ಸಂಗನಾಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪ್ರಚಾರ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾರದಾ ಕಟ್ಟಿಮನಿ.
ಕುಷ್ಠಗಿ ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಗೆ ಬರುವ ಸಂಗನಾಳ ಗ್ರಾಮ ಪಂ.ವ್ಯಾಪ್ತಿಯಲ್ಲಿ ಬರುವ ಗಂಗನಾಳ, ಸಂಗನಾಳ, ಪುರ ಮತ್ತು ನಾರಿನಾಳ ಗ್ರಾಮಕ್ಕೆ ಬೇಟೆ ನೀಡಿ, ಪ್ರತಿ ಮನೆ ಮನೆಗೆ ತೆರಳಿ ಮಹಿಳೆಯರ ಮನ ಹೊಲಿಸಿ ಕಾಂಗ್ರೆಸ್ ಪ್ರಚಾರದ ಜೊತೆಗೆ ಚುನಾವಣಾ ಪೂರ್ವಭಾವಿ ಸಭೆ ಜರುಗಿಸಲಾಯಿತು. ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಸಮಸ್ತ ಮತಧಾರು ಸೇರಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ, ಎಲ್ಲರೂ ಸೇರಿ ಒಗ್ಗಟ್ಟಿನಿಂದ ಈ ಸಾರಿ ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿ ಹಾಗೂ ನಮ್ಮ ನಿಮ್ಮೆಲ್ಲರ ಅಚ್ಚು/ಮೆಚ್ಚಿನ ಧೀಮಂತ ನಾಯಕರಾದ ಶ್ರೀ ಅಮರೇಗೌಡ ಎಲ್ ಬಯ್ಯಾಪುರ ಇವರನ್ನು ಪ್ರಚಂಡ ಬಹುಮತದಿಂದ ಆರಿಸಿ ತರಬೇಕು, ಜೊತೆಗೆ ಮಹಿಳೆಯರು ಆದಂತ ನಾವುಗಳು ಉತ್ತಮ ಸಮಾಜದ ನಿಮಾರ್ಣಕ್ಕಾಗಿ ಎಲ್ಲಾರೂ ಒಂದಾಗಬೇಕಾಗಿದೆ. ಮನುಷ್ಯ ಜಾತಿಯಲ್ಲಿ ವಿಷ ಭೀಜ ಬಿತ್ತುವ ಈ ಸರ್ಕಾರವನ್ನ ಕಿತ್ತಿಎಸೆಯಬೇಕಾಗಿದ. ಆದ್ದರಿಂದ ನಾವುಗಳು ಎಚ್ಚರದಿಂದ ಇರಬೇಕು. ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಅಂದರೆ ಸಂಗನಾಳ ಗ್ರಾಮ ಪಂ.ವ್ಯಾಪ್ತಿಯಲ್ಲಿ ಬರುವ ಗಂಗನಾಳ, ಸಂಗನಾಳ, ಪುರ ಮತ್ತು ಕನ್ನಾಳ ಗ್ರಾಮದ ನಂತರ ನಾರಿನಾಳ ಗ್ರಾಮಗ್ರಳಲ್ಲಿ ಅದ್ದೂರಿಯಾಗಿ ಕಾಂಗ್ರೆಸ್ ಪ್ರಚಾರದ ಜೊತೆಗೆ ಚುನಾವಣಾ ಪೂರ್ವಭಾವಿ ಸಭೆ ಜರುಗಿಸಿ, ಪ್ರತಿ ಮನೆಯ ಮಹಿಳೆಯರನ್ನ ವಿಶ್ವಾಸಕ್ಕೆ ತೆಗೆದುಕೊಂಡರು. ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಅಭಿವೃದ್ದಿ ಹಾಗೂ ಬಡವರ ಏಳಿಗೆಗಾಗಿ ಹಗಲಿರುಳು ಎನ್ನದೆ ಶ್ರಮಿಸುತ್ತಿರುವ ನಮ್ಮ ನಾಯಕರನ್ನ ಈ ಭಾರಿಯು ಸಹ ಆರಿಸಿ ತರಬೇಕು, ಇದಕ್ಕೆ ಕೆವಲ ನಾವುಗಳು ಬದಲಾದರೆ ಸಾಲದು, ತಾವುಗಳು ತಮ್ಮಕುಟುಂಬ ತಮ್ಮ ಬಂದು ಬಳಗದವರಲ್ಲಿ ಹೇಳಿಕೊಳ್ಳಬೇಕು. ಮತಧಾನ ಪ್ರತಿಯೊಬ್ಬರ ಹಕ್ಕು, ಹಾಗಾಗಿ ತಮ್ಮ ಅಮೂಲ್ಯವಾದ ಮತವನ್ನು ಪ್ರತಿಯೊಬ್ಬರು ಹಾಕಲಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು. ಕೊಪ್ಪಳ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಶಾರದಾರವರು ಮತದಾರ ಬಾಂದವರಲ್ಲಿ, ಅದರಲ್ಲೂ ವಿಶೇಷವಾಗಿ ಮಹಿಳಾ ಬಂದುಗಳಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಸೈಯಾದ್ ಮುಲ್ಲಾ, ಹನುಮಂತ, ಮಹಾಂತಮ್ಮ ನಾಯಕವಾಡಿ ಸಂಗನಾಳ ಗ್ರಾಮ ಪಂ.ವ್ಯಾಪ್ತಿಯಲ್ಲಿ ಬರುವ ಗಂಗನಾಳ, ಸಂಗನಾಳ, ಪುರ ಮತ್ತು ಕನ್ನಾಳ ಗ್ರಾಮದ ನಂತರ ನಾರಿನಾಳ ಗ್ರಾಮದ ಸದಸ್ಯರು ಮತ್ತು ಗ್ರಾಮದ ದ ಕಾರ್ಯಕರ್ತರು ಭಾಗಿಯಾಗಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು..
ವರದಿ – ಸಂಪಾದಕೀಯಾ.