*ಶರಣಪ್ಪ ಸಜ್ಜಿಹೊಲಗೆ ಕೊಪ್ಪಳ ವಕೀಲರ ಸಂಘದಿಂದ ಬೆಂಬಲ*
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರಣಪ್ಪ ಸಜ್ಜೀವಲ ಕೊಪ್ಪಳ ವಕೀಲರ ಸಂಘಕ್ಕೆ ಭೇಟಿಕೊಟ್ಟು ಮತಯಾಚನೆ ಮಾಡಿ ಬೆಂಬಲ ನೀಡುವಂತೆ ವಿನಂತಿ ಮಾಡಿಕೊಂಡರು. ಕೊಪ್ಪಳ ವಕೀಲರ ಸಂಘದಿಂದ ಅಭಿಮಾನ ಪೂರ್ವಕವಾಗಿ ಶರಣಪ್ಪ ಸಜ್ಜೀವಲ ಇವರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ” ಯಾವುದೇ ಪಕ್ಷಗಳು ಸಾಮಾನ್ಯ ಜನರಿಗೆ ಟಿಕೆಟ್ ನೀಡುತ್ತಿಲ್ಲ, ರಾಜಕೀಯಕ್ಕೆ ಸಾಮಾನ್ಯ ಜನ ಎಂಟ್ರಿ ಆಗಲು ಸಾಧ್ಯವಿಲ್ಲ. ಹೀಗಾಗಿ ದುಡ್ಡು ಹಾಕಿ, ದುಡ್ಡು ಮಾಡುವಂತಹ ವ್ಯವಹಾರವಾಗಿದೆ ಈಗಿನ ರಾಜಕಾರಣ. ಇದರಿಂದಾಗಿ ಭ್ರಷ್ಟಾಚಾರ ಎಲ್ಲಾ ಕಡೆ ತುಂಬಿ ತುಳುಕುತ್ತಿದೆ. ನಮ್ಮಂತ ವಕೀಲರು ಸಹ ರಾಜಕಾರಣಕ್ಕೆ ಎಂಟ್ರಿ ಕೊಡುವುದು ತುಂಬಾ ಕಷ್ಟವಾಗಿರುವ ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ಎಲ್ಲರಿಗೂ ರಾಜಕಾರಣಕ್ಕೆ ಆಹ್ವಾನವನ್ನು ನೀಡುತ್ತಿದೆ. ಅಲ್ಲದೆ ಪರಿವರ್ತನೆಯ ಪರ್ವ ಆರಂಭವಾಗಿದ್ದು ಮೇ ಹತ್ತರಂದು ನಾವೆಲ್ಲರೂ ನಮಗೆ ಸಿಕ್ಕಿರುವ ಅವಕಾಶವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ಭ್ರಷ್ಟ ರಾಜಕಾರಣವನ್ನು ಕಿತ್ತುಗೆಯಬೇಕಾಗಿದೆ. ನನ್ನ ವಕೀಲ ಬಂಧುಗಳಾದ ತಾವೆಲ್ಲ ನನ್ನನ್ನು ಬೆಂಬಲಿಸುವ ಮೂಲಕ ನನ್ನ ಈ ಹೋರಾಟವನ್ನು ಯಶಸ್ವಿಗೊಳಿಸ ಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ” ಎಂದು ಬೆಂಬಲಿಸಲು ಕೋರಿದರು.
ವರದಿ- ಸೋಮನಾಥ ಹೆಚ್ ಎಮ್.