ತಾವರಗೇರಾ ಪಟ್ಟಣದಲ್ಲಿಂದು ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾರದಾ ಕಟ್ಟಿಮನಿಯವರಿಂದ ಕಾಂಗ್ರೆಸ್ ಪ್ರಚಾರಕ್ಕೆ ಆಗಮಿಸಿದ ಚಿತ್ರ ನಟಿ ಶ್ರೀಮತಿ ಉಮಾಶ್ರಿಯವರಿಗೆ ಅದ್ದೂರಿಯಾಗಿ ಸ್ವಾಗತ.
ಕುಷ್ಟಗಿ ವಿಧಾನ ಸಭಾ ಕ್ಷೇತ್ರದದಲ್ಲಿ ಈ ಸಾರಿ ಅದ್ದೂರಿ ಕಾಂಗ್ರೆಸ್ ಪ್ರಚಾರ ನಡೆಯುತ್ತಿದ್ದು. ಇಂದು ರಾಜ್ಯದಿಂದ ಕುಷ್ಟಗಿ ವಿಧಾನ ಸಭಾ ಕ್ಷೇತ್ರಕ್ಕೆ ಘಟನು ಘಟಿಗಳು ಆಗಮಿಸುತ್ತಿದ್ದು. ನಮ್ಮ ತಾವರಗೇರಾ ಪಟ್ಟಣಕ್ಕೆ ಆಗಮಿಸಿದ ಚಿತ್ರ ನಟಿ ಹಾಗೂ ಮಾಜಿ ಸಚಿವರಾದ ಶ್ರೀಮತಿ ಉಮಾಶ್ರಿಯವರು ಆಗಮಿಸಿದ್ದು. ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಶಾರದಾ ಕಟ್ಟಿಮನಿಯವರಿಂದ ಅದ್ದೂರಿಯಾಗಿ ಬರಮಾಡಿಕೊಂಡು ಮಾಲಾಪರ್ಣೆ ಮಾಡಿ ಸನ್ಮಾನಿಸಲಾಯಿತು. ತಾವರಗೇರಾ ಪಟ್ಟಣದ ಬಸವಣ್ಣ ಕ್ಯಾಂಪ್ ನಲ್ಲಿ ಕಾಂಗ್ರೆಸ್ ಪ್ರಚಾರದ ಜೊತೆಗೆ ಗಲ್ಲಿ ಗಲ್ಲಿಯಲ್ಲು ಸಭೆ ಜರುಗಿತು. ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾರದಾ ಕಟ್ಟಿಮನಿಯವರಿಂದ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಭರ್ಜೇರಿ ಕಾ ಪ್ರಚಾರ ಜರುಗಿತು. ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಏರುತ್ತಿದೆ, ಈ ಸಾರಿ ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಇತಿಹಾಸ ಬದಲಾಯಿಸಲು ಆತ್ಮೀಯ ಮತದಾರ ಬಾಂದವರು ಒಗ್ಗಟ್ಟಿನಲ್ಲಿ ಬಲವಿದೆ ಅನ್ನುವುದಕ್ಕೆ ಸಾಕ್ಷಿಯಾಗಿ ನಮ್ಮ ಧೀಮಂತ ನಾಯಕನನ್ನು ಗೆಲ್ಲಿಸಬೇಕಾಗಿದೆ. ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಜುಮಾಲಾಪೂರ ತಾವರಗೇರಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾರದಾ ಕಟ್ಟಿಮನಿಯವರು ಹಾಗೂ ರಾಜ್ಯದ ಮುಖಂಡರು ಸಾರ್ವಜನಿಕರಿಗೆ ಬೇಟೆ ನೀಡಿ, ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಸಮಸ್ತ ಮತಧಾರು ಸೇರಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ, ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿ ಹಾಗೂ ನಮ್ಮ ನಿಮ್ಮೆಲ್ಲರ ಅಚ್ಚು/ಮೆಚ್ಚಿನ ಹೃದಯವಂತ ನಾಯಕರಾದ ಶ್ರೀ ಅಮರೇಗೌಡ ಎಲ್ ಬಯ್ಯಾಪುರ ಇವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು, ಜೊತೆಗೆ ಉತ್ತಮ ಸಮಾಜದ ನಿಮಾರ್ಣಕ್ಕೆ, ಅಭಿವೃದ್ದಿಯ ಕಾರ್ಯಗಳಿಗೆ ಮುನ್ನುಗ್ಗುವ ನಾಯಕರಾದಂತ ನಮ್ಮ ಬಡವರ ಬಂದು, ಧಿನ ದಲೀತರ ನಾಯಕ, ರೈತ ಪರ ಹೋರಾಟಗಾರರು, ಹಾಗೂ ಶಿಕ್ಷಣ ಪ್ರೇಮಿಯಾದಂತ ನಮ್ಮ ಅಮರೇಗೌಡ್ ಬಯ್ಯಾಪೂರವರನ್ನ ಈ ಸಾರಿ ಎಲ್ಲಾ ಚುನಾವಣಾಗಿಂತಲೂ ಈ ಭಾರಿ ಪ್ರಚಂಡ ಬಹುಮತದಿಂದ ಆರಿಸಿ ತರುವ ಹಕ್ಕು ನಮ್ಮ ನಿಮ್ಮೆಲ್ಲರದ್ದು, ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಅಭಿವೃದ್ದಿ ಹಾಗೂ ಬಡವರ ಏಳಿಗೆಗಾಗಿ ಹಗಲಿರುಳು ಎನ್ನದೆ ಶ್ರಮಿಸುತ್ತಿರುವ ನಮ್ಮ ನಾಯಕರನ್ನ ಎಂದಿಗೂ ಮರೆಯಬಾರದು ಜೊತೆಗೆ ಇವರು ಮಾಡಿದ ಅಭಿವೃದ್ದಿಗಳು ಇಂದಿಗೂ ಮತ್ತು ಮುಂದಿನ ಪಿಳಿಗೆಗೂ ಶಾಶ್ವತವಾಗಿದ್ದಾವೆ. ಹಾಗಾಗಿ ತಮ್ಮ ಅಮೂಲ್ಯವಾದ ಮತವನ್ನು ಪ್ರತಿಯೊಬ್ಬರು ಹಾಕಲೆಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡ ಕೊಪ್ಪಳ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಶಾರದಾರವರು ಮತದಾರ ಬಾಂದವರಲ್ಲಿ, ಅದರಲ್ಲೂ ವಿಶೇಷವಾಗಿ ಮಹಿಳಾ ಬಂದುಗಳಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ತಾವರಗೇರಾ ಪಟ್ಟಣದ ಪ್ರಮುಖ ಮುಖಂಡರು ಹಾಗೂ ಸರ್ವ ಸದಸ್ಯರು ಮತ್ತು ಕಾರ್ಯಕರ್ತರು ಭಾಗಿಯಾಗಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು..
ವರದಿ – ಸಂಪಾದಕೀಯಾ