವುಗಳು ಇತರರಲ್ಲಿಯೂ ಕೂಡ ಇದರ ಬಗ್ಗೆ ಜಾಗೃತಿಯನ್ನು ಮೂಡಿಸುವಂತ ಸಲಹೆಯನ್ನು ನೀಡಬೇಕಾಗಿರುವುದು ನಮ್ಮೆಲ್ಲರ ಹೊಣೆಯೂ ಕೂಡ ಹೌದು. ನಮ್ಮ ಮತ-ನಮ್ಮ ಹಕ್ಕು,ಜಾಗತ ಮತದಾರ,ಸದೃಢ ಪ್ರಜಾಪ್ರಭುತ್ವದೆಡೆಗೆ ಒಳ್ಳೆಯ ರೀತಿಯಿಂದ ಮತದಾನ ಮಾಡುವುದು ಪ್ರತಿ ಮತದಾರರ ಹಕ್ಕು ಮತ್ತು ಆದ್ಯ ಕರ್ತವ್ಯದ ಜೊತೆಗೆ ಶಾಂತಿಯುತ ಚುನಾವಣೆಗೆ ಸಹಕರಿಸಿ ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿಯನ್ನಾಗಿಸಿಕೊಳ್ಳಬೇಕೆ ಹೊರತು, ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೆ ನಿರ್ಭೀತಿಯಿಂದ ಮತವನ್ನು ಚಲಾಯಿಸಿ. ಯಾಕೆಂದರೆ ಇದು”ಸಾರ್ವತ್ರಿಕ ನಾಗರಿಕ ಕರ್ತವ್ಯ ಮತದಾನ ಅಥವಾ ಕಡ್ಡಾಯ ಮತದಾನ”ಆಗಿರುತ್ತದೆ. ಮತದಾನ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದ್ದು. ಭಾರತದ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ನಾವು ಗೌರವಿಸಬೇಕು. ಚುನಾವಣೆ (ಮತದಾನ)ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ತಳಹದಿಯನ್ನು ರೂಪಿಸುತ್ತದೆ. ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ಚುನಾವಣೆಯ ವಿಧಾನವಾಗಿದ್ದು ಈ ಮೂಲಕ 18 ವರ್ಷಕ್ಕಿಂತ ಮೇಲ್ಪಟ್ಟ ಭಾರತದ ಪ್ರತಿಯೊಬ್ಬ ನಾಗರಿಕನು ಸಂವಿಧಾನದ ದೃಷ್ಟಿಯಲ್ಲಿ ಅರ್ಹ ಮತದಾರರಾಗಿರುತ್ತಾರೆ.ಆದ್ದರಿಂದಲೇ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಉತ್ಸುಕರಾಗಿರಬೇಕು, ಮತದಾನವನ್ನು ಮಾಡಿದ ನಂತರದಲ್ಲಿ ನಮ್ಮಲ್ಲಿ ಭಾವನೆಯು “ಜವಾಬ್ದಾರಿಯುತ ನಾಗರಿಕ”ಎಂಬ ಹೆಮ್ಮೆಯ ಭಾವವನ್ನು ಮೂಡುವಂತೆ ಮಾಡುತ್ತದೆ. ಈ ಇನ್ನೆಲೆಯಲ್ಲಿ ಚುನಾವಣಾ ಆಯೋಗದ ಸರ್ಕಾರವು ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ಪ್ರಯುಕ್ತವಾಗಿ ಪ್ರತಿಯೊಂದು ಜಿಲ್ಲೆಯ ಕ್ಷೇತ್ರಗಳಲ್ಲಿ ಮತದಾನ ಹೆಚ್ಚಳಕ್ಕೆ ಜಾಗೃತಿ ಮೂಡಿಸಲು ಸಲುವಾಗಿ ಅನೇಕ ರೀತಿಯ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯ ಸಹಯೋಗದಲ್ಲಿ ಮತದಾನ ಜಾಗೃತಿ ಸಂಬಂಧವಾಗಿ ಬೈಕ್ರ್ಯಾಲಿಗಳ ಮೂಲಕ ಜಾಥಾ, ಕಾಲುನಡಿಗೆಗಳ ಮೂಲಕ ಹಾಗೂ ಕಿರು ನಾಟಕಗಳ ಮೂಲಕ ಜನಸಾಮಾನ್ಯರಲ್ಲಿ ಮತವನ್ನು ಚಲಾಯಿಸುವುದರ ಬಗ್ಗೆ ಅರಿವು ಮೂಡಿಸುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.ಇದರ ಜೊತೆಗೆ ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 12ಡಿ ಪಾರಂ ಮೂಲಕ ದಿವ್ಯಾಂಗ ವಿಶೇಷಚೇತನರ ಬಂಧುಗಳಿಗೆ ಮನೆಯಲ್ಲಿಯೇ ಮತದಾನವನ್ನು ಚಲಾಯಿಸುವ ಅವಕಾಶವನ್ನು ರಾಜ್ಯ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿರುವುದು ಖುಷಿಯ ವಿಚಾರವಾಗಿದ್ದು ಮತ್ತು ಇದರ ಜೊತೆಗೆ ಜಿಲ್ಲಾಡಳಿತ ಸಹಯೋಗದಲ್ಲಿ ಆಸಕ್ತಿಯಿಂದ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸುವ ವಿಶೇಷಚೇತನರಿಗಾಗಿಯೇ ಮತಗಟ್ಟೆಯನ್ನು ರೂಪಿಸಿ ಮತವನ್ನು ಚಲಾಯಿಸುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಸಹ ಮಾಡಿಸಲಾಗಿದೆ.ಇದನ್ನು ಸಮರ್ಪವಾಗಿ ಹಾಗೂ ಪರಿಪೂರ್ಣತೆಯ ಅವಕಾಶವನ್ನು ರಾಜ್ಯದ ಎಲ್ಲ ವಿಶೇಷಚೇತನರು ಉಪಯೋಗಿಸಿಕೊಳ್ಳಬೇಕಿದೆ. ಆಗಾದರೆ ಬನ್ನಿ ನಮ್ಮೆಲ್ಲರ ನಡೆ ಮತಗಟ್ಟೆಯ ಕಡೆ ಸೇರಿ ಮತವನ್ನು ಚಲಾಯಿಸೋಣ, ಮತದಾನ ಬರೀ ಮತದಾನವಲ್ಲಾ ಮತದಾನವೊಂದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ತಳಹದಿಯ ಸಂಕೇತವನ್ನು ಬಲಗೊಳಿಸೋಣ. ಮತದಾನ ನಮ್ಮೆಲ್ಲರ ಹಕ್ಕು, ನಮ್ಮ ಮತ ಅಮೂಲ್ಯ, ಕಡ್ಡಾಯವಾಗಿ ಮತ ಹಾಕುವುದರ ಜೊತೆಗೆ ಮತದಾನವು ಪ್ರಜಾಪ್ರಭುತ್ವದ ಒಂದು ಹಬ್ಬ, ಮೇ 10,2023 ರಂದು ಈ ಹಬ್ಬದಲ್ಲಿ ಪಾಲ್ಗೋಳೋಣವೆಂದು “ಶಿವ ಸತ್ಯವಾ ಸಾರೋಣ” ನಮ್ಮ ಮತ ಅಮೂಲ್ಯ ಕಡ್ಡಾಯವಾಗಿ ಮತ ಹಾಕೋಣ…ನಮ್ಮ ಮತ , ನಮ್ಮ ಹಕ್ಕು ಸಕ್ಷಮ ಭಾರತವನ್ನು , ಸಮರ್ಥ್ ಭಾರತವನ್ನಾಗಿಸೋಣ.
✍️ ಸಿ.ಆರ್ ಶಿವಕುಮಾರ್ ಶಿವಮೊಗ್ಗ