ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಸಮಸ್ತ ನಾಡಿನ ಜನತೆಗೆ ಬಸವ ಜಯಂತಿ ಹಾಗೂ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ.
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
ಭಾರತ ದೇಶದಲ್ಲಿ ಎಲ್ಲಾ ಧರ್ಮಗಳನ್ನು ಹೊಂದಿಕೊಂಡು ಬದುಕುತ್ತಿರುವುದೇ ಒಂದು ವಿಶೇಷ, ಅದರಲ್ಲೂ ಇಂತಹ ಹಬ್ಬ ಹರಿದಿನಗಳಲ್ಲಿ ಹಿಂದೂಗಳು ಮುಸ್ಲಿಂ ರನ್ನ ಕರೆತಂದು ಹಬ್ಬವನ್ನ ಹಂಚಿಕೊಳ್ಳುತ್ತಾರೆ, ಮತ್ತೆ ಮುಸ್ಲಿಂರು ಸಹ ತಮ್ಮ ಹಬ್ಬಗಳಲ್ಲಿ ಹಿಂದೂಗಳನ್ನು ಕರೆತಂದು ಹಬ್ಬದ ಖುಷಿಯನ್ನ ಹಂಚಿಕೊಳ್ಳುತ್ತಾರೆ, ಇದರ ಮಧ್ಯದಲ್ಲೂ ಈ ಎರಡು ಹಬ್ಬಗಳು ಒಟ್ಟಾಗಿ ಬಂದ್ರೆ ಹೇಗೆ ಅಲ್ವಾ? ಇದಕ್ಕೇ ಹೇಳೋದು ಮನುಷ್ಯ ಹುಟ್ಟಿನಿಂದ ಸಾಯಿಯುವ ತನಕು ಮನುಷ್ಯ ಜಾತಿಯಿಂದ ಸಾಯಿಬೇಕು, ನಾನು ಮೇಲು, ನೀನು ಕೀಳು ಎಂಬ ಭಾವನೆ ಭಾರದಂತೆ ನೋಡಿಕೊಂಡರೆ ಅದೇ ಮನುಷ್ಯತ್ವ ಅನ್ನುವುದು. ಬಸವ ಜಯಂತಿಯು 12 ನೇ ಶತಮಾನದ ಸಮಾಜ ಸುಧಾರಕ, ಸಂತ ಮತ್ತು ಧಾರ್ಮಿಕ ಗುರು ಬಸವಣ್ಣನ ಜನ್ಮದಿನವನ್ನು ಸೂಚಿಸುತ್ತದೆ . ಇದು ಮುಖ್ಯವಾಗಿ ಕರ್ನಾಟಕ, ತೆಲಂಗಾಣ ಮತ್ತು ಇತರ ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಚರಿಸುವ ಪ್ರಾದೇಶಿಕ ಹಬ್ಬವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಭಗವಾನ್ ಬಸವೇಶ್ವರ ಜನ್ಮದಿನವು ಸಾಮಾನ್ಯವಾಗಿ ವೈಶಾಖ ಮಾಸದ ಮೂರನೇ ದಿನದಂದು ಬರುತ್ತದೆ. ಮಹತ್ವ ಈ ಹಬ್ಬವನ್ನು ಬಸವಣ್ಣನ ಯುಗ ಅಥವಾ ಬಸವೇಶ್ವರ ಯುಗ ಎಂದು ಕರೆಯಲಾಗುವ ಹೊಸ ಯುಗದ ಆರಂಭವಾಗಿ ಆಚರಿಸಲಾಗುತ್ತದೆ. 2023 ರಲ್ಲಿ ಇದು ಪೂಜ್ಯ ಸಮಾಜ ಸುಧಾರಕನ 890 ನೇ ಜನ್ಮ ವಾರ್ಷಿಕೋತ್ಸವವಾಗಿರುತ್ತದೆ. ಕೆಳಗಿನ ಸ್ಥಳಗಳಲ್ಲಿ ಬಸವೇಶ್ವರ ದೇವಾಲಯಗಳಿವೆ, ಅಲ್ಲಿ ನೀವು ರೋಮಾಂಚಕ ಉತ್ಸವವನ್ನು ಸಂಪೂರ್ಣವಾಗಿ ಅನುಭವಿಸಬಹುದು: ಕವನಾಪುರ,ಬೆಂಗಳೂರು,ಕುರಟ್ಟಿ ಹೊಸೂರು, ಗುಲ್ಬರ್ಗ,ಗುಡಿಗಟ್ಟನಹಳ್ಳಿ,ಕುರಟ್ಟಿ ಹೊಸೂರು,ಕೋಡಿ ಹಳ್ಳಿ, ಕೆಂಪನಾಪ್ಲೇಯ, ಮಲ್ಲೇಹಳ್ಳಿ, ವನಕನಹಳ್ಳಿ, ತಿಪ್ಪಸಂದ್ರ,ಐಬಸಾಪುರ,ಕಂಬಳಿಪುರ,, ಗಾಣಗಳೂರು,ಮಾದಾವರ,ಕೆಮ್ಮಲೆ, ತಿಪ್ಪೂರು, ಈ ಪಟ್ಟಣಗಳು ಮತ್ತು ನಗರಗಳೆಲ್ಲವೂ ಕರ್ನಾಟಕದಲ್ಲಿವೆ. ಆದಾಗ್ಯೂ, ತಮಿಳುನಾಡಿನ ಕೃಷ್ಣಗಿರಿ ದೇವಾಲಯವು ನೀವು ಅಧಿಕೃತ ಆಚರಣೆಗಳೊಂದಿಗೆ ಹಬ್ಬವನ್ನು ವೀಕ್ಷಿಸಬಹುದಾದ ಮತ್ತೊಂದು ಸ್ಥಳವಾಗಿದೆ. ಬಸವಣ್ಣನವರ ಜೀವನ ಮತ್ತು ಬೋಧನೆಗಳ ಗೌರವಾರ್ಥವಾಗಿ ಪ್ರಾರ್ಥನಾ ಮಂದಿರಗಳಲ್ಲಿ ಉಪನ್ಯಾಸಗಳನ್ನು ನೀಡಲಾಗುತ್ತದೆ. ಹಲವಾರು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮತ್ತು ಆರರಿಂದ ಏಳು ದಿನಗಳ ಕಾಲ ಬಸವ ಜಯಂತಿಯನ್ನು ಆಚರಿಸುವ ಕೂಡಲಸಂಗಮಕ್ಕೆ ಅನೇಕ ಭಕ್ತರು ಭೇಟಿ ನೀಡಲು ಬಯಸುತ್ತಾರೆ. ಬಸವಣ್ಣನವರು ವೈಯಕ್ತಿಕ ಮೋಕ್ಷವನ್ನು ಬೇಡಿದವರಲ್ಲ. ಶಿವಭಕ್ತಿಯಲ್ಲಿಯೇ ಸುಖ ಕಂಡವರು. ಸಮಾಜದ ಎಲ್ಲ ವರ್ಗದವರಿಗೂ ಈ ಶಿವನನ್ನು ತೋರಿಸಲು ಸಂಚಲಿಸಿದವರು. ಅದಕ್ಕಾಗಿ ಲಿಂಗಪೂಜೆ, ಜಂಗಮಪೂಜೆ, ಶಿವಭಕ್ತಿ ಎನ್ನುವ ಮಾರ್ಗವನ್ನು ತೋರಿಸಿದವರು. ಇದು ಬಸವಣ್ಣನವರ ದ್ವೈತ ತತ್ವ. ಸನಾತನ ಮಾರ್ಗದಲ್ಲಿ ವೈಯಕ್ತಿಕ ಸಾಧನೆಗೆ ಮಹತ್ವವಿದೆ. ಬಸವಣ್ಣನವರು ಸಮಷ್ಟಿಮಾರ್ಗದ ಸಾಧನೆಯ ಪಥವನ್ನು ತೋರಿಸಿದರು. ಇದಕ್ಕಾಗಿ ಅನುಭವಮಂಟಪವನ್ನು ರೂಪಿಸಿದರು.
ರಂಜಾನ್ ಹಬ್ಬದ ವಿಶೇಷತೆ ಬಗ್ಗೆ :-
ಮುಸ್ಲಿಂ ಸಹೋದರ, ಸಹೋದರಿಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ರಂಜಾನ್ ಕೂಡ ಒಂದಾಗಿದೆ. ಧಾರ್ಮಿಕ ಬಾಂಧವ್ಯವನ್ನು ಬಲಪಡಿಸುವ ಮತ್ತು ನಮ್ಮ ಸುತ್ತಲಿನ ಜನರೊಂದಿಗೆ ದಯೆ ತೋರುವ ದಿನವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ಈ ದಿನದಂದು ದೇವರಿಂದ ಜನರಿಗೆ ಬಹಿರಂಗವಾಯಿತು ಎಂಬ ನಂಬಿಕೆ ಜನರಲ್ಲಿದೆ. ರಂಜಾನ್ ತಿಂಗಳ ಉಪವಾಸ ಇಸ್ಲಾಮಿನ ಐದು ಕಂಬಗಳಲ್ಲಿ ನಾಲ್ಕನೆಯದು. ಸ್ವೇಚ್ಛೆ, ಸ್ವಾರ್ಥ, ಅತ್ಯಾಗ್ರಹ, ಕಾಮಾಸಕ್ತಿಗಳಿಂದ, ಎಲ್ಲಾ ವಿಧ ಮಾನವ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ, ದೇಹ ಮತ್ತು ಆತ್ಮವನನ್ನು ಪವಿತ್ರಗೊಳಿಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ. ಪವಿತ್ರ ರಂಜಾನ್ನಲ್ಲಿ ಒಂದು ತಿಂಗಳ ಉಪವಾಸ ಮಾಡುವ ಮೂಲಕ ನಮ್ಮ ಸಂಬಂಧ ದೇವರ ಜೊತೆ ಮತ್ತಷ್ಟು ಗಟ್ಟಿಯಾಗುತ್ತೆ. ದೇವರಿಗೆ ಹತ್ತಿರವಾಗಲು ಸಹಾಯ ಮಾಡುತ್ತೆ ಎಂದು ಮುಸ್ಲಿಮರು ನಂಬುತ್ತಾರೆ. ಈ ತಿಂಗಳಲ್ಲಿ ಉಪವಾಸ ಮಾಡಿದ್ರೆ ಕಷ್ಟ/ಸಂಕಷ್ಟಗಳು ಕಡಿಮೆಯಾಗುತ್ತವೆ ಎಂದು ಕೆಲವರು ನಂಬುತ್ತಾರೆ. ಈ ತಿಂಗಳಲ್ಲಿ ಮುಸ್ಲಿಮರು ಬಡವರಿಗೆ ದಾನ-ಧರ್ಮ ಮಾಡುವುದು ಹಾಗೂ ಹಸಿದವರಿಗೆ ಆಹಾರ ನೀಡುವಂಥ ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ. ಈ ಪವಿತ್ರ ತಿಂಗಳ ಮೊದಲ ಮತ್ತು ಕೊನೆಯ ದಿನಾಂಕಗಳು ಚಂದ್ರನ ಇಸ್ಲಾಮಿಕ್ ಕ್ಯಾಲೆಂಡರ್ ಅನ್ನು ಅವಲಂಬಿಸಿರುತ್ತದೆ. ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಒಂದು ತಿಂಗಳ ಅಮಾವಾಸ್ಯೆಯ ನಂತರ ಕಾಣಿಸಿಕೊಳ್ಳುವ ಅರ್ಧಚಂದ್ರಾಕೃತಿಯೊಂದಿಗೆ ಪ್ರಾರಂಭವಾಗುತ್ತದೆ. ಈ ಹಬ್ಬವು ಈದ್-ಉಲ್-ಫಿತರ್ನೊಂದಿಗೆ ಕೊನೆಗೊಳ್ಳುತ್ತದೆ. ರಂಜಾನ್ ಉಪವಾಸ ಆಚರಣೆ ರಂಜಾನ್ ತಿಂಗಳಲ್ಲಿ ರೋಜಾ ಅಥವಾ ಉಪವಾಸಕ್ಕೆ ಅದರದೇ ಆದ ಮಹತ್ವವಿದೆ. ಸೂರ್ಯೋದಯಕ್ಕೆ ಮುಂಚಿನ ತಿಂಡಿಯನ್ನು ಸೋಹರ್ ಎಂದು ಕರೆಯಲಾಗುತ್ತದೆ ಮತ್ತು ಸೂರ್ಯಾಸ್ತದ ನಂತರ ಉಪವಾಸವನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಯನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ. ಇನ್ನು ರಂಜಾನ್ ಸಮಯದಲ್ಲಿ ಕೇವಲ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಉಪವಾಸ ಮಾಡಿಸಲಾಗುತ್ತದೆ. ಮುಸ್ಲಿಮರು ಉಪವಾಸದ ವೇಳೆ ಸಿಗರೇಟ್, ಮದ್ಯ, ತಂಬಾಕು ಸೇವನೆ, ಲೈಂಗಿಕ ಸಂಬಂಧವನ್ನು ಬೆಳೆಸುವುದನ್ನೂ ಕೂಡ ತಪ್ಪಿಸುತ್ತಾರೆ. ಏಕೆಂದರೆ ಉಪವಾಸದ ಸಮಯದಲ್ಲಿ ಇಂಥ ಚಟುವಟಿಕೆಗಳನ್ನು ಪಾಪ ಎಂದು ಪರಿಗಣಿಸಲಾಗುತ್ತದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ತಮ್ಮನ್ನು ಅಧ್ಯಾತ್ಮ ಪ್ರವೃತ್ತಿಗೆ ಅರ್ಪಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಎಕತೆ ಸಾರು ಈ ನಾಡಿನಲ್ಲಿ ಮತ್ತೊಮ್ಮೆ ಸಾಕ್ಸಿಗೆ ಈ ಎರಡು ಹಬ್ಬಗಳು ಜೊತೆಗೆ ಬಂದಿರುವುದು ವಿಶೇಷವಾಗಿದೆ. ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಸಮಸ್ತ ನಾಡಿನ ಜನತೆಗೆ ಬಸವ ಜಯಂತಿ ಹಾಗೂ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.
ವರದಿ – ಸಂಪಾದಕೀಯಾ