ಕೂಡ್ಲಿಗಿ:ಉಮೇದುವಾರಿಕೆ ಸಲ್ಲಿಸಿದ ಕಾಂಗ್ರೇಸ್ ಅಭ್ಯರ್ಥಿ ಎನ್.ಟಿ.ಶ್ರೀನಿವಾಸ.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ. ಎ17ರಂದು ಕಾಂಗ್ರೇಸ್ ಅಭ್ಯರ್ಥಿ ಎನ್.ಟಿ.ಶ್ರೀನಿವಾಸರವರು, ತಾಲೂಕು ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ ಪತ್ರ ಸಲ್ಲಿಸಿದರು. ಅವರು ನಾಮಪತ್ರವನ್ನು ಸಲ್ಲಿಸುವಾಗ, ಕಾಂಗ್ರೇಸ್ ಮುಖಂಡ ಬಡೇಲಡಕು ಬಸಪ್ಪ ಸೂಚಕರಾಗಿದ್ದರು. ಎನ್.ಟಿ.ಶ್ರೀನಿವಾಸರವರ ಕೂಡ್ಲಿಗಿ:ಉಮೇದುವಾರಿಕೆ ಸಲ್ಲಿಸಿದ ಕಾಂಗ್ರೇಸ್ ಅಭ್ಯರ್ಥಿ ಎನ್.ಟಿ.ಶ್ರೀನಿವಾಸ- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ. ಎ17ರಂದು ಕಾಂಗ್ರೇಸ್ ಅಭ್ಯರ್ಥಿ ಎನ್.ಟಿ. ಶ್ರೀನಿವಾಸರವರು, ತಾಲೂಕು ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ ಪತ್ರ ಸಲ್ಲಿಸಿದರು. ಅವರು ನಾಮಪತ್ರವನ್ನು ಸಲ್ಲಿಸುವಾಗ, ಕಾಂಗ್ರೇಸ್ ಮುಖಂಡ ಬಡೇಲಡಕು ಬಸಪ್ಪ ಸೂಚಕರಾಗಿದ್ದರು. ಎನ್.ಟಿ.ಶ್ರೀನಿವಾಸರವರ ಪತ್ನಿ ಶ್ರೀಮತಿ ಪುಷ್ಪ, ನಿವೃತ್ತ ಶಿಕ್ಷಕ ಸಿದ್ದಪ್ಪ, ಖಾನಾಮಡಗು ಶಶಿಧರಸ್ವಾಮಿ ಉಪಸ್ಥಿತರಿದ್ದರು. ಚುನಾವಣಾಧಿಕಾರಿ ಕಿರಣ ಬಿರದಾರ ನಾಮಪತ್ರಸ್ವೀಕರಿಸಿದರು.ತಹಶಿಲ್ದಾರರಾದ ಟಿ.ಜಗದೀಶ ಇದ್ದರು. ಇದಕ್ಕೂ ಮುನ್ನ ಶ್ರೀನಿವಾಸರವರು ಪಟ್ಟಣದಲ್ಲಿರುವ, ಶ್ರೀಕೊತ್ತಲಾಂಜನೇಯ ದೇವರ ದರ್ಶನ ಪಡೆದರು. ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಿಂದ ಬಂದಿದ್ದ, ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿ ಎನ್.ಟಿ.ಶ್ರೀನಿವಾಸರ ಜೊತೆಗಿದ್ದರು. ನಿಗದಿತ ಸ್ಥಳದಿಂದ -ನಿಗದಿತ ಸ್ಥಳದವರೆಗೆ, ನಿಗದಿತ ಸಮಯದಲ್ಲಿ. ಕಾರ್ಯಕರ್ತರು ಅಭ್ಯರ್ಥಿ ಎನ್.ಟಿ.ಶ್ರೀನಿವಾಸರ ಜೊತೆಗೆ, ಅವರ ಸಹೊದರ ಎನ್.ಟಿ.ತಮ್ಮಣ್ಣ, ಕಾಂಗ್ರೇಸ್ ಮುಖಂಡ ವೆಂಕಟೇಶರವರೊಂದಿಗೆ. ಅಸಂಖ್ಯಾತ ಕಾಂಗ್ರೇಸ್ ಕಾರ್ಯಕರ್ತರು ಮೆರವಣಿಗೆ ನಡೆಸಿದರು.ಈ ಸಂದರ್ಭದಲ್ಲಿ ಪಟ್ಟಣದ ಹಾಗೂ ತಾಲೂಕಿನ ಬಹುತೇಕ ಗ್ರಾಮಗಳಿಂದ ಆಗಮಿಸಿದ್ದ, ಕಾಂಗ್ರೇಸ್ ಮುಖಂಡರು, ಮಹಿಳಾ ಮುಖಂಡರು ಮೆರವಣಿಗೆಯಲ್ಲಿದ್ದರು.ಕೂಡ್ಲಿಗಿ ಡಿವೈಎಸ್ಪಿ ನೇತೃತ್ವದಲ್ಲಿ,ಕೂಡ್ಲಿಗಿ ಸೇರಿದಂತೆ ವಿವಿದ ಠಾಣೆಗಳಿಂದ ಆಗಮಿಸಿದ್ದ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಬಿಗಿ ಬಂದೋಬಸ್ತು ಏರ್ಪಡಿಸಲಾಗಿತ್ತು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.