ಕಂಪ್ಲಿಯಲ್ಲಿ ನ್ಯಾಯಾಲಯ ಸ್ಥಾಪಿಸುವಂತೆ ಹೈ ಕೋರ್ಟ್ ಜಡ್ಜ್ ಗೆ ಮನವಿ ಸಲ್ಲಿಸಿದ ಕಂಪ್ಲಿ ವಕೀಲರ ಬಳಗ.

Spread the love

ಕಂಪ್ಲಿಯಲ್ಲಿ ನ್ಯಾಯಾಲಯ ಸ್ಥಾಪಿಸುವಂತೆ ಹೈ ಕೋರ್ಟ್ ಜಡ್ಜ್ ಗೆ ಮನವಿ ಸಲ್ಲಿಸಿದ ಕಂಪ್ಲಿ ವಕೀಲರ ಬಳಗ.

ಬೆಂಗಳೂರು: ಏ12, ಬಳ್ಳಾರಿ ಜಿಲ್ಲೆಯ ನೂತನ ತಾಲೂಕು ಕೇಂದ್ರ ಸ್ಥಾನವಾದ ಕಂಪ್ಲಿ ನಗರದಲ್ಲಿ ಖಾಯಂ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವನ್ನ ಪ್ರಾರಂಭಿಸುವಂತೆ ಕರ್ನಾಟಕ ಹೈ ಕೋರ್ಟ್ ನ ನ್ಯಾಯಾಧೀಶರು ಹಾಗೂ ಬಳ್ಳಾರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಜಸ್ಟಿಸ್ ಕೆ. ನಟರಾಜನ್ ರವರನ್ನ ಭೇಟಿ ಮಾಡಿದ ಕಂಪ್ಲಿ ತಾಲೂಕು ವಕೀಲರ ಬಳಗದ ನಿಯೋಗವು ಮನವಿ ಸಲ್ಲಿಸಿದರು! 2017ನೇ ಸಾಲಿನಲ್ಲಿ ರಾಜ್ಯದಲ್ಲಿ ಕಂಪ್ಲಿ ಸೇರಿದಂತೆ 49 ತಾಲೂಕುಗಳನ್ನ ರಚಿಸಿದ್ದು ಅಖಂಡ ಬಳ್ಳಾರಿ ಜಿಲ್ಲೆಯಲ್ಲಿನ ಕಂಪ್ಲಿ, ಕುರುಗೋಡು, ಕೊಟ್ಟೂರು 3 ಹೋಬಳಿಗಳು ತಾಲೂಕುಗಳಾಗಿ ಹೊರಹೊಮ್ಮಿರುತ್ತವೆ, ಆದರೆ ದಿನಾಂಕ 18 ನವೆಂಬರ್ 2020 ರಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯನ್ನ ವಿಭಜಿಸಿ ನೂತನ ವಿಜಯನಗರ ಜಿಲ್ಲೆಯನ್ನ ರಚಿಸಿ ವಿಜಯನಗರ ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದ ಕಂಪ್ಲಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಿದ್ದು, ಪ್ರಸ್ತುತ ವಿಜಯನಗರ ಜಿಲ್ಲೆಯ ಹೊಸಪೇಟೆ ನ್ಯಾಯಾಲಯದಲ್ಲಿ ಕಂಪ್ಲಿ ತಾಲೂಕಿನ ಪ್ರಕರಣಗಳು/ವ್ಯಾಜ್ಯಗಳು ನಡೆಯುತ್ತಿರುತ್ತವೆ, ಬಳ್ಳಾರಿ ಜಿಲ್ಲೆಯ ನೂತನ ತಾಲೂಕು ಕೇಂದ್ರವಾದ ಕಂಪ್ಲಿ ತಾಲೂಕಿಗೆ ಕಂಪ್ಲಿಯ ಒಂದು ಪುರಸಭೆ, 26 ಕಂದಾಯ ಗ್ರಾಮಗಳು ಒಳಗೊಂಡಿದ್ದು. ಈ ನೂತನ ತಾಲೂಕು ವ್ಯಾಪ್ತಿಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯಗಳು ಆರು ನೂರಕ್ಕು (600) ಹೆಚ್ಚು ವ್ಯಾಜ್ಯಗಳು ಹಾಲಿ ಹೊಸಪೇಟೆ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುತ್ತವೆ. ಹಾಗೂ ಈ ನೂತನ ಕಂಪ್ಲಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ವಕೀಲರಿರುತ್ತಾರೆ,

