ತಾವರಗೇರಾ ಪಟ್ಟಣದಲ್ಲಿ ವಿವಿದ ಕಡೆ ಕಾಂಗ್ರೆಸ್ ಪಕ್ಷದವತಿಯಿಂದ ವಿಧಾನಸಭಾ ಚುನಾವಣಾ ಪೂರ್ವಭಾವಿ ಸಭೆ,
ರಾಜಕೀಯ ರಣ ರಂಗದಲ್ಲಿ ಕುತೂಹಲ ಸೃಷ್ಟಿಸಿದ ಕುಷ್ಟಗಿ 60 ವಿಧಾನ ಸಭಾ ಕ್ಷೇತ್ರ. ಈ ಸಾರಿ ಇತಿಹಾಸ ಬದಲಾಯಿಸುತ್ತ ಕಾದು ನೋಡಬೇಕಾಗಿದೆ. ನಮ್ಮ ನಾಡಿನ ಮತದಾರರು ಎಚ್ಚೆತ್ತುಕೊಂಡರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ. ರಾಜಕೀಯ ವ್ಯಕ್ತಿಗಳು ಎಷ್ಟೆ ಪ್ರಭಾವ ಬೀರಿದರು ಕೊನೇಗೆ ಅಂತೀಮ ತಿರ್ಮಾನ ಮತದಾರ ನೀಡುವುದು ಅಂತೀಮ ತಿರ್ಮಾನ. ಅದು ನಮ್ಮ ಸಂವಿಧಾನ ನೀಡಿದ ಹಕ್ಕು. ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡುತತಿರುವುದು ಒಂದು ವಿಶೇಷನೆ ಇರಬಹುದು, ಆದರೆ ನಮ್ಮ ಈ ಕುಷ್ಟಗಿ ವಿಧಾನ ಸಭಾ ಕ್ಷೇತ್ರವು ಇನ್ನೂ ವಿಶೇಷವಾಗಿದೆ. ಕಾರಣ. ಒಂದು ಭಾರಿ ಆಯ್ಕೆಯಾದ ಚುನಾಯಿತ ಪ್ರತಿನಿಧಿ ಮತ್ತೊಂದು ಭಾರಿ ಆಯ್ಕೆಯಾದ ಇತಿಹಾಸವೆ ಇಲ್ಲಾ. ಆದ್ದರಿಂದ ನಮ್ಮ ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಸಮಸ್ತ ಹೆಮ್ಮೆಯ ಬಂಧುಗಳೇ ತೆರದ ಮನಸ್ಸಿನಿಂದ ಯೋಚಿಸಿ, ಆಲೋಚಿಸಿ ಒಬ್ಬರಿಗೊಬ್ಬರು ಪರಸ್ಪರ ಚರ್ಚಿಸಿ ಆ ಜಾತಿ, ಈ ಜಾತಿ ಎಲ್ಲವೂ ಹಿಂದಿಟ್ಟು ಇದು ಕೇವಲ ಮಾನವ ಜಾತಿ ನಾವೆಲ್ಲರೂ ಒಂದೇ ಎಂಬ ಭಾವನೆ ಮುಂದಿಟ್ಟುಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಮುಂದಾಗಿ ಈ ಸಾರಿ ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿ ಹಾಗೂ ನಮ್ಮ ನಿಮ್ಮೆಲ್ಲರ ಅಚ್ಚು/ಮೆಚ್ಚಿನ ನಾಯಕರಾದ ಶ್ರೀ ಅಮರೇಗೌಡ ಎಲ್ ಬಯ್ಯಾಪುರ ಇವರನ್ನು ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಇಂದು ತಾವರಗೇರಾ ಪಟ್ಟಣದ ನಾನಾ ಕಡೆ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಅಭಿವೃದ್ದಿ ಹಾಗೂ ಬಡವರ ಏಳಿಗೆಗಾಗಿ ಹಗಲಿರುಳು ಎನ್ನದೆ ಶ್ರಮಿಸುತ್ತಿರುವ ನಮ್ಮ ನಾಯಕರನ್ನ ಈ ಭಾರಿಯು ಸಹ ಆರಿಸಿ ತರಬೇಕೆಂದು ಮತದಾರರಲ್ಲಿ ಸವಿನೆಯವಾಗಿ ಕೊಪ್ಪಳ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಆದಂತ ಶ್ರೀಮತಿ ಶಾರದಾ ರವರು ಕೇಳಿಕೊಂಡರು. ತಾವರಗೇರಾ ಪಟ್ಟಣದ ವಾರ್ಡ್ ನಂಬರ್ 15 ಮತ್ತು 16ರಲ್ಲಿ ಕಾಂಗ್ರೆಸ್ ಪಕ್ಷದ ವಿಧಾನಸಭಾ ಚುನಾವಣಾ ಪೂರ್ವಭಾವಿ ಸಭೆಯನ್ನು ಮಾಡಲಾಯಿತು. ಈ ಒಂದು ಸಭೆಯಲ್ಲಿ ಕೊಪ್ಪಳ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಆದಂತ ಶ್ರೀಮತಿ ಶಾರದಾ ಕಟ್ಟಿಮನಿ ಹಾಗೂ ತಾವರಗೇರಿಯ ಮುಖಂಡರಾದಂತ ಶರಣಪ್ಪ ಧುಮತಿ, ಅಮರೇಶ ಗಾಂಜಿ, ಮತ್ತು ಸಿದ್ದು ಪುಂಡಗೌಡ್ರು ಮತ್ತು ಅಂಬರೀಶ್ ಚಲವಾದಿ, ಬಸವರಾಜ್ ಭೋವಿ, ಇನ್ನಿತರ ಮುಖಂಡರು ಈ ಸಭೆಯಲ್ಲಿ ಹಾಜರಿದ್ದರು. ತದ ನಂತರ ಜೊತೆಗೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಮರೇಗೌಡ ಪಾಟೀಲ್ ಬಯ್ಯಾಪೂರ ಪರ ಮುಖಂಡರಾದ ಡಾ, ಶ್ಯಾಮೀದಸಾಬ ದೋಟಿಹಾಳ ನೇತೃತ್ವದಲ್ಲಿ ಮತದಾರರ ಮನೆ ಮನೆ ಪ್ರಚಾರ ನಡೆಸಿ ಗ್ಯಾರಂಟಿ ಕಾರ್ಡ್ ವಿತರಿಸಲಾಯಿತುದೀ ಸಂದರ್ಭದಲ್ಲಿ ಪಪಂ ಸದಸ್ಯ ಶ್ಯಾಮಣ್ಣ ಭಜಂತ್ರಿ, ಮುಖಂಡ ಇಶಾಕ್ ಪಾಷ, ಶ್ಯಾಮೀದ ಅಂಟಿ ಪಟೇಲ್ ಹುಸೇನ ನಾಯಕ ಮತ್ತು ಕಾರ್ಯಕರ್ತರು ಇದ್ದರು.
ವರದಿ – ಸಂಪಾದಕೀಯಾ.