ಕಂಪ್ಲಿಯಲ್ಲಿ ಸ್ನಾತಕೋತ್ತರ ಪದವಿ ಕಾಲೇಜ್ ತೆರೆಯುವಂತೆ ಭಾರತೀಯ ದಲಿತ ಪ್ಯಾಂಥರ್ ನಿಂದ ಮನವಿ.
ಕಂಪ್ಲಿ: ಏ29, ಕಂಪ್ಲಿ ನಗರದಲ್ಲಿ ಸ್ನಾತಕೋತ್ತರ ಪದವಿ ಕಾಲೇಜ್ ತೆರೆಯುವಂತೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಕಂಪ್ಲಿ ತಾಲೂಕು ಘಟಕದ ವತಿಯಿಂದ ಕಂಪ್ಲಿ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರರಾದ ರಮೇಶ್ ರವರ ಮುಖಾಂತರ ವಿ ಎಸ್ ಕೆ ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು, ಮನವಿ ಸಲ್ಲಿಸಿ ಮಾತನಾಡಿದ ಅಧ್ಯಕ್ಷರಾದ ಸೈಯ್ಯದ್ ವಾರೀಶ್ ಎನ್ ರವರು ಜಿಲ್ಲೆಯ ಕಂಪ್ಲಿ ನಗರದಲ್ಲಿ ಸರ್ಕಾರಿ ಪದವಿ ಕಾಲೇಜ್ ಹಾಗೂ ಖಾಸಗಿ ಪದವಿ ಕಾಲೇಜ್‌ಗಳಿದ್ದು ಪ್ರತಿ ವರ್ಷ ಕಂಪ್ಲಿ ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಿಂದ ಸುಮಾರು ವರ್ಷಕ್ಕೆ 150 ರಿಂದ 200 ಜನ ವಿಧ್ಯಾರ್ಥಿಗಳು ಪದವಿ ನಂತರ ಉನ್ನತ ಶಿಕ್ಷಣ ಪಡೆಯಲು ಸ್ನಾತಕೋತ್ತರ ಪದವಿ ಎಂಎ, ಎಂ.ಕಾಂ ವಿದ್ಯಾಭ್ಯಾಸಕ್ಕಾಗಿ ಕಂಪ್ಲಿ ನಗರದಿಂದ ದೂರದ ಬಳ್ಳಾರಿ ಮತ್ತು ಕೊಪ್ಪಳ, ಗಂಗಾವತಿಗೆ ತೆರಳಬೇಕಾಗಿರುತ್ತದೆ. ಅಲ್ಲದೆ ಕಂಪ್ಲಿ ತಾಲೂಕಿನ ವಿದ್ಯಾರ್ಥಿಗಳು ದೂರದ ಬಳ್ಳಾರಿ, ಕೊಪ್ಪಳ, ಗಂಗಾವತಿಗೆ ವಿದ್ಯಾಭ್ಯಾಸಕ್ಕೆ ತೆರಳಲು ಕಂಪ್ಲಿ ತಾಲೂಕಿನಲ್ಲಿನ ತಮ್ಮ ಸ್ವಗ್ರಾಮಗಳಿಂದ ಕಂಪ್ಲಿ ನಗರಕ್ಕೆ ಪ್ರಯಾಣಿಸಿ ನಂತರ ಕಂಪ್ಲಿ ನಗರದಿಂದ 52 ಕಿಮೀ ದೂರದ ಬಳ್ಳಾರಿಗೆ, ಅದೇ ರೀತಿ 54 ಕಿಮೀ ದೂರದ ಕೊಪ್ಪಳ, 15ಕಿಮೀ ದೂರದ ಗಂಗಾವತಿಗೆ ಪ್ರಯಾಣಿಸಿ ಹರಸಾಹಸ ಪಟ್ಟು ವಿದ್ಯಾಭ್ಯಾಸ ಮಾಡುತ್ತಿರುವುದು ದುರ್ದೈವ, ಹಾಗೂ ವಿದ್ಯಾಲಯಗಳ ನಿಯಮದಂತೆ ನಿಗದಿ ಪಡಿಸಿದ ಸೀಟ್‌ಗಳು ಭರ್ತಿಯಾದ ನಂತರ ದೂರದ ಹುಬ್ಬಳ್ಳಿ-ಧಾರವಾಡ, ಬೆಂಗಳೂರಿಗೆ ತೆರಳಿ ವಿದ್ಯಾಭ್ಯಾಸ ಮಾಡಬೇಕಾದ ಅನಿವಾರ್ಯತೆ ಸುಮಾರು ವರ್ಷಗಳಿಂದ ನಡೆದುಕೊಂಡು ಬಂದಿರುವುದು ವಿಧ್ಯಾರ್ಥಿಗಳಿಗೆ ಪೋಷಕರಿಗೆ ಆರ್ಥಿಕ ಹೊರೆಯಾಗಿರುತ್ತದೆ ಹಾಗೂ ಕೆಲವು ವಿದ್ಯಾರ್ಥಿಗಳು, ಪೋಷಕರು ಆರ್ಥಿಕ ಹೊರೆ ಹೊರಲಾರದೇ ಮಕ್ಕಳನ್ನ ವಿದ್ಯಾಭ್ಯಾಸಕ್ಕೆ ದೂರದೂರಿಗೆ ಕಳುಹಿಸಲು ಇಚ್ಚಿಸದೇ ಹಿಂಜರಿದು ಸ್ಥಗಿತಗೊಳಿಸಿರುವುದು ಬೇಸರದ ಸಂಗತಿಯಾಗಿರುತ್ತದೆ, ಆದ್ದರಿಂದ ನೂತನವಾಗಿ ತಾಲೂಕು ಕೇಂದ್ರವಾಗಿ ಹೊರಹೊಮ್ಮಿರುವ ಕಂಪ್ಲಿಯು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರಲಿದ್ದು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಂಪ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಕೊಠಡಿಗಳಿದ್ದು ಅಲ್ಲಿಯೇ ಸ್ನಾತಕೋತ್ತರ ಪದವಿ, ಎಂಎ, ಎಂ.ಕಾಂ ತರಗತಿಗಳನ್ನು ಪ್ರಸ್ತುತದ ಈ ಅಕಾಡೆಮಿಕ್ ವರ್ಷದಿಂದಲೇ ತ್ವರಿತವಾಗಿ ಸ್ನಾತಕೋತ್ತರ ಪದವಿ ಕಾಲೇಜ್‌ನ್ನು ಸ್ಥಾಪಿಸಲು ಅಗತ್ಯ ಪ್ರಕ್ರಿಯೆಗಳನ್ನು ಕೂಡಲೇ ಕೈಗೊಳ್ಳುವಂತೆ ಮನವಿ ಮಾಡಿಕೊಂಡರು, ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಮೇಶ್ ಕುಂಟೋಜಿ, ಖಜಾಂಚಿ ರೋಷನ್ ಯಾಳ್ಪಿ, ಗೌರವಾಧ್ಯಕ್ಷ ಹೇಮಂತ್ ಕುಮಾರ್ ಡಿ, ಗಂಗಾವತಿ ಕೃಷ್ಣ, ಸುಭಾನ್, ಗುರು ಶಾಸ್ತ್ರೀ, ಪಿ.ಸಿ.ಈರಣ್ಣ, ಎಂ. ಪಂಪನ ಗೌಡ, ಪುರುಷೋತ್ತಮ್, ದೇವರಾಜ್ ಹೆಚ್, ಸಿ.ಡಿ.ಅನಿಲ್ ಕುಮಾರ್, ಧನರಾಜ್, ಕೆ. ಶಾಂತ ಕುಮಾರ್, ವೆಂಕಟೇಶ್, ಗಣೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.
ವರದಿ-ಮಹೇಶ ಶರ್ಮಾ