ನಿಷ್ಠೆಯಿಂದ ಚುನಾವಣೆ ನಿರ್ವಹಿಸುವುದು ಆಧ್ಯ ಕರ್ಥವ್ಯ.

Spread the love

ನಿಷ್ಠೆಯಿಂದ ಚುನಾವಣೆ ನಿರ್ವಹಿಸುವುದು ಆಧ್ಯ ಕರ್ಥವ್ಯ.

ವಿಜಯನಗರ  ಜಿಲ್ಲೆ ಕೂಡ್ಲಿಗಿ:ಮೆ10 ರಂದು ಜರುಗಲಿರುವ ಚುನಾವಣೆ ಸಂದರ್ಭದಲ್ಲಿ, ಸರ್ವರೂ ತಮ್ಮ ತಮ್ಮ ಕರ್ಥವ್ಯಗಳನ್ನು ಅರಿತು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ಚುನಾವಣಾಧಿಕಾರಿ ಈರಣ್ಣ ಬಿರಾದಾರ ಸಿಬ್ಬಂದಿಗೆ ಸೂಚಿಸಿದರು. ಚುನಾವಣೆಯ ಸಿಬ್ಬಂದಿಯವರಿಗೆ ಅಗತ್ಯ ಸೌಕರ್ಯಗಳನ್ನು ವದಗಿಸಲಾಗುವುದು, ಹಾಗೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಅವರು ಪಟ್ಟಣದ ಸ.ಸಂ.ಪ.ಪೂ.ಕಾಲೇಜ್ ಕೊಠಡಿಗಳಲ್ಲಿ, ಚುನಾವಣೆ ಇಲಾಖೆಯಿಂದ ಏರ್ಪಡಿಸಲಾಗಿದ್ದ. ಚುನಾವಣೆ ಸಿಬ್ಬಂದಿ ಗೆ ತರಬೇತಿ ನೀಡೋ ಸಂದರ್ಭದಲ್ಲಿ, ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದರು. ಚುನಾವಣೆ ಯಶಸ್ವೀಗೊಳ್ಳುವಲ್ಲಿ ಸಿಬ್ಬಂದಿಗಳಾದ ನಿಮ್ಮೆಲ್ಲರ ಪಾತ್ರ ಪ್ರಮುಖವಾಗಿರುತ್ತದೆ, ಇದನ್ನರಿತು ಕರ್ಥವ್ಯ ನಿಷ್ಠೆಯನ್ನು ಪ್ರತಿಯೊಬ್ಬರೂ ಹೊಂದಲೇಬೇಕಿದೆ ಎಂದರು.  ನಂತರ ತರಬೇತುದಾರರು ಸಿಬ್ಬಂದಿಗಳಿಗೆ ತರಬೇತಿ ನೀಡಿದರು, ವಿದ್ಯುನ್ ಮಾನ ಮತಯಂತ್ರ ಬಳಕೆ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಅಣುಕು ಮತದಾನ ಜರುಗಿತು, ಮತದಾನ ಕೇಂದ್ರದಲ್ಲಿ ನಿಯೋಜಿತ ಸಿಬ್ಬಂದಿಯವರು ಪಾಲಿಸಬೇಕಾಗಿರುವದರ ನಿಯಮಗಳ ಕುರಿತು ಅರಿವು ಮೂಡಿಸಲಾಯಿತು.ಮತ ಕೇಂದ್ರದಲ್ಲಿ ಮತದಾನ ಸಂದರ್ಭದಲ್ಲಿ,ಸಿಬ್ಬಂದಿ ತೆಗೆದುಕೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ತಿಳಿಸಲ‍ಾಯಿತು. ತಹಶಿಲ್ದಾರರಾದ ಟಿ.ಜಗದೀಶ, ಸ್ಟಿಪ್ ಸಮಿತಿ ಅಧ್ಯಕ್ಷ ವೈ.ರವಿಕುಮಾರ್,ನೋಡಲ್ ಅಧಿಕಾರಿ ಮಲ್ಲಿಕಾರ್ಜುನ, ಚುನಾಣೆ ಇಲಾಖೆಯಿಂದ ನಿಯೋಜಿತ ಸಿಬ್ಬಂದಿ ಜಗದೀಶ ಚಂದ್ರ ಬೋಸ್, ವೈಧ್ಯಾಧಿಕಾರಿ ಪ್ರದೀಪ್ ಕುಮಾರ್, ನಾಗರಾಜ್ ಕೊಟ್ರಪ್ಪನವರು, ಸಿಡಿಪಿಓ ನಾಗನಗೌಡ ಸೇರಿದಂತೆ ಮತ್ತಿತರರು ಇದ್ದರು. ಆರೋಗ್ಯ ಇಲಾಖೆಯಿಂದ , ತುರ್ತು ಚಿಕಿತ್ಸಾಗಾಗಿ ಅಗತ್ಯ ವ್ಯವಸ್ಥೆ ಮಾಡಲ‍ಲಾಗಿತ್ತು.

ವರದಿ- ವಂದೇ ಮಾತರಂ ವಿ.ಜಿ.ವೃಷಭೇಂದ್ರ.

Leave a Reply

Your email address will not be published. Required fields are marked *