ಆಮ್ ಆದ್ಮಿ ಪಕ್ಷದವತಿಯಿಂದ ಕನಕಪ್ಪ ಮಾಳಗಾವಿ ನಾಮಪತ್ರ ಸಲ್ಲಿಕೆ.
ಹುಟ್ಟು ಹೋರಾಟಗಾರ, ಸಮಾಜಿಕ ಕಳಕಳಿಯಿರುವ ಚಿಂತಕ, ಧಿನ ದಲಿತರ ಏಳಿಗೆಗಾಗಿ ಹಗಲಿರುಳು ಎನ್ನದೆ ಶ್ರಮಿಸುವ ಸೇವಕ, ರೈತರ ಪರ ಧ್ವನಿ ಎತ್ತುವ ನಾಯಕ, ಶ್ರೀ ಕನಕಪ್ಪ ತಂ// ಹನುಮತಂಪ್ಪ ಮಾಳಗಾವಿ ಇವರು ಕೊಪ್ಪಳ ಜಿಲ್ಲೆಯ ಕುಷ್ಟಗಿ 60 ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯಾರ್ಥಿಯಾಗಿ ಇಂದು ಆಮ್ ಆದ್ಮಿ ಪಕ್ಷದವತಿಯಿಂದ ನಾಮ ಪತ್ರ ಸಲ್ಲಿಸಲಾಯಿತು. ನಮ್ಮ ಎಲ್ಲಾ ಹಿಂದುಳಿದ ಸಮಾಜದ ಬಂಧುಗಳು ಎದ್ದೇಳಿ ಎಲ್ಲರೂ ಒಗ್ಗಟ್ಟಾಗಿ ಧೈರ್ಯದಿಂದ ಧ್ವನಿ ಎತ್ತೋಣ ಮತ್ತು ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳೋಣ. ನಮ್ಮ ಆಕ್ರೋಶ್ ವ್ಯಕ್ತಪಡಸೋಣ. ಅನ್ಯಾಯದ ವಿರುದ್ಧ ಹೋರಾಟ ಹಾಗೂ ಧ್ವನಿ ಎತ್ತುವ ಸಲುವಾಗಿ ಇಂದು ಕುಷ್ಟಗಿ ವಿಧಾನಸಭಾ ಕ್ಷೇತ್ರ ಚುನಾವಣೆಗೆ ನಾನು ಸ್ಪರ್ಧೆಸಿದ್ದೆನೆ. ಆದ್ದರಿಂದ ಮತದಾರ ಬಾಂದವರೆ ಹಣ, ಹೆಂಡ, ಕಂಡಕ್ಕೆ ತಲೆದೂಗದೆ ಪ್ರಮಾಣಿಕವಾಗಿ ನಮ್ಮ ಆಮ್ ಆದ್ಮಿ ಪಕ್ಷ ಇದೆ. ನಾವು ಎದೆ ತಟ್ಟಿ ಹೇಳುತ್ತೆವೆ ಕೆವಲ 8 ವರ್ಷಗಳಲ್ಲಿ ಎರಡು ರಾಜ್ಯಗಳನ್ನು ಗೆದ್ದಿದ್ದೆವೆ, ಅದು ನಮ್ಮ ಜಯವಯಲ್ಲ, ಅದು ನಿಮ್ಮ ಜಯ, ಹಾಗಾಗಿ ಈ ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಜನತೆಯಲ್ಲಿ ಕೇಳಿಕೊಳ್ಳುವುದೇನಂದರೆ ತಾವುಗಳು ಮನಸ್ಸು ಮಾಡಿದರೆ, ಯಾವುದು ಆಸಾದ್ಯವಲ್ಲ ಎಂಬುಹುದಕ್ಕೆ ಉತ್ತಮ ಸಾಕ್ಷಿ ಸಹಿತ ನಿಮ್ಮಲ್ಲಿದ್ದೆವೆ. ಇದೊಂದು ಸಾರಿ ಸಾಮಾನ್ಯ ಜನರು ಒಂದಾಗಿ ನಮ್ಮ ಗೆಲುವಿಗೆ ಮುಂದಾಗಬೇಕೆಂದರು. ಜೊತೆಗೆ ಭ್ರಷ್ಠ ರಾಜಕಾರಣವನ್ನ ಕಿತ್ಎಸಿಯೋಣ ಎಂದರು. ಈ ಸಂದರ್ಭದಲ್ಲಿ ಅಭ್ಯಾರ್ಥಿಯಾದ ಶ್ರೀ ಕನಕಪ್ಪ ತಂ// ಹನುಮತಂಪ್ಪ ಮಾಳಗಾವಿ, ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳ ವರ್ಗ, ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಅಭಿಮಾನಿಗಳ ವರ್ಗ ಸೇರಿತ್ತು.
ವರದಿ-ಸಂಪಾದಕೀಯಾ.