ವಿಜಯನಗರ 90 ವಿಧಾನಸಭಾ ಕ್ಷೇತ್ರದ # ಕೆಆರ್ಎಸ್ಪಕ್ಷ ದ ಬಂಡಾಯ ಅಭ್ಯರ್ಥಿಯಾದ # ಪಯಗಣೇಶ ಗುರುತು ನಿಮ್ಮ ಕಾಲಲ್ಲಿದೆ. ಕ್ರಮ ಸಂಖ್ಯೆ 10. ನಿಮ್ಮ ದಯೆಯೊಂದಿರಲಿ…

Spread the love

ವಿಜಯನಗರ 90 ವಿಧಾನಸಭಾ ಕ್ಷೇತ್ರದ # ಕೆಆರ್ಎಸ್ಪಕ್ಷ ಬಂಡಾಯ ಅಭ್ಯರ್ಥಿಯಾದ # ಪಯಗಣೇಶ ಗುರುತು ನಿಮ್ಮ ಕಾಲಲ್ಲಿದೆ. ಕ್ರಮ ಸಂಖ್ಯೆ 10. ನಿಮ್ಮ ದಯೆಯೊಂದಿರಲಿ

ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (Day NULM) ಅನ್ನುತ್ತಾರೆ ಕನ್ನಡದಲ್ಲಿ. ನಗರ ಪ್ರದೇಶದ ಬಡ ಕುಟುಂಬಗಳ ಬಡತನ ಮತ್ತು ದುರ್ಬಲತೆಯನ್ನು ಕಡಿಮೆ ಮಾಡಲು ಅವರಿಗೆ ಲಾಭದಾಯಕ ಸ್ವ ಉದ್ಯೋಗ ಮತ್ತು ಕೌಶಲ್ಯಪೂರ್ಣ ವೇತನ, ಉದ್ಯೋಗಾವಕಾಶಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುವುದು, ಬಡವರ ಬಲವಾದ ತಳಮಟ್ಟದ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಸುಸ್ಥಿರ ಆಧಾರದ ಮೇಲೆ ಅವರ ಜೀವನೋಪಾಯದಲ್ಲಿ ಗಮನಾರ್ಹ ಸುಧಾರಣೆಗೆ ಕಾರಣವಾಗುತ್ತದೆ. ನಗರ ಪ್ರದೇಶದ ನಿರಾಶ್ರಿತರಿಗೆ ಹಂತಹಂತವಾಗಿ ಅಗತ್ಯ ಸೇವೆಗಳನ್ನು ಹೊಂದಿರುವ ಆಶ್ರಯವನ್ನು ಒದಗಿಸುವ ಗುರಿಯನ್ನು ಈ ಮಿಷನ್ ಹೊಂದಿದೆ. ಹೆಚ್ಚುವರಿಯಾಗಿ, ಸೂಕ್ತವಾದ ಸ್ಥಳಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ನಗರ ಬೀದಿ ವ್ಯಾಪರಿಗಳ ಜೀವನೋಪಾಯದ ಕಾಳಜಿಗಳನ್ನು ಮಿಷನ್ ಪರಿಹರಿಸುತ್ತದೆ ಆದರೆ, ಆಗಿರುವುದೇನು…? ಇವತ್ತಿಗೂ ನಮ್ಮ #ಹೊಸಪೇಟೆಯ_ಮಹಾಜನತೆ ಯಾರೋ ಚುನಾವಣೆ ಪ್ರಚಾರಕ್ಕೆ ಕರೆದರೆ ಬರೀ ಇನ್ನೂರು ರೂಪಾಯಿಗಳಿಗೆ, #ಐನೂರು ರೂಪಾಯಿಗಳಿಗೆ ಓಡೋಡಿ ಹೋಗಿ ಬಿಡುತ್ತಾರೆ. ಬದುಕು ಕಟ್ಟುವ ಒಂದು ಕೆಲಸ ಮಾಡದವರಾದರೂ ಪರವಾಯಿಲ್ಲ ನಮ್ಮ ಜನಕ್ಕೆ. ಐನೂರು ಕೊಡುತ್ತಾರೆ ಎಂದರೆ ಓಡೋಡಿ ಹೋಗಿ ಅವರ ಪಕ್ಷಗಳ ಜಂಡಾಗಳನ್ನು, ಶಾಲುಗಳನ್ನು ಹೊದ್ದುಕೊಳ್ಳುತ್ತಾರೆ. ನಾನು ಹೊಸಪೇಟೆ ತಾಲೂಕಿನ, ವಿಜಯನಗರ-90 ವಿಧಾನಸಭಾ ಕ್ಷೇತ್ರದ ಸಮಸ್ತ ಜನಗಳ ಅಭ್ಯುದಯ ಕೋರುತ್ತಿದ್ದೇನೆ. ಈ NULM ಯೋಜನಾಧಿಕಾರಿ ನೋಡಿದರೆ, #ಹೊಸಪೇಟೆ_ನಗರಸಭೆ ಯಲ್ಲಿ ಕಾಸ್ಟ್ಲಿ ಕುಷನ್ ಚೇರ್ ಹಾಕಿಕೊಂಡು ವಿರಾಜಮಾನರಾಗುತ್ತಾರೆ. ನಮ್ಮ ನಗರಸಭೆಗೆ ಹೊಸಪೇಟೆಯ ಮಹಾಜನತೆ ಹೋದರೆ ಕೂತುಕೊಳ್ಳಲಿಕ್ಕೆ ಒಂದು ಚೇರ್ ಇಟ್ಟಿಲ್ಲ; ಕುಡಿಯಲಿಕ್ಕೆ ನೀರಿಟ್ಟಿಲ್ಲ; ವಿಸರ್ಜಿಸಲಿಕ್ಕೆ ಹೋದರೆ ಶೌಚಾಲಯ ಗಬ್ಬು ನಾರುತ್ತಿದೆ. ಅಭಿವೃದ್ಧಿಯ ಹರಿಕಾರ ಅಂತ ಕರೆದುಕೊಳ್ಳುವ ಶಾಸಕ ಆನಂದ್ ಸಿಂಗ್ ನೋಡಿದರೆ, ನಗರಸಭೆಯ ಶತಮಾನೋತ್ಸವ ಭವನ ಕಟ್ಟಿದ್ದೇನೆ ಅಂತ ತಮ್ಮ ಭುಜವನ್ನು ತಾವೇ ತಟ್ಟಿಕೊಳ್ಳುತ್ತಾರೆ. #ಪ್ರಜಾಪ್ರಭುತ್ವ ಅಂದರೆ ಏನೆಂದು ತಿಳಿದುಕೊಳ್ಳದ ಹೊರತು, ಹೊಸಪೇಟೆಯ ಮಹಾಜನತೆಯ ಜೀವನೋಪಾಯ ಸುಧಾರಿಸುವುದಿಲ್ಲ… #ಪಯಗಣೇಶ #ವಿಜಯನಗರ_90 ವಿಧಾನಸಭಾ ಕ್ಷೇತ್ರದ ಕೆ ಆರ್ ಎಸ್ ಪಕ್ಷದ ಬಂಡಾಯ ಅಭ್ಯರ್ಥಿ #ಪಯಗಣೇಶನಿಗೊಂದು_ಅವಕಾಶ #ವಿಜಯನಗರಕ್ಕೊಂದುನೂತನ ಇತಿಹಾಸ ಹೊಸಪೇಟೆ. 9481 711 600.

ವರದಿ – ಸಂಪಾದಿಕೀಯ

Leave a Reply

Your email address will not be published. Required fields are marked *