ತಾವರಗೇರಾ ಪಟ್ಟಣ ಪಂಚಾಯತ ಅಧಿಕಾರಿಗಳ ವರ್ಗ ಹಾಗೂ ಸರ್ವ ಸಿಂಬಂದಿಗಳ ವರ್ಗದಿಂದ ಮತದಾನ ಜಾಗೃತಿ ಜಾಥಾ.
ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುತ್ತಿರುವ ಈ ರಾಜಕೀಯದ ಅಂಗವಾಗಿ ಪ್ರತಿಯೊಬ್ಬ ಮತಧಾನ ಬಾಂದವರು ಮತಧಾನ ಮಡುವುದು ಪ್ರತಿಯೊಬ್ಬರ ಹಕ್ಕು ಎಂಬ ಶ್ಲೋಗನ್ ಜೋತೆಗೆ ನಿನ್ನೆ ತಾವರಗೇರಾ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಾದ ಮಾನ್ಯ ನಭಿಸಾಬ ಖುಧಾನರವರು ಹಾಗೂ ಎಲ್ಲಾ ವರ್ಗಗಳಿಂದ “ಮತದಾನ ಜಾಗೃತಿ ಜಾಥಾ” ಕಾರ್ಯಕ್ರಮವನ್ನು ಮಾನ್ಯ ಉಪತಹಶಿಲ್ದಾರಾದ ಶರಣಪ್ಪ ಕಳ್ಳಿಮಠರವರು ಹಸಿರು ನಿಶಾನೆ ಮೂಲಕ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಾಲನೆ ನೀಡಿದರು. ಸದರಿ ಕಾರ್ಯಕ್ರಮಕ್ಕೆ ಶರಣಪ್ಪ ವಡಿಗೇರಿ ಕಲಾ ತಂಡ ಕುಷ್ಟಗಿ ಇವರಿಂದ ಮತದಾನ ಜಾಗೃತಿ ಗೀತೆಗಳು ಹಾಡುವುದರ ಮೂಲಕ ಮತದಾನದ ಮಹತ್ವ ಸಾರಿದರು. ಇದೇ ಸಂಧರ್ಬದಲ್ಲಿ ಅಂಗನವಾಡಿ ಕಾರ್ಯಕರ್ತರು, ಮಹಿಳಾ ಸ್ವ-ಸಹಾಯಕ ಸಂಘದ ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಪೌರಕಾರ್ಮಿಕರು ಮತ್ತು ಪಟ್ಟಣ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು. ಸದರಿ ಜಾಥಾ ಕಾರ್ಯಕ್ರಮವು ಪಟ್ಟಣದ ಪ್ರಮುಖ ಬೀದಿ ಮತ್ತು ವೃತ್ತಗಳಲ್ಲಿ ಸಂಚರಿಸಿ ಪಟ್ಟಣದ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ವರದಿ- ಸಂಪಾದಕೀಯಾ