Normal
0
false
false
false
EN-US
X-NONE
X-NONE
MicrosoftInternetExplorer4
/* Style Definitions */
table.MsoNormalTable
{mso-style-name:”Table Normal”;
mso-tstyle-rowband-size:0;
mso-tstyle-colband-size:0;
mso-style-noshow:yes;
mso-style-priority:99;
mso-style-qformat:yes;
mso-style-parent:””;
mso-padding-alt:0in 5.4pt 0in 5.4pt;
mso-para-margin-top:0in;
mso-para-margin-right:0in;
mso-para-margin-bottom:10.0pt;
mso-para-margin-left:0in;
line-height:115%;
mso-pagination:widow-orphan;
font-size:11.0pt;
font-family:”Calibri”,”sans-serif”;
mso-ascii-font-family:Calibri;
mso-ascii-theme-font:minor-latin;
mso-fareast-font-family:”Times New Roman”;
mso-fareast-theme-font:minor-fareast;
mso-hansi-font-family:Calibri;
mso-hansi-theme-font:minor-latin;}
ಭಾರತ ವಿಶ್ವ ಗುರುವಾಗಬೇಕೆಂಬ ಸ್ವಾಮಿ ವಿವೇಕಾನಂದರ ಕನಸು ಸಾಕಾರಗೊಳ್ಳಬೇಕಾದರೆ, ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಹಾಗೂ ಯುವ ಜನತೆಗೆ ಉದ್ಯೋಗ ಒದಗಿಸುವ, ರೈತರನ್ನು ಬೆಂಬಲಿಸುವ ಹಾಗೂ ಸಮಾಜದಲ್ಲಿ ಶಾಂತಿ ಮತ್ತು ಸೌರ್ಹಾದತೆಯನ್ನು ಕಾಪಾಡುವ ಸಂವಿಧಾನ ಬದ್ಧ ಸರಕಾರ ರೂಪುಗೊಳ್ಳಬೇಕಾಗಿದೆ. ಮತದಾರರು ಮತದಾನ ಮಹತ್ವವನ್ನು ತಿಳಿಯದೆ ಹೋಗಿರುವುದರಿಂದ ಚುನಾವಣೆಯಲ್ಲಿ ಮತಗಳು ಮಾರಾಟವಾಗಿದೆ. ಭಾರತ ದೇಶದಲ್ಲಿ ಎಲ್ಲರಿಗೂ ತಮ್ಮ ತಮ್ಮ ಮತವನ್ನು ಚಲಾಯಿಸುವ ಹಕ್ಕು ಇದ್ದರೂ, ದೂರದೃಷ್ಟಿಯಿಲ್ಲದೆ ಮತ ಚಲಾಯಿಸುವುದರಿಂದ ಭ್ರಷ್ಟಾಚಾರಿಗಳು, ಅವಿಧ್ಯಾವಂತರು ಹೀಗೆ ಮೌಲ್ಯಗಳಿಲ್ಲದವರು ಅಧಿಕಾರಕ್ಕೆ ಬರುತ್ತಿದ್ದಾರೆ. ಇದನ್ನು ನಾವು ನಿರ್ಣಾಮ ಮಾಡಬೇಕಾಗಿದೆ. ನೆಲ್ಸನ್ ಮಂಡೇಲಾ ಮತ ಚಲಾಯಿಸುವ ಹಕ್ಕಿಗಾಗಿ ಜೈಲುವಾಸ ಅನುಭವಿಸ್ಸಿದ್ದು 27 ವರ್ಷಗಳ ಕಾಲವಾಗಿತ್ತು. ಇನ್ನಾದರೂ ನಾವು ಪ್ರಜ್ಞಾವಂತ ನಾಗರಿಕರಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ದೂರದೃಷ್ಟಿಯಿಂದ ನಿಮ್ಮ ಅಮೂಲ್ಯ ಮತವನ್ನು ದೇಶದ ಹಿತಕ್ಕಾಗಿ ಚಲಾಯಿಸಿ. ಮತ ಮಾರಾಟವಾಗದಿರಲಿ. ಉಚಿತ ಆರೋಗ್ಯ, ಶಿಕ್ಷಣ ಮತ್ತು ಯುವ ಜನತೆಗೆ ಉದ್ಯೋಗ ಒದಗಿಸುವ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಆಮಿರ್ ಬನ್ನೂರು ತಿಳಿಸಿದ್ದಾರೆ.
ವರದಿ- ಸಂಪಾದಕೀಯಾ