ಈ ನೂತನ ಕಂಪ್ಲಿ ತಾಲೂಕು ವ್ಯಾಪ್ತಿಗೆ ಬರುವ ಗ್ರಾಮಗಳು ಸಾರಿಗೆ ಸಂಪರ್ಕವಿಲ್ಲದ ಹಳ್ಳಿಗಳಾಗಿದ್ದು ಸಾರ್ವಜನಿಕರಿಗೆ ಬೇಕಾದ ಕೋರ್ಟಿನ ಪ್ರಮಾಣ ಪತ್ರಗಳು (ಅಫಿಡ್ ವಿಟ್) ಪಡೆಯಲು ಹಾಗೂ ಪ್ರಕರಣಗಳನ್ನು ನಡೆಸಲು ಕೋರ್ಟ್‌ಗೆ ಹಾಜರಾಗಲು ನೂತನ ತಾಲೂಕು ಕಂಪ್ಲಿಯ ಕೊನೆ ಭಾಗದ ಗ್ರಾಮಗಳಿಂದ ಸುಮಾರು 50 ರಿಂದ 60 ಕಿ.ಮೀ ದೂರದ ಹೊಸಪೇಟೆ ನ್ಯಾಯಾಲಯಕ್ಕೆ ಓಡಾಡಲು ಸಾರ್ವಜನಿಕರಿಗೆ ಸಮಯ ವ್ಯರ್ಥ ಮತ್ತು ಆರ್ಥಿಕ ಸಮಸ್ಯೆಯಾಗುತ್ತಿರುತ್ತದೆ, ಪ್ರಸ್ತುತ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಮಧ್ಯೆ ಸಿಲುಕಿ ಈ ಭಾಗದ ಜನರು ಸಾಕಷ್ಟು ಸಮಸ್ಯೆಯನ್ನ ಅನುಭವಿಸುತ್ತಿರುತ್ತಾರೆ, ಈಗಾಗಲೇ ಘೋಷಿಸಿದ 49 ತಾಲೂಕುಗಳಲ್ಲಿ ಬಹುತೇಕ ತಾಲೂಕುಗಳಲ್ಲಿ ಪೂರ್ಣ ಪ್ರಮಾಣದ ಹಾಗೂ ಇಟನರಿ ನ್ಯಾಯಾಲಯಗಳು ಪ್ರಾರಂಭವಾಗಿರುತ್ತವೆ, ಆದರೆ ಕಂಪ್ಲಿ ತಾಲೂಕು ಕೇಂದ್ರಸ್ಥಾನವಾದ ಕಂಪ್ಲಿ ನಗರದಲ್ಲಿ ನ್ಯಾಯಾಲಯವನ್ನು ಸ್ಥಾಪಿಸುವಂತೆ ಕಳೆದ 2 ವರ್ಷಗಳಿಂದ ನಮ್ಮ ಬಳಗವು ಸೇರಿದಂತೆ ತಾಲೂಕಿನ ಹಲವಾರು ಸಂಘ-ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಇದುವರೆಗೂ ನ್ಯಾಯಾಲಯ ಸ್ಥಾಪನೆ ಬಗ್ಗೆ ಯಾವುದೇ ಪ್ರಕ್ರಿಯೆಗಳು ಪ್ರಾರಂಭವಾಗದೇ ಇರುವುದು ಕಂಪ್ಲಿ ತಾಲೂಕಿನ ಜನತೆಗೆ ಬೇಸರ ಉಂಟು ಮಾಡಿರುತ್ತದೆ, ಸಾರ್ವಜನಿಕರ ಹಿತ ದೃಷ್ಟಿಯಿಂದ “ಸರ್ವರಿಗೂ ನ್ಯಾಯ ಕಾನೂನು ಧೈಯ ಮತ್ತು ಮನೆ ಮನೆಗೆ ನ್ಯಾಯವೆಂಬ” ಸರ್ವೋಚ್ಚ ನ್ಯಾಯಾಲಯದ ನಾಣ್ಣುಡಿಯಂತೆ ಬಳ್ಳಾರಿ ಜಿಲ್ಲೆಯ ನೂತನ ತಾಲೂಕು ಕೇಂದ್ರವಾದ ಕಂಪ್ಲಿ ಪಟ್ಟಣದಲ್ಲಿ ಸಿವಿಲ್ ಜಡ್ಜ್ ಹಾಗೂ ಪ್ರಥಮ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯವನ್ನೂ ಕೂಡಲೇ ಸ್ಥಾಪಿಸಿ ಕಾರ್ಯಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈ ಕೋರ್ಟ್ ನ ನ್ಯಾಯಾಧೀಶರು ಹಾಗೂ ಬಳ್ಳಾರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಜಸ್ಟಿಸ್ ಕೆ. ನಟರಾಜನ್ ರವರಿಗೆ, ಹೈ ಕೋರ್ಟ್ ನ ರಿಜಿಸ್ಟ್ರಾರ್ ಜನರಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಕಂಪ್ಲಿ ತಾಲೂಕು ವಕೀಲರ ಬಳಗದ ಕಾರ್ಯಾಧ್ಯಕ್ಷರಾದ ಕೆ. ಪ್ರಭಾಕರ್ ರಾವ್, ಅಧ್ಯಕ್ಷರಾದ ಜಿ. ಪ್ರಕಾಶ್, ಕಾರ್ಯದರ್ಶಿಗಳಾದ ಮೋಹನ್ ಕುಮಾರ್ ದಾನಪ್ಪ, ಹಿರಿಯ ವಕೀಲರಾದ ಕೆ.ರಘುನಾಥ ರಾವ್, ಜಂಟಿ ಕಾರ್ಯದರ್ಶಿ ಹರೀಶ್ ಅಯೋಧೀ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ. ಹೆಚ್. ಹುಲುಗಪ್ಪ, ಟಿ. ಶಿವಪ್ಪರವರು ಮನವಿ ಸಲ್ಲಿಸಿದರು,  ಮನವಿ ಸ್ವೀಕರಿಸಿದ ಜಸ್ಟಿಸ್ ಕೆ.ನಟರಾಜನ್ ರವರು ಈಗಾಗಲೇ ಪ್ರಕ್ರಿಯೆ ಪ್ರಾರಂಭಿಸಿದ್ದು ಶೀಘ್ರದಲ್ಲಿ ನ್ಯಾಯಾಲಯ ಪ್ರಾರಂಭಿಸುವುದಾಗಿ ತಿಳಿಸಿದರು!

ವರದಿ: ಸಂಪಾದಕೀಯಾ

Leave a Reply

Your email address will not be published. Required fields are marked *