ಮಾದವ ನೆಲೆಯ 10ನೇ ತರಗತಿ ಮಕ್ಕಳ ಅಮೋಘ ಸಾಧನೆ,,
ಮುಂದೆ ಗುರು, ಹಿಂದೆ ಗುರಿ ಇದ್ರೆ ಏನಲ್ಲ ಸಾಧನೆ ಮಾಡಬವುದು ಎಂಬುವುದಕ್ಕೆ ಸೂಕ್ತ ಉದಾಹರಣೆಗಳು. ಶಿವಮೊಗ್ಗದ ಮಾದವ ನೆಲೆಯ ಆಶ್ರಮದ ಮಕ್ಕಳ ಸಾಧನೆ ಅಮೋಘವಾದದ್ದು. ವಿದ್ಯಾರ್ಥಿಗಳಲ್ಲಿ ಸತತ ಪರಿಶ್ರಮ, ಅಭ್ಯಾಸ, ಆತ್ಮ ವಿಶ್ವಾಸ ಹಾಗೂ ಛಲ ಇದ್ದಲ್ಲಿ ಈ ಸಾಧನೆಗೆ ಮೂಲ ಕಾರಣ ಎನ್ನಬವುದು. ಜೊತೆಗೆ ಮುಂದಿನ ಸಾಧನೆಗೆ ಇಂತಹ ಮಕ್ಕಳೆ ಪ್ರೇರಣೆಯಾಗಲಿದ್ದಾರೆ. ಹಾಗೂ ಈ ಮಕ್ಕಳು ಪ್ರತಿಯೊಂದು ಕಾರ್ಯಕ್ಷೇತ್ರಗಳಲ್ಲಿ ಸಾಧನೆ ಮಾಡುವಂತೆ ಶುಭಹಾರೈಸೋಣ. ಮಾಧವ ನೆಲೆಯ ಕರಿಯಣ್ಣ ಬಿಲ್ಡಿಂಗ್ ಹತ್ತಿರ, ವಿನೋಬನಗರ, ಶಿವಮೊಗ್ಗ ದ ಮಕ್ಕಳಾದ 1).ಕು. ಪ್ರಿಯಾಂಕ ಶೇಕಡ 83’/. ಪ್ರಥಮ ಭಾಷೆ ಕನ್ನಡದಲ್ಲಿ 125 ಕ್ಕೆ 125 ಹಾಗು 2).ಕು.ಮೋನಿಷ 72’/. ಶೇಕಡಾವಾರು ಈ ವರ್ಷದ sslc ಪರೀಕ್ಷೆಯಲ್ಲಿ ಅನುಕ್ರಮವಾಗಿ ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತಾರೆ. ಎನೇ ಇರಲಿ, ಕಷ್ಟ, ಸುಖ, “ಕನಸುಗಳೊಂದಿಗೆ ಗುರಿ ತಲುಪುವ ಮಾರ್ಗದಲ್ಲಿ, ಶ್ರಮ ಮತ್ತು ಶ್ರದ್ಧೆಗಳಿಂದ ಮುಂದಿನ ವಿಧ್ಯಾಬ್ಯಾಸ ಸಾಗಲೆಂದು ಮಾದವ ನೆಲೆ ಆಶ್ರಮದ ಮುಖ್ಯ ವ್ಯವಸ್ಥಾಪಕರು ಹಾಗೂ ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಹಾರೈಸೋಣ.
ವರದಿ-ಸಂಪಾದಕೀಯಾ