ನಾರಿನಾಳ ಗ್ರಾಮದ ಈಶ್ವರ ಹಾಗೂ ಬಸವೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ.
ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಾರಿನಾಳ ಗ್ರಾಮದ ಈಶ್ವರ ಹಾಗೂ ಬಸವೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ ಅಂಗವಾಗಿ 15ನೇ ವರ್ಷದ ಸಾಮೂಹಿಕ ವಿವಾಹ 22 ನವಜೋಡಿಗಳಿಗೆ ನಾರಿನಾಳ ಗ್ರಾಮದ ಗುರು ಹಿರಿಯರು ಹಾಗೂ ಯುವಕ ಮಿತ್ರರು ಜಾತ್ರೆ ಹಾಗೂ ಸಾಮೂಹಿಕ ವಿವಾಹ ಜರಗಿಸಿದರು ಜಾತ್ರೆ ಅಂಗವಾಗಿ ಕುಂಬೋತ್ಸವ ಅದ್ದೂರಿಯಾಗಿ ಜರುಗಿತು. ಶ್ರೀ ಶ್ರೀ ಶ್ರೀ ಷ.ಬ್ರ ಶಿವಯೋಗಿ ಶಿವಾಚಾರ್ಯರು ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ರೌಡಕುಂದಿ ಇವರ ಘನಧ್ಯಕ್ಷತೆಯಲ್ಲಿ ಶ್ರೀಶ್ರೀಶ್ರೀ 108 ಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮುದ್ರಾನೇಶ್ವರಮಠ ಕುಷ್ಟಗಿ ಷಾ : ಅಮರಗುಂಡಯ್ಯ ರವರ ಹಿರೇಮಠ ದೀಪಾಳ ತ್ರಿವಿಧ ದಾಸೋಹ ಮೂರ್ತಿಗಳಾದ ಶ್ರೀ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮಿಗಳು ಸುಕ್ಷೇತ್ರ ಅಂಕಲಿಮಠ ಪರಮ ಪೂಜ್ಯಶ್ರೀ ಶ್ರೀಶ್ರೀಶ್ರೀ ನೀಲಕಂಠಯ್ಯ ತಾತನವರು ಸುಕ್ಷೇತ್ರ ಎಂ.ಗುಡದೂರು ಪರಮ ಪೂಜ್ಯ ಶ್ರೀ ಶ್ರೀಶ್ರೀಶ್ರೀ ಸಂಜೀವಪ್ಪಯ್ಯ ತಾತನವರು ಜ್ಞಾನಮೂರ್ತಿ ಸಾ// ಮರಟಗೇರಿ. ಪರಮ ಪೂಜ್ಯ ಶ್ರೀಶ್ರೀಶ್ರೀ ವೀರಭದ್ರಯ್ಯ ಸ್ವಾಮಿಗಳು ಹಿರೇಮಠ ನಾರಿನಾಳ ಪರಮ ಪೂಜ್ಯ ಶ್ರೀಶ್ರೀಶ್ರೀ ಅಮರಯ್ಯಶಾಸ್ತ್ರಿಗಳು ಚಿಕ್ಕಬೇರಿಗಿ ಇವರುಗಳ ನೇತೃತ್ವದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವುಕೂಡಾ ಇದೇ ಶಾಲಿವಾಹನ ಶಕೆ 1945 ನೇ ಶೋಭಕೃತುನಾಮ ಸಂವತ್ಸರ ವೈಶಾಖ ಶು॥ 3 ದಿನಾಂಕ 23-04-2025 ರವಿವಾರ ಬೆಳಿಗ್ಗೆ 6-00 ಘಂಟೆಗೆ ಬ್ರಹ್ಮಂ ಮುಹೂರ್ತದಲ್ಲಿ ‘ರುದ್ರಾಭಿಷೇಕ” ನಂತರ 8-00 ಘಂಟೆಗೆ ಗುಡಿಯಿಂದ “ಗಂಗೆಸ್ಥಳಕ್ಕೆ 101 ಕುಂಭೋತ್ಸವ ಕಳಸ, ಕನ್ನಡಿ, ಡೊಳ್ಳುಕುಣಿತ ಭಜನೆ ಸಕಲ ವಾದ್ಯ ವೈಭದಗಳೊಂದಿಗೆ ಹೊಗಿಮರಳಿ ಶ್ರೀ ಬಸವೇಶ್ವರ ಹಾಗೂ ಈಶ್ವರ ದೇವಸ್ಥಾನಕ್ಕೆ ತಲುಪುವುದು ನಂತರ ಮಧ್ಯಾಹ್ನ 12-30 ಕ್ಕೆ. ಅಭಿಜಿತ್ ಲಗ್ನದ ಶುಭ ಮುಹೂರ್ತದಲ್ಲಿ ಸುಮಾರು 22 ನವ ಜೋಡಿಯ ಸಾಮೂಹಿಕ ವಿವಾಹಗಳು ಜರುಗಿದವು. ನಂತರ “ಗಣರಾಧನೆ” ಹಾಗೂ ಮಹಾದಾಸೋಹವು ಜರುಗಿತು. ಕಾರಣ ಭಕ್ತಾಧಿಗಳು ತನು, ಮನ, ಧನ, ಸೇವೆಸಲ್ಲಿಸಿ ಶ್ರೀ ಈಶ್ವರ ಮತ್ತು ಬಸವೇಶ್ವರನ ಕೃಪೆಗೆ ಸರ್ವ ಭಕ್ತಾಧಿಗಳು ಪಾತ್ರರಾದರು. ಈ ಸಂದರ್ಭದಲ್ಲಿ ನಾರಿನಾಳ ಗ್ರಾಮದ ಗುರು/ಹಿರಿಯರು, ಯುವಕ ಮಿತ್ರರು, ಹಾಗೂ ಊರಿನ ಮುಖಂಡರು ಸೇರಿ ಈ ಜಾತ್ರ ಮೋಹೊತ್ಸವವನ್ನು ಅದ್ದೂರಿಯಾಗಿ ಆಚರಿಸಿದರು.
ವರದಿ – ಉಪಳೇಶ ವಿ.ನಾರಿನಾಳ