ತಾವರಗೇರಾ ಮೂಲದ ಮುವ್ವರು ಅಪಘಾತಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ, ಇನ್ನೂಳಿದವರನ್ನ ಹೆಚ್ಚಿನ ಚಿಕಿತ್ಸೆಗೆ ಇಲ್ಲಕಲ್ ಮತ್ತು ಭಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಬೆಳಗಿನ ಜಾವ್ ತಾವರಗೇರಾ ಪಟ್ಟಣ ಮುಸ್ಲಿಂ ಸಮೂಧಾಯದವರು ಹಲವು ಕುಟುಬಂದವರ ಜೊತೆಗೆ ಧಾರ್ಮಿಕ ಕಾರ್ಯಕ್ರಮಕ್ಕೆ ತಾವರಗೇರಾದಿಂದ ವಿಜೆಯಪುರಕ್ಕೆ ತೆರಳಿದ್ದರು. ವಿಜೆಯಪುರದ ಶ್ರೀ ಖಾಜಾ ಬಂದೆನವಾಜ್ ಧರ್ಗಕ್ಕೆ ತೆರಳಿ ಧಾರ್ಮಿಕ ಕಾರ್ಯಕ್ರಮದ ವಿಧಿ/ವಿಧಾನಗಳನ್ನು ಮುಗಿಸಿಕೊಂಡು ಬರುವ ಸಂದರ್ಭದಲ್ಲಿ ಇಲಕಲ್ ನಗರದ ರಾಜ್ಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಸೇತುವಿಗೆ ಬಿರಿಸಿನಿಂದ ಹೊಡೆದ ಪರಿಣಾಮಕ್ಕೆ ಸ್ಥಳದಲ್ಲಿದ್ದ ಶ್ರೀಶ್ಯಾಮೀದಸಾಬ ಕಿಡದೂರ ನಾಯಕ ಮತ್ತು ಶ್ರೀಮೌಲಸಾಬ ಕಿಡದೂರ ನಾಯಕ ರವರು ಸ್ಥಳದಲ್ಲಿ ಸಾವನ್ನಪ್ಪಿದ್ದು, ಮತ್ತೊಬ್ಬರಾದ ಶ್ರೀಮತಿ ಮೆಹಬೂಬಿ ಗಂ// ಮೌಲಸಾಬ ಕಿಡದೂರ ನಾಯಕ ಇವರು ಇಲಕಲ್ ನಗರದ ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಇರುತ್ತದೆ. ಇನ್ನೂಳಿದವರನ್ನು ಇಲಕಲ್ ನಗರದ ಸರಕಾರಿ ಆಸ್ಪತ್ರೆ ಮತ್ತು ಭಾಗಲಕೋಟೆಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳಿದ್ದು ಇರುತ್ತದೆ, ಅದರಲ್ಲೂ ಇನ್ನೂಳಿದವರಿಬ್ಬರು ಸಾವು/ನೋವಿನ ಮದ್ಯೆ ನರಳುತ್ತಿದ್ದಾರೆ, ಈ ಸುದ್ದಿ ಹರಡುತ್ತಲೆ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ, ಆ ದೇವರ ಧಯದಿಂದ ಇನ್ನೂಳಿದವರೆಲ್ಲಾರು ಆರೋಗ್ಯದಿಂದ ಮರಳಿ ಬರಲಿ, ಜೊತೆಗೆ ಅವರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುವೆ.
ವರದಿ – ಬಾಲರಾಜ ಯಾದವ್